AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಭಯ, ಚಿಂತೆ, ಒತ್ತಡಕ್ಕೆ ಇಲ್ಲಿದೆ ಮುಕ್ತಿ, ಡಾ. ನವೀನ್ ಸಲಹೆ ಏನು?

ಆತಂಕ, ಭಯ, ಚಿಂತೆ, ಒತ್ತಡ ಬರದಿರುವ ಮನುಷ್ಯನೇ ಇಲ್ಲ. ಒಂದಲ್ಲಾ ಒಂದು ಸಂದರ್ಭಗಳಲ್ಲಿ ನಮಗೆ ಇದರ ಅನುಭವ ಆಗಿರುತ್ತದೆ. ಮಕ್ಕಳಿಗೆ ಪರೀಕ್ಷೆ ಭಯ, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಹೀಗೆ ನೂರಾರು ಕಾರಣಗಳಿಂದ ನಮ್ಮ ನೆಮ್ಮದಿ ದೂರವಾಗಿ ಚಿಂತೆ ಆರಂಭವಾಗುತ್ತದೆ. ಇದಕ್ಕೆ ಕೆಲವರು ವೈದ್ಯರ ಬಳಿ ಓಡುತ್ತಾರೆ. ಅನೇಕ ರೀತಿಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಆದರೆ ಇವುಗಳನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಈ ಮಾತು ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ನಿಜ. ಹಾಗಾದರೆ ಇವುಗಳನ್ನು ಕಡಿಮೆ ಮಾಡುವುದು ಹೇಗೆ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

Health Tips: ಭಯ, ಚಿಂತೆ, ಒತ್ತಡಕ್ಕೆ ಇಲ್ಲಿದೆ ಮುಕ್ತಿ, ಡಾ. ನವೀನ್ ಸಲಹೆ ಏನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 10, 2024 | 11:31 AM

Share

ಜೀವನದಲ್ಲಿ ಆತಂಕ, ಭಯ, ಚಿಂತೆ, ಒತ್ತಡ ಬರದಿರುವ ಮನುಷ್ಯನೇ ಇಲ್ಲ. ಒಂದಲ್ಲಾ ಒಂದು ಸಂದರ್ಭಗಳಲ್ಲಿ ನಮಗೆ ಇದರ ಅನುಭವ ಆಗಿರುತ್ತದೆ. ಮಕ್ಕಳಿಗೆ ಪರೀಕ್ಷೆ ಭಯ, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಹೀಗೆ ನೂರಾರು ಕಾರಣಗಳಿಂದ ನಮ್ಮ ನೆಮ್ಮದಿ ದೂರವಾಗಿ ಚಿಂತೆ ಆರಂಭವಾಗುತ್ತದೆ. ಇದಕ್ಕೆ ಕೆಲವರು ವೈದ್ಯರ ಬಳಿ ಓಡುತ್ತಾರೆ. ಅನೇಕ ರೀತಿಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಆದರೆ ಇವುಗಳನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಈ ಮಾತು ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ನಿಜ. ಹಾಗಾದರೆ ಇವುಗಳನ್ನು ಕಡಿಮೆ ಮಾಡುವುದು ಹೇಗೆ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

ಡಾ. ನವೀನ್ ಎಂಬವರು ಯಾವುದೇ ರೀತಿಯ ಔಷಧಿಗಳಿಲ್ಲದೆ ಈ ಭಯ, ಆತಂಕ, ಚಿಂತೆ, ಒತ್ತಡ ಇವುಗಳನ್ನು ಕಡಿಮೆ ಮಾಡುವ ಸರಳ ವಿಧಾನವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೀವು ಕೂಡ ಇದನ್ನು ಪ್ರಯತ್ನಿಸಬಹುದಾಗಿದೆ. ಇದನ್ನು ಮನೆಯಲ್ಲಿ ಪ್ರಯತ್ನಿಸಬಹುದಾಗಿದ್ದು ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ.

ಇದನ್ನೂ ಓದಿ: ಹೆಚ್ಚು ಕಾಫಿ ಕುಡಿಯುತ್ತೀರಾ? ಹಾಗಾದ್ರೆ ಈ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳಿ

ವೈದ್ಯರ ವಿಡಿಯೋ ಇಲ್ಲಿದೆ:

ಹೇಗೆ ಮಾಡುವುದು?

ನಿಮ್ಮ ತೋರುಬೆರಳನ್ನು ಕಿವಿಯೊಳಕ್ಕೆ ಹಾಕಿ, ಅದನ್ನು ಒತ್ತಡದಿಂದ ಕೆಳಗೆ ಎಳೆಯಿರಿ. ಆ ಸಮಯದಲ್ಲಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನೋವಾಗದಂತೆ ಆರಾಮವಾಗಿ 3 ರಿಂದ 4 ಸಲ ಇದೇ ರೀತಿ ಮಾಡಿ. ಯಾವುದೇ ಕಾರಣಕ್ಕೂ ಜಾಸ್ತಿ ಒತ್ತಡ ಹಾಕಿ ನೋವು ಮಾಡಿಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ಆತಂಕ, ಭಯ, ಚಿಂತೆ, ಒತ್ತಡ ಎಲ್ಲವೂ ಕಡಿಮೆಯಾಗುತ್ತದೆ. ಅದೂ ಅಲ್ಲದೆ ನಿಮಗೆ ಯಾವುದೇ ರೀತಿಯ ಮಾತ್ರೆ, ಔಷಧಿಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಜೊತೆಗೆ ಯಾರು ಬೇಕಾದರೂ ಇದನ್ನು ಮಾಡಬಹುದಾಗಿದೆ. ನೀವು ಕೂಡ ಪದೇ ಪದೇ ನಾನಾ ಕಾರಣಗಳಿಗೆ ಆತಂಕ, ಭಯ, ಒತ್ತಡ ಅನುಭವಿಸುತ್ತಿದ್ದರೆ ಇದನ್ನು ಪ್ರಯತ್ನಿಸಿ ನೋಡಿ. ಆರೋಗ್ಯವಾಗಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Wed, 10 July 24

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು