Health Tips: ಹಳೆ ನೋವುಗಳನ್ನು ನಿರ್ಲಕ್ಷಿಸಿದರೆ ಅಪಾಯ ಖಂಡಿತ
ದೇಹದ ನಾನಾ ಭಾಗಗಳಲ್ಲಿ ನೋವು ಕಂಡು ಬರುವುದು ಸಾಮಾನ್ಯವಾಗಿದೆ. ಆದರೆ ಇದನ್ನು ನಿರ್ಲಕ್ಷಿಸಿದರೆ ದೊಡ್ಡ ಸಮಸ್ಯೆಯಾಗಬಹುದು. ಬೆನ್ನು, ಕುತ್ತಿಗೆ ಮತ್ತು ಕಾಲುಗಳಲ್ಲಿ ನೋವಿನ ಸಮಸ್ಯೆ ಕಂಡು ಬರುತ್ತಿದ್ದು ಜನರು ಇದರಿಂದ ತೊಂದರೆಗೀಡಾಗುತ್ತಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಈ ಬಗ್ಗೆ ಗಮನ ಹರಿಸುವುದಿಲ್ಲ. ಬಳಿಕ ಇದು ದೀರ್ಘಕಾಲದ ನೋವಿಗೆ ಕಾರಣವಾಗುತ್ತದೆ. ಹಾಗಾಗಿ ನೋವಿನ ಕಾರಣ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಅವಶ್ಯಕ. ಈ ಕುರಿತು ಡಾ. ಅಮೋದ್ ಮನೋಚಾ, ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ದೇಹದ ನಾನಾ ಭಾಗಗಳಲ್ಲಿ ನೋವು ಕಂಡು ಬರುವುದು ಸಾಮಾನ್ಯವಾಗಿದೆ. ಆದರೆ ಇದನ್ನು ನಿರ್ಲಕ್ಷಿಸಿದರೆ ದೊಡ್ಡ ಸಮಸ್ಯೆಯಾಗಬಹುದು. ಬೆನ್ನು, ಕುತ್ತಿಗೆ ಮತ್ತು ಕಾಲುಗಳಲ್ಲಿ ನೋವಿನ ಸಮಸ್ಯೆ ಕಂಡು ಬರುತ್ತಿದ್ದು ಜನರು ಇದರಿಂದ ತೊಂದರೆಗೀಡಾಗುತ್ತಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಈ ಬಗ್ಗೆ ಗಮನ ಹರಿಸುವುದಿಲ್ಲ. ಬಳಿಕ ಇದು ದೀರ್ಘಕಾಲದ ನೋವಿಗೆ ಕಾರಣವಾಗುತ್ತದೆ. ಹಾಗಾಗಿ ನೋವಿನ ಕಾರಣ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಅವಶ್ಯಕ. ಈ ಕುರಿತು ಡಾ. ಅಮೋದ್ ಮನೋಚಾ, ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.
“ವಿಶ್ವಾದ್ಯಂತ 1.5 ಬಿಲಿಯನ್ ಗಿಂತ ಹೆಚ್ಚು ಜನರು ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದಾರೆ. ಈ ರೀತಿ ನೋವು ಕಂಡು ಬಂದಾಗ ಅದನ್ನು ನಿರ್ಲಕ್ಷಿಸಿದರೆ ಇಂತಹ ಸಮಸ್ಯೆಯು ಮುಂದಿನ ದಿನಗಳಲ್ಲಿ ಅಂಗವೈಕಲ್ಯ ಮತ್ತು ಕಳಪೆ ಜೀವನದ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಬೆನ್ನು, ಕುತ್ತಿಗೆ, ಪೆಲ್ವಿಕ್ ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ನೋವಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇದು ವ್ಯಕ್ತಿಯ ದೈಹಿಕ, ಭಾವನಾತ್ಮಕ ಆರೋಗ್ಯವನ್ನು ಹಾಳು ಮಾಡುತ್ತದೆ. ದೇಶದಾದ್ಯಂತ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದ್ದು ಇದರ ಹೊರತಾಗಿಯೂ, ಜನರು ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿಲ್ಲ” ಎಂದು ಡಾ. ಅಮೋದ್ ಮನೋಚಾ ಹೇಳಿದ್ದಾರೆ.
ನೋವು ದೀರ್ಘಕಾಲ ಮುಂದುವರಿಯಲು ಕಾರಣವೇನು?
ದೇಹದ ನೋವಿಗೆ ಹಲವು ಕಾರಣಗಳಿರಬಹುದು. ಆಟೋಇಮ್ಯೂನ್ ಕಾಯಿಲೆ, ಸಂಧಿವಾತ, ದೀರ್ಘಕಾಲದ ಸೋಂಕು ಅಥವಾ ವಿಟಮಿನ್ ಮತ್ತು ಪ್ರೋಟೀನ್ ಕೊರತೆ ಸಹ ನೋವಿನ ಸಮಸ್ಯೆಗಳನ್ನು ಉಂಟುಮಾಡಬಹುದು. ದೀರ್ಘಕಾಲದ ನೋವಿಗೆ ಅನೇಕ ರೀತಿಯ ಚಿಕಿತ್ಸೆಗಳಿವೆ. ಇವುಗಳಲ್ಲಿ ರೋಗಿಗಳಿಗೆ ಔಷಧಿಗಳನ್ನು ನೀಡಲಾಗುತ್ತದೆ. ಇದರಲ್ಲಿ ಎಪಿಡ್ಯೂರಲ್ ಸ್ಟೀರಾಯ್ಡ್ ಚುಚ್ಚುಮದ್ದುಗಳು, ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಶನ್ ಮತ್ತು ಟ್ರಿಗರ್ ಪಾಯಿಂಟ್ ಇಂಜೆಕ್ಷನ್ ಸೇರಿವೆ. ಇದರ ಹೊರತಾಗಿ ವೈದ್ಯರು ವ್ಯಕ್ತಿಯ ಸಮಸ್ಯೆಗೆ ಅನುಸಾರವಾಗಿ ಮದ್ದನ್ನು ನೀಡುತ್ತಾರೆ.
ನೋವನ್ನು ಲಘುವಾಗಿ ತೆಗೆದುಕೊಳ್ಳಬೇಡಿ;
ಎಐ ಸೇರಿದಂತೆ ಇತ್ತೀಚಿನ ವೈದ್ಯಕೀಯ ತಂತ್ರಜ್ಞಾನವನ್ನು ನೋವಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತಿದೆ. ಇದೆಲ್ಲದರ ಹೊರತಾಗಿ ಜನರಿಗೆ, ಯಾವುದಾದರೂ ರೀತಿಯಲ್ಲಿ ದೇಹದ ನೋವಿನ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ದೇಹದ ಯಾವುದೇ ಭಾಗದಲ್ಲಿ ನೋವಿದ್ದರೂ ಕೂಡ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಯಾವುದಾದರೂ ಕಾಯಿಲೆಯ ಲಕ್ಷಣವೂ ಆಗಿರಬಹುದು. ಅನೇಕ ವರ್ಷಗಳಿಂದ ನೋವಿನ ಸಮಸ್ಯೆ ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ