93 ವರ್ಷದ ನಿವೃತ್ತ ವೃದ್ಧನ ಶವ ರೆಫ್ರಿಜರೇಟರ್ನಲ್ಲಿ ತಣ್ಣಗೆ ಮಲಗಿತ್ತು! ಕಾರಣ ಆಘಾತಕಾರಿ…
retired nonagenarian: ಮೂರು ದಿನಗಳ ಹಿಂದೆ ವೃದ್ಧ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದರೆ ತಾತನ ಪಿಂಚಣಿ ಹಣ ನಿಂತುಹೋಗುವ ಭೀತಿಯಿಂದ ಶವವನ್ನು ಮೊಮ್ಮಗ ರೆಫ್ರಿಜರೇಟರ್ನಲ್ಲಿಟ್ಟಿರಬಹುದು ಎಂಬ ಅನುಮಾನದ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹೈದರಾಬಾದ್: ತೆಲಂಗಾಣದಲ್ಲಿ ಕೋಲ್ಡ್ ಬ್ಲಡೆಡ್ ಆಘಾತಕಾರಿ ಕುಕೃತ್ಯವೊಂದು ಬೆಳಕಿಗೆ ಬಂದಿದೆ. 93 ವರ್ಷದ ವೃದ್ಧರೊಬ್ಬರ ಶವ ರೆಫ್ರಿಜರೇಟರ್ನಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಮೊಮ್ಮಗ ತನ್ನ ತಾತನ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಹಣ ಇಲ್ಲದೆ, ಆತನ ಶವವನ್ನು ಫ್ರಿಜ್ನಲ್ಲಿಟ್ಟಿದ್ದಾನೆ. ವಾರಂಗಲ್ ಜಿಲ್ಲೆ ಪಾರ್ಕಾಲಾದಲ್ಲಿ (Parkala in Warangal) ಈ ಪ್ರಕರಣ ಬೆಳಕಿಗೆ ಬಂದಿದೆ. ನೆರೆಹೊರೆಯವರು ದುರ್ಗಂಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಆ ಮನೆಗೆ ಬಂದು ತಪಾಸಣೆ ನಡೆಸಿದಾಗ ರೆಫ್ರಿಜರೇಟರ್ನಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದೆ.
ತಾತನ ಅಂತ್ಯಕ್ರಿಯೆ ಮಾಡಲು ಹಣ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅವರ ದೇಹವನ್ನು ರೆಫ್ರಿಜರೇಟರ್ನಲ್ಲಿಟ್ಟಿದ್ದೆ: ಮೃತ ವ್ಯಕ್ತಿಯು ನಿವೃತ್ತ ಉದ್ಯೋಗಿಯಾಗಿದ್ದು, ತನ್ನ ಮೊಮ್ಮಗನ ಜೊತೆ ಆ ಮನೆಯಲ್ಲಿ ವಾಸವಿದ್ದರು. ಇಬ್ಬರಿಗೂ ಆ ವೃದ್ಧ ವ್ಯಕ್ತಿಯ ಪಿಂಚಣಿಯೇ ಆಧಾರವಾಗಿತ್ತು. ನನ್ನ ತಾತ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದೆ ಇತ್ತೀಚೆಗೆ ಕೊನೆಯುಸಿರೆಳೆದಿದ್ದರು.
ಬಳಿಕ ನಾನು ತಾತನ ದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ, ರೆಫ್ರಿಜರೇಟರ್ನಲ್ಲಿ ಇಟ್ಟಿದ್ದೆ. ಆತನ ಅಂತ್ಯಕ್ರಿಯೆ ನೆರವೇರಿಸಲು ನನ್ನ ಬಳಿ ಸಾಕಷ್ಟು ಹಣ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅವರ ದೇಹವನ್ನು ರೆಫ್ರಿಜರೇಟರ್ನಲ್ಲಿಟ್ಟಿದ್ದೆ ಎಂದು ಪೊಲೀಸರ ಸಮ್ಮುಖದಲ್ಲಿ 23 ವರ್ಷ ವಯಸ್ಸಿನ ಮೊಮ್ಮಗ ನಿಖಿಲ್ ಹೇಳಿದ್ದಾನೆ.
ಮೂರು ದಿನಗಳ ಹಿಂದೆ ವೃದ್ಧ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದರೆ ತಾತನ ಪಿಂಚಣಿ ಹಣ ನಿಂತುಹೋಗುವ ಭೀತಿಯಿಂದ ಶವವನ್ನು ಮೊಮ್ಮಗ ರೆಫ್ರಿಜರೇಟರ್ನಲ್ಲಿಟ್ಟಿರಬಹುದು ಎಂಬ ಅನುಮಾನದ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ಕೆಲಸಕ್ಕಿದ್ದವನು ಮಂಡ್ಯದಲ್ಲಿ ಶವವಾಗಿ ಪತ್ತೆ, ಊರಿಗೆ ಬರ್ತೀನಿ ಅಂದಿದ್ದವನ ಮೃತದೇಹ ಸಿಕ್ತು ನದಿಯಲ್ಲಿ
(retired nonagenarian man Body Found In refrigerator in Parkala in Warangal In Telangana)
Published On - 11:36 am, Fri, 13 August 21