Health Tips: ನೀರು ಕುಡಿಯುವಾಗ ಹುಷಾರು.. ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು ಇಲ್ಲಿವೆ
ಆಹಾರ ಸೇವನೆ ವೇಳೆ ನೀರು ಕುಡಿಯುವುದು ಉತ್ತಮ ಎಂದು ನೀವು ಭಾವಿಸಬಹುದು. ಆದರೆ ಇದು ತಪ್ಪು. ತಿನ್ನುವಾಗ ನೀರು ಕುಡಿಯುವುದು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ಹೊಟ್ಟೆ ಉಬ್ಬಬಹುದು.
ನಾವು ಯಾವಾಗಲೂ ಆರೋಗ್ಯವಾಗಿರಬೇಕೆಂದರೆ ಉತ್ತಮ ಆಹಾರ ಮತ್ತು ಜೀವನಶೈಲಿ ಅಳವಡಿಸಿಕೊಳ್ಳುವುದು ಅವಶ್ಯಕ. ಅದೇ ರೀತಿ ದೇಹಕ್ಕೆ ನೀರು ಅತೀ ಅವಶ್ಯಕ. ಕೆಲವರಿಗೆ ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವಿರುತ್ತದೆ. ಏಕೆಂದರೆ ನೀರು ಕುಡಿಯುವುದರಿಂದ ಆಹಾರವನ್ನು ನುಂಗಲು ಸುಲಭವಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಭಾವಿಸಬಹುದು. ಆದರೆ ಆರೋಗ್ಯ ತಜ್ಞರು ಇಂತಹವರಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ಹಾಗಿದ್ದರೆ ಊಟ ಮಾಡುವಾಗ ನೀರು ಯಾಕೆ ಕುಡಿಯಬಾರದು? ಯಾವ ಸಮಯದಲ್ಲಿ ಕುಡಿಯಬೇಕು? ಎಂಬೂದರ ಬಗ್ಗೆ ತಿಳಿಯೋಣ.
ಆಹಾರವನ್ನು ಸೇವಿಸುವಾಗ ನೀರನ್ನು ಯಾಕೆ ಕುಡಿಯಬಾರದು ಎಂಬುದನ್ನು ತಿಳಿದುಕೊಳ್ಳುವ ಮೊದಲು, ನಾವು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ವಾಸ್ತವವಾಗಿ ಆಹಾರವು ಬಾಯಿಗೆ ಪ್ರವೇಶಿಸಿದ ತಕ್ಷಣ ಅಗಿಯಲು ಪ್ರಾರಂಭಿಸುತ್ತೇವೆ. ಇದೇ ವೇಳೆ ಗ್ರಂಥಿಗಳು ಲಾಲಾರಸವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಈ ಲಾಲಾರಸವು ಆಹಾರವನ್ನು ಒಡೆಯುವ ಕಿಣ್ವಗಳನ್ನು ಹೊಂದಿರುತ್ತದೆ. ಈ ಕಿಣ್ವಗಳು ನಂತರ ಹೊಟ್ಟೆಯಲ್ಲಿ ಆಮ್ಲೀಯ ಗ್ಯಾಸ್ಟ್ರಿಕ್ ರಸದೊಂದಿಗೆ ಬೆರೆತು ದಪ್ಪ ದ್ರವವಾಗಿ ರೂಪುಗೊಳ್ಳುತ್ತದೆ. ಈ ದ್ರವಗಳು ಸಣ್ಣ ಕರುಳಿನ ಮೂಲಕ ಹಾದುಹೋದ ನಂತರವೇ ಪೋಷಕಾಂಶಗಳನ್ನು ಹೀರಿಕೊಳ್ಳಲು ಪ್ರಾರಂಭವಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯ ಮೇಲೆ ಕುಡಿಯುವ ನೀರಿನ ಪರಿಣಾಮ
ನೀವು ನಿಯಮಿತವಾಗಿ ನೀರನ್ನು ಕುಡಿಯುತ್ತಿದ್ದರೆ ಅದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಆದರೆ ಊಟದ ಸಂದರ್ಭದಲ್ಲಿ ನೀರು ಕುಡಿಯುವುದು ಒಳ್ಳೆಯದಲ್ಲ, ಏಕೆಂದರೆ ಇದರಲ್ಲಿ ಆಹಾರದ ಜೊತೆಗೆ ದ್ರವವಿರುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಹಾನಿಯುಂಟು ಮಾಡಬಹುದು.
ಕುಡಿಯುವ ನೀರು ಹೊಟ್ಟೆಯ ಆಮ್ಲ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಕರಗಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಎಂದು ಭಾವಿಸಲಾಗಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ಇದಕ್ಕೆ ವ್ಯತಿರಿಕ್ತವಾಗಿ, ತಿನ್ನುವಾಗ ನೀರು ಕುಡಿಯುವುದು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇನ್ನೊಂದು ಅನನುಕೂಲವೆಂದರೆ ನಿಮ್ಮ ಹೊಟ್ಟೆಯು ಉಬ್ಬಲು ಪ್ರಾರಂಭವಾಗಿ ಕ್ರಮೇಣ ದಪ್ಪವಾಗಾಗಿ ಕಾಣುತ್ತೀರಿ. ಇದರಿಂದ ದೇಹದ ಆಕಾರ ಸಂಪೂರ್ಣ ಹಾಳಾಗುತ್ತದೆ.
ನೀರು ಯಾವಾಗ ಕುಡಿಯಬೇಕು?
ಸಾಮಾನ್ಯವಾಗಿ ಆಹಾರ ತಿಂದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಲು ಅನೇಕ ಆರೋಗ್ಯ ವೃತ್ತಿಪರರು ಶಿಫಾರಸು ಮಾಡುತ್ತಾರೆ. ಊಟವಾದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಉತ್ತಮ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ