ಸಾಂದರ್ಭಿಕ ಚಿತ್ರ
ಚಳಿಗಾಲದಲ್ಲಿ ಧರಿಸುವ ಉಡುಪು ಸೇರಿದಂತೆ ಸೇವಿಸುವ ಆಹಾರಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಸ್ವಲ್ಪ ಆಹಾರದಲ್ಲಿ ವ್ಯತ್ಯಾಸವಾದರೂ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ರೋಗ ನಿರೋಧಕ ಶಕ್ತಿಯನ್ನು ಆಹಾರವನ್ನು ಹೆಚ್ಚೆಚ್ಚು ಸೇವಿಸಬೇಕು. ಈ ಹಾಲನ್ನು ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದ್ದು , ಇದು ಕ್ಯಾಲ್ಸಿಯಂ ಹಾಗೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನವು ಹಾಲಿಗೆ ಈ ಪದಾರ್ಥಗಳನ್ನು ಬೆರೆಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ.
- ಅರಶಿಣ ಹಾಲು : ರಾತ್ರಿ ಮಲಗುವುದಕ್ಕಿಂತ ಮುಂಚೆ ಬೆಚ್ಚಗಿನ ಹಾಲಿನಲ್ಲಿ ಅರ್ಧ ಚಮಚ ಅರಿಶಿನವನ್ನು ಮಿಶ್ರಣ ಮಾಡಿ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ನಿಯಮಿತ ಸೇವನೆಯೂ ಸ್ನಾಯುಗಳು, ಕೀಲುಗಳಲ್ಲಿನ ನೋವು ಹಾಗೂ ಉರಿಯೂತವನ್ನು ನಿವಾರಿಸುತ್ತದೆ. ನಿದ್ರೆಯನ್ನು ಸುಧಾರಿಸುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
- ಕೇಸರಿ ಹಾಲು : ಚಳಿಗಾಲದಲ್ಲಿ ಒಂದು ಲೋಟ ಹಾಲಿಗೆ ಎರಡು ಎಳೆ ಕೇಸರಿಗಳನ್ನು ಬೆರೆಸಿ 15 ನಿಮಿಷಗಳ ನಂತರ ಕುಡಿಯುವುದರಿಂದ ದೇಹವನ್ನು ಬೆಚ್ಚಗಿರಿಸಲು ಸಹಕಾರಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ ಕೆಮ್ಮಿನಂತಹ ಆರೋಗ್ಯ ಸಮಸ್ಯೆಯಿಂದ ರಕ್ಷಿಸುತ್ತದೆ. ಅದಲ್ಲದೇ, ಆಯಾಸ, ಒತ್ತಡ, ನಿದ್ರಾಹೀನತೆ, ಕಣ್ಣುಗಳ ದೌರ್ಬಲ್ಯ ಸೇರಿದಂತೆ ಇನ್ನಿತ್ತರ ಸಮಸ್ಯೆಗಳನ್ನು ದೂರ ಮಾಡುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
- ಶುಂಠಿ ಮತ್ತು ಕರಿಮೆಣಸು ಮಿಶ್ರಿತ ಹಾಲು : ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ತುಂಬಾ ಬಾಧಿಸುತ್ತಿದ್ದರೆ, ಪ್ರತಿದಿನ ಶುಂಠಿ ಮತ್ತು ಕರಿಮೆಣಸು ಮಿಶ್ರಿತ ಹಾಲು ಕುಡಿಯುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು. ಸ್ವಲ್ಪ ಶುಂಠಿ ಹಾಗೂ ಕರಿಮೆಣಸಿನ ಪುಡಿ ಬೆರೆಸಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ಹಾಲನ್ನು ಸೋಸಿದ ಬಳಿಕ ಒಂದು ಚಿಟಿಕೆ ಅರಿಶಿನ ಹಾಗೂ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು. ಇದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ.
- ಒಣಹಣ್ಣು ಮಿಶ್ರಿತ ಹಾಲು : ಬಾದಾಮಿ, ವಾಲ್ ನಟ್ಸ್ , ಗೋಡಂಬಿಗಳನ್ನು ಸಣ್ಣ ತುಂಡುಗಳಾಗಿ ಪುಡಿಮಾಡಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಮಕ್ಕಳಿಗೆ ಈ ಹಾಲನ್ನು ನೀಡುವುದರಿಂದ ಅಗತ್ಯವಿರುವ ಪೋಷಕಾಂಶಗಳು ದೇಹಕ್ಕೆ ಸೇರುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ