AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19: ಮುಂದಿನ ದಿನಗಳಲ್ಲಿ ನೆಗಡಿಯಂತೆ ಮಕ್ಕಳಿಗೆ ಕೊವಿಡ್ ಕೂಡ ಸಾಮಾನ್ಯ ರೋಗವಾಗಲಿದೆ!

Covid in Children | ಮಕ್ಕಳಲ್ಲಿ ಶೀತ ಹೇಗೆ ಸಾಮಾನ್ಯವಾಗಿರುತ್ತದೋ ಹಾಗೇ ಮುಂಬರುವ ದಿನಗಳಲ್ಲಿ ಕೊರೊನಾ ಸಾಮಾನ್ಯ ರೋಗವಾಗಲಿದೆ ಎಂಬ ಮಾಹಿತಿಯನ್ನು ಸಂಶೋಧನೆಯೊಂದು ಬಯಲು ಮಾಡಿದೆ.

Covid-19: ಮುಂದಿನ ದಿನಗಳಲ್ಲಿ ನೆಗಡಿಯಂತೆ ಮಕ್ಕಳಿಗೆ ಕೊವಿಡ್ ಕೂಡ ಸಾಮಾನ್ಯ ರೋಗವಾಗಲಿದೆ!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 13, 2021 | 1:41 PM

Share

ನವದೆಹಲಿ: ಈಗಾಗಲೇ ಭಾರತದಲ್ಲಿ ಕೊರೊನಾ 3ನೇ ಅಲೆಯ ಆತಂಕ ಎದುರಾಗಿದೆ. ಇನ್ನೂ ದೇಶದಲ್ಲಿ ಕೊವಿಡ್ ಅಟ್ಟಹಾಸ ಕಡಿಮೆಯಾಗಿಲ್ಲ. ನಿನ್ನೆ ಒಂದೇ ದಿನ ಭಾರತದಲ್ಲಿ 40,120 ಕೊರೊನಾ ಕೇಸುಗಳು (Coronavirus Cases) ಪತ್ತೆಯಾಗಿವೆ. ಈ ನಡುವೆ ಕೊರೊನಾ (COVID-19) ನಿಯಂತ್ರಿಸಲು ಭಾರತದಲ್ಲಿ ಈಗಾಗಲೇ 5 ಲಸಿಕೆಗಳು (Covid Vaccines) ಲಭ್ಯ ಇವೆ. ಆದರೆ, ಯಾವ ಲಸಿಕೆಯಿಂದಲೂ ಈ ಕೊರೊನಾ ವೈರಸ್ ಜಗತ್ತಿನಿಂದ ಶಾಶ್ವತವಾಗಿ ನಾಶವಾಗಲು ಸಾಧ್ಯವಿಲ್ಲ, ಮಕ್ಕಳಲ್ಲಿ ಶೀತ ಹೇಗೆ ಸಾಮಾನ್ಯವಾಗಿರುತ್ತದೋ ಹಾಗೇ ಮುಂಬರುವ ದಿನಗಳಲ್ಲಿ ಕೊರೊನಾ ಸಾಮಾನ್ಯ ರೋಗವಾಗಲಿದೆ ಎಂಬ ಮಾಹಿತಿಯನ್ನು ಸಂಶೋಧನೆಯೊಂದು ಬಯಲು ಮಾಡಿದೆ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊವಿಡ್ ವಯಸ್ಕರಿಗಿಂತಲೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದೀಗ ಕೊರೊನಾ ರೂಪಾಂತರಿ ವೈರಸ್​ಗಳು ಕೂಡ ಕಾಣಿಸಿಕೊಳ್ಳಲಾರಂಭಿಸಿದೆ. ಭಾರತಕ್ಕೆ ಡೆಲ್ಟಾ ರೂಪಾಂತರಿ ವೈರಸ್ ಕಾಲಿಟ್ಟಿದ್ದು, ಇನ್ನಷ್ಟು ಆತಂಕ ಎದುರಾಗಿದೆ. ಇನ್ನು ಮುಂದೆ ಪೊಲಿಯೋ ಲಸಿಕೆಯಂತೆ ಮಕ್ಕಳಿಗೆ ಕೊರೊನಾ ಲಸಿಕೆಯೂ ಸಾಮಾನ್ಯವಾಗುವ ಸಾಧ್ಯತೆಯಿದೆ. ಹಾಗೇ ನೆಗಡಿಯಂತೆ ಕೊವಿಡ್ ಕೂಡ ಸಾಮಾನ್ಯ ರೋಗ ಲಕ್ಷಣವಾಗಿ ಮುಂದುವರೆಯಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

18 ವರ್ಷ ಮೇಲ್ಪಟ್ಟವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಅಥವಾ ಅವರು ಕೊರೊನಾ ಲಸಿಕೆ ಪಡೆದಿರುತ್ತಾರೆ. ಹೀಗಾಗಿ, ಅವರಿಗಿಂತಲೂ ಮಕ್ಕಳಲ್ಲಿ ಕೊವಿಡ್ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಹೀಗಾಗಿ, ಮಕ್ಕಳಿಗೆ ಕೊರೊನಾ ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ. 1889ರಿಂದ 1890ರ ಅವಧಿಯಲ್ಲಿ ಕಾಣಿಸಿಕೊಂಡ ರಷ್ಯನ್ ಫ್ಲೂದಿಂದ 18 ವರ್ಷದೊಳಗಿನ ಹಾಗೂ 70 ವರ್ಷ ಮೇಲ್ಪಟ್ಟ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ನಂತರ ಅದು ಸಾಮಾನ್ಯ ರೋಗದಂತಾಯಿತು. ಅದೇ ರೀತಿ ಕೊವಿಡ್ ಕೂಡ ಮುಂದಿನ ದಿನಗಳಲ್ಲಿ ಸಾಮಾನ್ಯ ರೋಗವಾಗಲಿದೆ.

ಭಾರತದಲ್ಲಿ ಈಗಾಗಲೇ ಕೊರೊನಾ 3ನೇ ಅಲೆ ಶುರುವಾಗಿದೆ ಎಂದು ತಜ್ಞರು ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಮೂರನೇ ಅಲೆಯಿಂದ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಬೆಂಗಳೂರೊಂದನ್ನೇ ಪರಿಗಣಿಸಿದರೆ 5 ದಿನದಲ್ಲಿ 9 ವರ್ಷದೊಳಗಿನ 106 ಮತ್ತು 9ರಿಂದ 19 ವರ್ಷದೊಳಗಿನ 136 ಜನರು ಸೇರಿ ಒಟ್ಟು 242 ಮಕ್ಕಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ, ಮಕ್ಕಳಿಗೆ ಭವಿಷ್ಯದಲ್ಲೂ ಕೊರೊನಾ ಭೀತಿ ತಪ್ಪಿದ್ದಲ್ಲ.

ಇದನ್ನೂ ಓದಿ: Delta Plus Variant: ಮುಂಬೈನಲ್ಲಿ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಬಲಿ; ಎರಡು ಡೋಸ್​ ಕೊರೊನಾ ಲಸಿಕೆ ಪಡೆದ ವೃದ್ಧೆ ಸಾವು

Coronavirus cases in India: ದೇಶದಲ್ಲಿ 40,120 ಹೊಸ ಕೊವಿಡ್ ಪ್ರಕರಣ ಪತ್ತೆ, 585 ಮಂದಿ ಸಾವು

(COVID-19 may become childhood disease over the years like common cold Study Reveals)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ