Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟವಾದ ಬಳಿಕ ಇನ್ಸುಲಿನ್ ಲೆವೆಲ್ ಜಾಸ್ತಿಯಾಗುತ್ತಿದೆಯೇ? ಚಿಂತಿಸಬೇಡಿ!

ಇತ್ತೀಚಿನ ಅಧ್ಯಯನವೊಂದರಲ್ಲಿ, ಊಟದ ನಂತರ ಅದರಲ್ಲೂ ವಿಶೇಷವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದ ನಂತರ ಇನ್ಸುಲಿನ್ ಮಟ್ಟದಲ್ಲಿ ಹೆಚ್ಚಾಗುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬ ನಂಬಿಕೆ ಸುಳ್ಳು ಎಂದು ಕಂಡುಬಂದಿದೆ.

ಊಟವಾದ ಬಳಿಕ ಇನ್ಸುಲಿನ್ ಲೆವೆಲ್ ಜಾಸ್ತಿಯಾಗುತ್ತಿದೆಯೇ? ಚಿಂತಿಸಬೇಡಿ!
ಇನ್ಸುಲಿನ್
Follow us
ಸುಷ್ಮಾ ಚಕ್ರೆ
|

Updated on: Dec 15, 2023 | 6:33 PM

ಮಧುಮೇಹ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ನಾನಾ ರೀತಿಯ ಬೇರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಊಟವಾದ ನಂತರ ನಿಮ್ಮ ರಕ್ತದಲ್ಲಿನ ಇನ್ಸುಲಿನ್ ಮಟ್ಟ ಜಾಸ್ತಿಯಾಗುತ್ತಿದೆಯೇ? ಅದಕ್ಕೆ ನೀವಿನ್ನು ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ, ಇತ್ತೀಚಿನ ಅಧ್ಯಯನವೊಂದರಲ್ಲಿ, ಊಟದ ನಂತರ ಅದರಲ್ಲೂ ವಿಶೇಷವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದ ನಂತರ ಇನ್ಸುಲಿನ್ ಮಟ್ಟದಲ್ಲಿ ಹೆಚ್ಚಾಗುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬ ನಂಬಿಕೆ ಸುಳ್ಳು ಎಂದು ಕಂಡುಬಂದಿದೆ.

ಇನ್ಸುಲಿನ್ ಸ್ಪೈಕ್‌ಗಳು ತೂಕ ಹೆಚ್ಚಾಗಲು ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತವೆ ಎನ್ನಲಾಗುತ್ತದೆ. ಈ ಸಮಸ್ಯೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ತೊಂದರೆ ಉಂಟುಮಾಡುತ್ತವೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತಿತ್ತು.

ಇದನ್ನೂ ಓದಿ: ಡಯಾಬಿಟಿಸ್ ಇರುವವರು ಓಡಬಾರದಾ? ಅಸಲಿ ಸಂಗತಿ ಇಲ್ಲಿದೆ

ಆದರೆ, ಇದಕ್ಕೆ ವಿರುದ್ಧವಾಗಿ, ಲುನೆನ್‌ಫೆಲ್ಡ್-ಟಾನೆನ್‌ಬಾಮ್ ಸಂಶೋಧನಾ ಸಂಸ್ಥೆಯ ಡಾ. ರವಿ ರತ್ನಾಕರನ್ ನೇತೃತ್ವದ ಸಿನೈ ಹೆಲ್ತ್‌ನ ಸಂಶೋಧಕರು, ಇನ್ಸುಲಿನ್ ಹೆಚ್ಚಳವು ಪಾಸಿಟಿವ್ ಆರೋಗ್ಯ ಫಲಿತಾಂಶಗಳ ಸೂಚಕವಾಗಿರಬಹುದು ಎಂದು ಕಂಡುಹಿಡಿದಿದ್ದಾರೆ. ಈ ಸಂಶೋಧನೆಗಳು ವೈದ್ಯಕೀಯ ತಜ್ಞರು ಮತ್ತು ಸಾರ್ವಜನಿಕರಲ್ಲಿ ಚಯಾಪಚಯ ಮತ್ತು ತೂಕ ನಿರ್ವಹಣೆಯಲ್ಲಿ ಇನ್ಸುಲಿನ್ ಪಾತ್ರದ ಗ್ರಹಿಕೆಯನ್ನು ಮರುರೂಪಿಸುತ್ತವೆ ಎಂದು ಡಾ. ರತ್ನಾಕರನ್ ಭರವಸೆ ವ್ಯಕ್ತಪಡಿಸಿದ್ದಾರೆ. ಆಹಾರ ಸೇವಿಸಿದ ನಂತರದ ಇನ್ಸುಲಿನ್ ಹೆಚ್ಚಳದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚು ಸಕ್ಕರೆ ತಿನ್ನುವುದು ಮಾತ್ರ ರಕ್ತದ ಅಧಿಕ ಸಕ್ಕರೆಯ ಅಂಶಕ್ಕೆ ಕಾರಣವಾಗಬಹುದು ಎಂಬುದು ಜನರ ನಂಬಿಕೆ. ಆದರೆ, ಇದು ನೂರಕ್ಕೆ ನೂರರಷ್ಟು ಸತ್ಯವಲ್ಲ. ಸಂಸ್ಕರಿಸಿದ ಆಹಾರಗಳು, ತಂಪು ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿನ ಹೆಚ್ಚುವರಿ ಸಕ್ಕರೆಯನ್ನು ನೇರವಾಗಿ ಸೇವಿಸುವುದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ ಎಂಬುದು ಸತ್ಯ. ಇವೆಲ್ಲವೂ ನಿಮ್ಮ ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತವೆ, ಇದು ಮಧುಮೇಹಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಸಕ್ಕರೆ ತಿನ್ನದವರಿಗೂ ಮಧುಮೇಹ ಬರುತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ

ಟೈಪ್ 1 ಮಧುಮೇಹವು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ಈ ರೀತಿಯ ಮಧುಮೇಹವು ಸಕ್ಕರೆ ಸೇವನೆಗೆ ಸಂಬಂಧಿಸಿದ್ದಲ್ಲ. ಇದು ಸಾಮಾನ್ಯವಾಗಿ ಬಾಲ್ಯ ಅಥವಾ ಹದಿಹರೆಯದಲ್ಲಿ ಬೆಳವಣಿಗೆಯಾಗುತ್ತದೆ.

ನಿಮ್ಮ ಅನುವಂಶಿಕ ಪ್ರವೃತ್ತಿಯು ಮಧುಮೇಹದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಫ್ಯಾಮಿಲಿಯಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ ನೀವು ಸಕ್ಕರೆ ಸೇವಿಸದಿದ್ದರೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೆಚ್ಚುವರಿ ಸಕ್ಕರೆ ಸೇವನೆಯಿಂದ ಟೈಪ್ 2 ಮಧುಮೇಹ ಹೆಚ್ಚಾಗಬಹುದು. ಆದರೆ ಅದಕ್ಕೆ ಇದೊಂದೇ ಕಾರಣವಲ್ಲ. ಜೀವನಶೈಲಿಯ ಅಂಶಗಳಾದ ಕಳಪೆ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಬೊಜ್ಜು ಕೂಡ ಇದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೆನೆಟಿಕ್ಸ್ ಟೈಪ್ 2 ಡಯಾಬಿಟಿಸ್‌ಗೆ ನಿಮ್ಮ ಒಳಗಾಗುವಿಕೆಯನ್ನು ಹೆಚ್ಚಿಸಬಹುದು.

ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ