ಪೋಷಕರೇ ಎಚ್ಚರ…ಎಚ್ಚರ: ಶಾಲಾ ಮಕ್ಕಳಿಗೆ ಮೊಬೈಲ್ ತಂದ ಹೊಸ ಅವಾಂತರ!

ಶಾಲಾ ಮಕ್ಕಳಲ್ಲಿ ದೃಷ್ಠಿ ಸಮಸ್ಯೆ ಶುರುವಾಗಿದೆ. ಕ್ಲಾಸ್ ರೂಮ್​ನಲ್ಲಿ ಸರಿಯಾಗಿ ಬೋರ್ಡ್ ಕಾಣಿಸಲ್ಲ ಎಂದುನಿಮ್ಮ ಮಗು ಹೇಳುತ್ತಿದ್ಯಾ? ಅದೆಷ್ಟು ಸಲ ಕರೆದರೂ ನಿಮ್ಮ ಮಗು ರೆಸ್ಪಾಂಡ್ ಮಾಡುತ್ತಿಲ್ವಾ? ಯಾವಗಲೂ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡ್ಕೊಂಡೇ ಇರುತ್ತಾರಾ? ಹಾಗಿದ್ರೆ ಇನ್ನು ತಡ ಮಾಡಬೇಡಿ. ಒಮ್ಮೆ ವೈದ್ಯರ ಬಳಿ ಕರೆದುಕೊಂಡು ಹೋಗುವು ಒಳಿತು. ಇನ್ನು ಶಾಲಾ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಬಹಿರಂಗಪಡಿಸಿದ ಅಂಶ ಈ ಕೆಳಗಿನಂತಿದೆ.

ಪೋಷಕರೇ ಎಚ್ಚರ...ಎಚ್ಚರ: ಶಾಲಾ ಮಕ್ಕಳಿಗೆ ಮೊಬೈಲ್ ತಂದ ಹೊಸ ಅವಾಂತರ!
ಪ್ರಾತಿನಿಧಿಕ ಚಿತ್ರ
Follow us
Vinay Kashappanavar
| Updated By: ರಮೇಶ್ ಬಿ. ಜವಳಗೇರಾ

Updated on: Dec 16, 2024 | 7:10 PM

ಬೆಂಗಳೂರು, (ಡಿಸೆಂಬರ್ 16): ಕೊವಿಡ್ ನಂತರ ಮಕ್ಕಳ ಆರೋಗ್ಯ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಿ? ನಿಮ್ಮ ಮಕ್ಕಳ ಆರೋಗ್ಯ ಬೆಳವಣಿಗೆ ಬಗ್ಗೆ ಅದೆಷ್ಟು ಫಾಲೋ ಮಾಡುತ್ತಿದ್ದೀರಿ? ಹೀಗ್ಯಾಕೆ ಕೇಳುತ್ತಿದ್ದೇವೆ ಅಂದರೆ ಇತ್ತೀಚಿಗೆ ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರಕ್ಕೆ ಕಾರಣವಾಗುತ್ತುದೆ. ಕೊರೊನಾ ಬಂದ ಬಳಿಕ ಮಕ್ಕಳ ಕಲಿಕಯ ಜೊತೆ ವರ್ತನೆ ಅಡಿಕ್ಷನ್ ಗಳು ಬದಲಾಗಿ ಹೋಗಿವೆ.. ಮನೆಯವರನ್ನು ಮರಿಬಹುದು, ಆದ್ರೆ ಮೊಬೈಲ್ ಮರೆಯೋಕ್ಕೆ ಚ್ಯಾನ್ಸ್ ಇಲ್ಲ ಎಂಬಂತಾಗಿದೆ ಸದ್ಯ ಮಕ್ಕಳ ಪರಿಸ್ಥಿತಿ. ಅತಿಯಾದ ಮೊಬೈಲ್ ಚಟ ಮಕ್ಕಳ ದೃಷ್ಠಿ ಸಮಸ್ಯೆಗೆ ಕಾರಣವಾಗಿರುವ ಆತಂಕಕಾರಿ ಅಂಶವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ.

ಮೊಬೈಲ್ ಬಳಕೆಯಿಂದ ಶಾಲಾ ಮಕ್ಕಳಲ್ಲಿ ದೃಷ್ಠಿ ಸಮಸ್ಯೆ

ಕೊವಿಡ್ ಬಳಿಕ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಎಂದು ದಿನದ 10 ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಸುತ್ತಿದ್ದರು. ನಿತ್ಯ ಮೊಬೈಲ್ ಇಂಟರ್ನನೆಟ್ ಲೋಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಈಗ ಮೊಬೈಲ್ ಚಟವಾಗಿ ಹೋಗಿದೆ. ಮೊಬೈಲ್ ಇಲ್ಲದೆ ಕೆಲಸನೇ ಇಲ್ಲ. ಓದು ಮೊದಲೇ ಇಲ್ಲ ಅಂತಿದ್ದಾರೆ. ಹೀಗಾಗಿ ಶಾಲಾ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಕಂಡು ಬರುತ್ತಿವೆ. ಶಾಲಾ ಮಕ್ಕಳಲ್ಲಿ ರಿಪ್ರೆಕ್ಟಿವ್ ಎರರ್ ನಿಂದ ರಾಜ್ಯದಲ್ಲಿ ನೂರಲ್ಲ ಸಾವಿರಲ್ಲ ಬರೊಬ್ಬರಿ 77342ಕ್ಕು ಹೆಚ್ಚು ಮಕ್ಕಳಲ್ಲಿ ದೃಷ್ಠಿ ದೋಷ ಕಂಡು ಬಂದಿದೆ.

ಇದನ್ನೂ ಓದಿ: COVID mRNA Vaccine: ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಮಕ್ಕಳಿಗೆ ಹೃದಯಾಘಾತದ ಅಪಾಯ ಹೆಚ್ಚು : ಅಧ್ಯಯನದಿಂದ ಬಹಿರಂಗ

2023-24 ನೇ ಸಾಲಿನಲ್ಲಿ ಇಲ್ಲಿಯವರೆಗೆ ಆರೋಗ್ಯ ಇಲಾಖೆ 12004 ಮಕ್ಕಳಿಗೆ ದೃಷ್ಠಿ ದೋಷ ಪರೀಕ್ಷೆ ಮಾಡಿದ್ದು, ಈ ಪರೀಕ್ಷೆಯಲ್ಲಿ ಆತಂಕಕಾರಿಯಾದ ಅಂಶವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ. 120004 ಮಕ್ಕಳಲ್ಲಿ ಬರೊಬ್ಬರಿ 77342 ಲಕ್ಷ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಇದ್ದು 6223 ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಸ್ಪೆಕ್ಟಿಕಲ್ಸ್ ನೀಡಿದೆ. ಇನ್ನು ಮೊಬೈಲ್ ಹಾಗೂ ಅಪೌಷ್ಠಿಕ ಆಹಾರ ಕೊರತೆ ಸೇರಿದ್ದಂತೆ ನಾನಾ ಕಾರಣಗಳಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಶುರುವಾಗಿದ್ದು, ದೂರ ದೃಷ್ಠಿ ಸಮಸ್ಯೆ ಹಾಗೂ ಸಮೀಪ ದೃಷ್ಠಿ ಸಮಸ್ಯೆ ಮಕ್ಕಳಿಗೆ ಕಾಡುತ್ತಿದೆ.

ಇನ್ನೂ ಶಾಲಾ ಮಕ್ಕಳಲ್ಲಿ ಹಚ್ಚಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆ ಹಿನ್ನಲೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಮಕ್ಕಳು ಊಟಕ್ಕೆ ಹಠ ಮಾಡುತ್ತಾರೆ, ಓದಲು ಕಿರಿಕ್ ಮಾಡುತ್ತಾರೆ, ಹಠ ಮಾಡುತ್ತಿದ್ದಾರೆ ಎಂದು ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ವೈದ್ಯರು ಎಚ್ಚರ ಅಂತಿದ್ದು.. ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಮೊಬೈಲ್ ನೀಡಬೇಡಿ ಅಂತಿದ್ದಾರೆ.

ಒಟ್ಟಿನಲ್ಲಿ ಮಕ್ಕಳು ಮೊಬೈಲ್​ಗೆ ದಾಸರಾಗಿರುವುದು ಸುಳ್ಳಲ್ಲ.. ಮೀತಿ ಮಿರಿದ ಮೊಬೈಲ್ ಬಳಕೆ ಮಕ್ಕಳ ಕಣ್ಣಿನ ಸಮಸ್ಯೆ ದೃಷ್ಠಿ ದೋಷಕ್ಕೆ ಕಾಣವಾಗುತ್ತಿದ್ದು, ಇನ್ನಾದರೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಗಮನಹರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ