Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ

| Updated By: ಸುಷ್ಮಾ ಚಕ್ರೆ

Updated on: Jan 27, 2022 | 2:34 PM

Acidity Home Remedies: 'ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ' ಎಂಬ ಗಾದೆಯಂತೆ ನಾವು ನಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು

Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ
ಸಾಂಕೇತಿಕ ಚಿತ್ರ
Follow us on

ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ನಮ್ಮ ಆರೋಗ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಗೇ, ಆಮ್ಲೀಯತೆ (Acidity) ಮತ್ತು ಅಜೀರ್ಣದಂತಹ (Digestion Problem)ನಂತಹ ಸಮಸ್ಯೆಗಳನ್ನು ದೂರವಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಸರಿಯಾದ ನಿದ್ರೆ ಮತ್ತು ಒತ್ತಡದ ಸಮಸ್ಯೆಯಿಂದ ಈ ಸಮಸ್ಯೆಗಳು ನಮಗೆ ಗೊತ್ತಾಗುವ ಮೊದಲೇ ಉಲ್ಬಣಗೊಳ್ಳುತ್ತವೆ. ಈ ಸಮಸ್ಯೆಗಳಿಂದ ದೂರವಾಗಲು ನಾವು ಮಾತ್ರೆ, ಔಷಧಿಯ ಮೊರೆ ಹೋಗುತ್ತೇವೆ. ಹೀಗೆ ನಿರಂತರವಾಗಿ ಆ್ಯಂಟಾಸಿಡ್​ಗಳನ್ನು ಸೇವಿಸುವುದರಿಂದ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಆಯುರ್ವೇದ ತಜ್ಞ ಡಾ. ಡಿಕ್ಸಾ ಭಾವಸರ್ ಹೇಳಿದ್ದಾರೆ. ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಮ್ಲೀಯತೆ ಮತ್ತು ಅಜೀರ್ಣವನ್ನು ತಡೆಯಲು ಸಹಾಯಕವಾದ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.

“ರೋಗಕ್ಕೆ ಚಿಕಿತ್ಸೆ ನೀಡುವ ಮೊದಲ ಹೆಜ್ಜೆಯೆಂದರೆ ಆ ರೋಗ ಬಾರದಂತೆ ತಡೆಗಟ್ಟುವುದು. ‘ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ’ ಎಂಬ ಗಾದೆಯಂತೆ ನಾವು ನಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎಂದು ಅವರು ಹೇಳಿದ್ದಾರೆ.

ಡಾ. ಭಾವಸರ್ ಶಿಫಾರಸು ಮಾಡಿದ ಆಯುರ್ವೇದ ಪರಿಹಾರಗಳು ಇಲ್ಲಿವೆ.
– ನಿಮ್ಮ ಊಟದಲ್ಲಿ ಅತಿಯಾದ ಮಸಾಲೆ, ಹುಳಿ, ಉಪ್ಪು, ಫ್ರಿಜ್​ನಲ್ಲಿ ಬಹುಕಾಲ ಇಟ್ಟ, ಕರಿದ ಆಹಾರ ಮತ್ತು ಫಾಸ್ಟ್​ ಫುಡ್​ ಅನ್ನು ಸೇವಿಸುವುದನ್ನು ಕಡಿಮೆ ಮಾಡಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿದ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚು ಸೇವಿಸಿ.

– ಊಟದ ಸಮಯದಲ್ಲಿ ಅತಿಯಾಗಿ ತಿನ್ನಬೇಡಿ. ನೀವೇ ಸಣ್ಣ ಭಾಗಗಳನ್ನಾಗಿ ಮಾಡಿಕೊಂಡು ಆಗಾಗ ಆಹಾರ ಸೇವಿಸಿ. ಹುಳಿ ಹಣ್ಣುಗಳಿಂದ ದೂರವಿರಲು ಪ್ರಯತ್ನಿಸಿ.

– ಹೆಚ್ಚು ಗಂಟೆಗಳ ಕಾಲ ಹಸಿವಿನಿಂದ ಇದ್ದರೆ ಆ್ಯಸಿಡಿಟಿ ಉಂಟಾಗುತ್ತದೆ. ಡಯಟ್ ಹೆಸರಿನಲ್ಲಿ ಊಟವನ್ನು ಬಿಟ್ಟುಬಿಡಬೇಡಿ. ಅನಿಯಮಿತ ಆಹಾರ ಸೇವನೆಯನ್ನು ತಪ್ಪಿಸಿ ಮತ್ತು ಬೇಗನೆ ಊಟ ಮಾಡಲು ಪ್ರಯತ್ನಿಸಿ.

– ಹೆಚ್ಚು ಪ್ರಮಾಣದ ಬೆಳ್ಳುಳ್ಳಿ, ಉಪ್ಪು, ಎಣ್ಣೆ, ಮೆಣಸಿನಕಾಯಿ ಇತ್ಯಾದಿಗಳನ್ನು ಹೊಂದಿರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ. ಮಾಂಸಾಹಾರವನ್ನೂ ತ್ಯಜಿಸುವುದು ಉತ್ತಮ.

– ಆಹಾರ ಸೇವಿಸಿದ ತಕ್ಷಣ ಮಲಗುವುದನ್ನು ತಪ್ಪಿಸಿ. ತಿಂದ ಆಹಾರ ಸ್ವಲ್ಪ ಜೀರ್ಣವಾಗಲು ಅವಕಾಶ ನೀಡಿ.

– ಧೂಮಪಾನ, ಮದ್ಯಪಾನ, ಚಹಾ, ಕಾಫಿ ಮತ್ತು ಆಸ್ಪಿರಿನ್ ಮಾದರಿಯ ಔಷಧಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ.

– ಒತ್ತಡದಿಂದ ಸದಾ ದೂರವಿರಿ.

ಇದರ ಜೊತೆಗೆ ಅಜೀರ್ಣ ಮತ್ತು ಆಮ್ಲೀಯತೆಯನ್ನು ತಡೆಗಟ್ಟಲು ಕೆಲವು ಆಯುರ್ವೇದ ಆಹಾರ ಪದ್ಧತಿಗಳನ್ನು ಸಹ ಡಾ. ಭಾವ್‌ಸರ್ ಸೂಚಿಸಿದ್ದಾರೆ. ಅವುಗಳೆಂದರೆ…

– ದಿನವೂ ಕೊತ್ತಂಬರಿ ನೀರು (ಕಷಾಯ) ಸೇವಿಸಿ.
– ಊಟದ ನಂತರ ಅರ್ಧ ಚಮಚದಷ್ಟು ಸೋಂಪಿನ ಕಾಳುಗಳನ್ನು ಅಗಿಯಿರಿ.
– ಬೆಳಿಗ್ಗೆ ಮೊದಲು ತೆಂಗಿನ ನೀರು (ಎಳನೀರು) ಕುಡಿಯಿರಿ.
– ಮಧ್ಯಾಹ್ನ ಸಬ್ಬಸಿಗೆ ಸೊಪ್ಪಿನ ಜ್ಯೂಸ್ ಕುಡಿಯಿರಿ. ಇದಕ್ಕೆ ಸಿಹಿಗಾಗಿ ನೀವು ಕಲ್ಲು ಸಕ್ಕರೆಯನ್ನು ಸೇರಿಸಬಹುದು.
– ಒಣದ್ರಾಕ್ಷಿಯನ್ನು ರಾತ್ರಿ ನೆನೆಸಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ.
– ಮಲಗುವ ವೇಳೆಗೆ 1 ಚಮಚ ಹಸುವಿನ ತುಪ್ಪದೊಂದಿಗೆ ಉಗುರುಬೆಚ್ಚಗಿನ ಹಾಲನ್ನು ಸೇವಿಸಿ.

(ಸೂಚನೆ: ಈ ಸಲಹೆಗಳು ಡಾ. ಡಾ. ಡಿಕ್ಸಾ ಭಾವಸರ್ ಅವರ ಶಿಫಾರಸಾಗಿದ್ದು, ನಿಮ್ಮ ವೈದ್ಯರ ಬಳಿ ಸಲಹೆ ಪಡೆದು ಇವನ್ನು ಅನುಸರಿಸಿ)

ಇದನ್ನೂ ಓದಿ: Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!

Health Tips: ನೀವು ಕಾಫಿ, ಜ್ಯೂಸ್​ ಪ್ರಿಯರಾ?; ಪಾನೀಯ ಸೇವಿಸುವಾಗ ಈ 5 ತಪ್ಪನ್ನು ಎಂದೂ ಮಾಡಬೇಡಿ!