Health Tips: ಪ್ರತಿದಿನ ಬೆಳಗ್ಗೆ ಹಣ್ಣುಗಳನ್ನು ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

| Updated By: ಸುಷ್ಮಾ ಚಕ್ರೆ

Updated on: Sep 19, 2022 | 6:06 AM

Fruits Benefits: ಹಣ್ಣುಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾದರೆ, ದಿನವೂ ಬೆಳಗ್ಗೆ ಹಣ್ಣುಗಳನ್ನು ಸೇವಿಸಿದರೆ ಏನೆಲ್ಲ ಉಪಯೋಗಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Health Tips: ಪ್ರತಿದಿನ ಬೆಳಗ್ಗೆ ಹಣ್ಣುಗಳನ್ನು ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?
ಹಣ್ಣುಗಳು
Follow us on

ಹಣ್ಣುಗಳನ್ನು ದಿನವೂ ಸೇವಿಸುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಪ್ರಯೋಜನಗಳಿವೆ. ಒಂದೊಂದು ಹಣ್ಣಿನಲ್ಲೂ (Fruits) ಒಂದೊಂದು ಉತ್ತಮ ಅಂಶವಿದ್ದು, ಇದು ಅನೇಕ ಅನಾರೋಗ್ಯಗಳನ್ನು ದೂರ ಇಡಬಲ್ಲದು. ಪ್ರತಿದಿನ ಹಣ್ಣುಗಳನ್ನು ತಿನ್ನಲು ಹಲವು ಕಾರಣಗಳಿವೆ. ನಿಮ್ಮ ಬೆಳಗಿನ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವ ಮೂಲಕ ಹಲವಾರು ರೋಗಗಳು ನಿಮ್ಮನ್ನು ಕಾಡದಂತೆ ತಡೆಯಬಹುದು. ಈ ಮೂಲಕ ನಿಮ್ಮ ಆರೋಗ್ಯವನ್ನು ನೀವು ಸುಲಭವಾಗಿ ಸುಧಾರಿಸಬಹುದು.

ಹಣ್ಣುಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾದರೆ, ದಿನವೂ ಬೆಳಗ್ಗೆ ಹಣ್ಣುಗಳನ್ನು ಸೇವಿಸಿದರೆ ಏನೆಲ್ಲ ಉಪಯೋಗಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

1. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ:
ಏಪ್ರಿಕಾಟ್, ಸೇಬು, ಬಾಳೆಹಣ್ಣು, ಕಲ್ಲಂಗಡಿ, ಬೆರ್ರಿ ಹಣ್ಣುಗಳು ಮತ್ತು ಕಿತ್ತಳೆಗಳಂತಹ ಹಣ್ಣುಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ. ಈ ಹಣ್ಣುಗಳು ಹೇರಳವಾದ ವಿಟಮಿನ್ ಎ, ವಿಟಮಿನ್ ಬಿ 6, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಅನ್ನು ಒಳಗೊಂಡಿರುತ್ತವೆ. ಇವೆಲ್ಲವೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದಂತಹ ಅಪಾಯಕಾರಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಇದನ್ನೂ ಓದಿ: Anjeer Benefits: ತೂಕವನ್ನು ಕಡಿಮೆ ಮಾಡಬೇಕಾ? ಹಾಗಾದ್ರೆ ನಿತ್ಯ ಒಂದೊಂದು ಅಂಜೂರ ಹಣ್ಣು ತಿನ್ನಿ

2. ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ:
ಮಧುಮೇಹ ವಿಶೇಷವಾಗಿ ಟೈಪ್ 2 ಮಧುಮೇಹ ಪ್ರಪಂಚದಾದ್ಯಂತ ಅನೇಕ ವ್ಯಕ್ತಿಗಳನ್ನು ತೊಂದರೆಗೀಡುಮಾಡುವ ಕಾಯಿಲೆಯಾಗಿದೆ. ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಹಣ್ಣುಗಳನ್ನು ಮಧುಮೇಹಿಗಳಿಗೆ ಶಿಫಾರಸು ಮಾಡುವುದಿಲ್ಲ. ಆದರೂ ಅವರು ಸೇಬು, ಆವಕಾಡೊ (ಬಟರ್ ಫ್ರೂಟ್), ಚೆರ್ರಿ, ಕಿತ್ತಳೆ, ಪೀಚ್ ಮತ್ತು ಪ್ಲಮ್ ಹಣ್ಣುಗಳನ್ನು ಸೇವಿಸಬಹುದು. ಇದು 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಡಿಮೆ ಗ್ಲೈಸೆಮಿಕ್ ಅನ್ನು ಹೊಂದಿರುತ್ತದೆ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಣ್ಣುಗಳಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಲು ಯಾವಾಗಲೂ ತಾಜಾ ಹಣ್ಣುಗಳನ್ನು ಸೇವಿಸಿ.

3. ಕ್ಯಾನ್ಸರ್ ತಡೆಗಟ್ಟುತ್ತದೆ:
ವಿಟಮಿನ್‌ ಸಮೃದ್ಧವಾಗಿರುವ ಹಣ್ಣುಗಳು ಲಿವರ್ ಟ್ಯೂಮರ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಹಲವಾರು ರೀತಿಯ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಒಳ್ಳೆಯದು. ಕಿತ್ತಳೆ ಮತ್ತು ಟ್ಯಾಂಗರಿನ್‌ಗಳಂತಹ ಹಣ್ಣುಗಳು ಸಿಟ್ರಸ್ ಮತ್ತು ಬೆರ್ರಿಗಳನ್ನು ಒಳಗೊಂಡಿರುತ್ತವೆ. ಇದನ್ನು ಆಗಾಗ ತಿನ್ನುವುದರಿಂದ ಅವುಗಳು ಹೊಂದಿರುವ ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳಿಂದಾಗಿ ಕ್ಯಾನ್ಸರ್ ಅನ್ನು ತಡೆಯಲು ಸಹಾಯವಾಗುತ್ತದೆ.

4. ರಕ್ತದೊತ್ತಡ ಕಡಿಮೆ ಮಾಡುತ್ತದೆ:
ಪೊಟ್ಯಾಸಿಯಮ್‌ ಸಮೃದ್ಧವಾಗಿರುವ ಹಣ್ಣುಗಳಾದ ಬಾಳೆಹಣ್ಣುಗಳು, ಕಲ್ಲಂಗಡಿ, ಪೇರಳೆ ಮತ್ತು ಮಾವು ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಪೊಟ್ಯಾಸಿಯಮ್ ರಕ್ತನಾಳಗಳ ವಿಸ್ತರಣೆಯ ಗುಣದಿಂದಾಗಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: Diabetes: ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು, ಯಾವ ಹಣ್ಣುಗಳನ್ನು ಸೇವಿಸಬಾರದು?

5. ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ:
ಹಣ್ಣುಗಳಲ್ಲಿ ವಿಟಮಿನ್ ಸಿ ಇದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಸಮೃದ್ಧವಾಗಿರುವ ಹಣ್ಣುಗಳು ನಿಮ್ಮ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಇದು ಮೂಳೆ ಖನಿಜದ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಣ್ಣುಗಳು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡುವ ಸೂಪರ್ ಫುಡ್‌ಗಳಾಗಿವೆ. ಅವುಗಳು ಹೆಚ್ಚಿನ ಪ್ರಮಾಣದ ಪೋಷಕಾಂಶಗಳು, ಫೈಬರ್ ಮತ್ತು ವಿಟಮಿನ್‌ಗಳನ್ನು ಹೊಂದಿದ್ದು ಅದು ನಿಮ್ಮ ದೇಹವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ