AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಕರೆ ತಿನ್ನದವರಿಗೂ ಮಧುಮೇಹ ಬರುತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ

ಮಧುಮೇಹಿಗಳು ಹೆಚ್ಚು ಸಿಹಿತಿಂಡಿಗಳು, ಸಕ್ಕರೆ ಅಂಶಗಳಿರುವ ಪದಾರ್ಥಗಳನ್ನು ತಿನ್ನಬಾರದೆಂದು ವೈದ್ಯರು ಹೇಳುತ್ತಾರೆ. ಆದರೆ, ಸಕ್ಕರೆಯನ್ನು ಸೇವಿಸದ ಜನರಿಗೆ ಕೂಡ ಮಧುಮೇಹದ ಅಪಾಯ ಇದೆಯೇ? ಎಂದು ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ಸಕ್ಕರೆ ತಿನ್ನದವರಿಗೂ ಮಧುಮೇಹ ಬರುತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ
ಮಧುಮೇಹImage Credit source: iStock
ಸುಷ್ಮಾ ಚಕ್ರೆ
|

Updated on: Oct 28, 2023 | 12:05 PM

Share

ಭಾರತದಲ್ಲಿ 70 ದಶಲಕ್ಷಕ್ಕೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಧುಮೇಹದ ಪ್ರಕರಣಗಳಿವೆ. ಹೆಚ್ಚು ಸಕ್ಕರೆ ತಿನ್ನುವುದು ಮಾತ್ರ ರಕ್ತದ ಅಧಿಕ ಸಕ್ಕರೆಯ ಅಂಶಕ್ಕೆ ಕಾರಣವಾಗಬಹುದು ಎಂಬುದು ಜನರ ನಂಬಿಕೆ. ಆದರೆ, ಇದು ನೂರಕ್ಕೆ ನೂರರಷ್ಟು ಸತ್ಯವಲ್ಲ. ಸಂಸ್ಕರಿಸಿದ ಆಹಾರಗಳು, ತಂಪು ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿನ ಹೆಚ್ಚುವರಿ ಸಕ್ಕರೆಯನ್ನು ನೇರವಾಗಿ ಸೇವಿಸುವುದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ ಎಂಬುದು ಸತ್ಯ. ಇವೆಲ್ಲವೂ ನಿಮ್ಮ ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತವೆ, ಇದು ಮಧುಮೇಹಕ್ಕೆ ಕಾರಣವಾಗಬಹುದು. ಆದರೆ, ಅತಿಯಾದ ಸಕ್ಕರೆ ಸೇವನೆಯಿಲ್ಲದೆ ಕೂಡ ಮಧುಮೇಹ ಬರುತ್ತದೆ ಎಂಬುದು ನಿಮಗೆ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಧುಮೇಹಿಗಳು ಹೆಚ್ಚು ಸಿಹಿತಿಂಡಿಗಳು, ಸಕ್ಕರೆ ಅಂಶಗಳಿರುವ ಪದಾರ್ಥಗಳನ್ನು ತಿನ್ನಬಾರದೆಂದು ವೈದ್ಯರು ಹೇಳುತ್ತಾರೆ. ಆದರೆ, ಸಕ್ಕರೆಯನ್ನು ಸೇವಿಸದ ಜನರಿಗೆ ಕೂಡ ಮಧುಮೇಹದ ಅಪಾಯ ಇದೆಯೇ? ಎಂದು ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ಟೈಪ್ 1 ಮಧುಮೇಹವು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ಈ ರೀತಿಯ ಮಧುಮೇಹವು ಸಕ್ಕರೆ ಸೇವನೆಗೆ ಸಂಬಂಧಿಸಿದ್ದಲ್ಲ. ಇದು ಸಾಮಾನ್ಯವಾಗಿ ಬಾಲ್ಯ ಅಥವಾ ಹದಿಹರೆಯದಲ್ಲಿ ಬೆಳವಣಿಗೆಯಾಗುತ್ತದೆ.

ಇದನ್ನೂ ಓದಿ: ಡಯಾಬಿಟಿಸ್, ಹೃದಯದ ಸಮಸ್ಯೆಯನ್ನು ನಿಮ್ಮ ಪಾದದಿಂದಲೇ ತಿಳಿಯಬಹುದು!

ನಿಮ್ಮ ಅನುವಂಶಿಕ ಪ್ರವೃತ್ತಿಯು ಮಧುಮೇಹದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಫ್ಯಾಮಿಲಿಯಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ ನೀವು ಸಕ್ಕರೆ ಸೇವಿಸದಿದ್ದರೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೆಚ್ಚುವರಿ ಸಕ್ಕರೆ ಸೇವನೆಯಿಂದ ಟೈಪ್ 2 ಮಧುಮೇಹ ಹೆಚ್ಚಾಗಬಹುದು. ಆದರೆ ಅದಕ್ಕೆ ಇದೊಂದೇ ಕಾರಣವಲ್ಲ. ಜೀವನಶೈಲಿಯ ಅಂಶಗಳಾದ ಕಳಪೆ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಬೊಜ್ಜು ಕೂಡ ಇದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೆನೆಟಿಕ್ಸ್ ಟೈಪ್ 2 ಡಯಾಬಿಟಿಸ್‌ಗೆ ನಿಮ್ಮ ಒಳಗಾಗುವಿಕೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮಧುಮೇಹಿಗಳಿಗೆ ಬೇಲದ ಹಣ್ಣಿನ ಶರಬತ್ ಕುಡಿಯುವುದರಿಂದ ಏನು ಉಪಯೋಗ?

ಸಕ್ಕರೆ ಸೇವನೆ ಮತ್ತು ಮಧುಮೇಹದ ನಡುವಿನ ಸಂಬಂಧವು ಸಂಕೀರ್ಣವಾಗಿದೆ. ಅಧಿಕ ಸಕ್ಕರೆಗಳನ್ನು ಹೊಂದಿರುವ ಆಹಾರಗಳು ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು. ಇದು ಟೈಪ್ 2 ಮಧುಮೇಹಕ್ಕೆ ಅಪಾಯಕಾರಿ ಅಂಶಗಳಾಗಿವೆ. ಆದರೆ, ಬಹಳಷ್ಟು ಸಕ್ಕರೆಯನ್ನು ಸೇವಿಸುವ ಪ್ರತಿಯೊಬ್ಬರಿಗೂ ಮಧುಮೇಹ ಉಂಟಾಗುವುದಿಲ್ಲ. ಮಧುಮೇಹ ರೋಗ ಹೊಂದಿರುವ ಕೆಲವರು ಅತಿಯಾದ ಸಕ್ಕರೆ ಸೇವನೆ ಮಾಡುವುದಿಲ್ಲ. ಆದರೂ ಅವರಿಗೆ ಆ ರೋಗ ಬಂದಿರುತ್ತದೆ.

ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇದು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ನಿಮ್ಮ ತೂಕವನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಅತಿಯಾದ ಸಕ್ಕರೆ ಸೇವನೆಯು ಮಧುಮೇಹವನ್ನು ಹೆಚ್ಚಿಸುವ ಅಪಾಯಕ್ಕೆ ಕಾರಣವಾಗಬಹುದು. ಸಕ್ಕರೆಯ ಸೇವನೆಯನ್ನು ಲೆಕ್ಕಿಸದೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!