ಈ ಹಣ್ಣಿನ ಎಲೆ, ಬೀಜ ಎಲ್ಲದರಲ್ಲಿಯೂ ಔಷಧೀಯ ಗುಣವಿದೆ.. ಶೀತ, ಜ್ವರ ಮಾತ್ರವಲ್ಲ ಕ್ಯಾನ್ಸರ್ ಬರದಂತೆಯೂ ತಡೆಯುತ್ತೆ
ಹಸಿರು ಬಣ್ಣದ ಒಂದು ಸಣ್ಣ ಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುತ್ತವೆ ಎಂದರೆ ನಂಬುವುದಕ್ಕೆ ಬಹಳ ಕಷ್ಟ. ಏಕೆಂದರೆ, ಲಕ್ಷಣ ಫಲ ಎಂದು ಕರೆಯುವ ಈ ಹಣ್ಣು ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ತಡೆಯುವ ಶಕ್ತಿ ಹೊಂದಿದೆ. ಮಾತ್ರವಲ್ಲ ಈ ಹಣ್ಣಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಇದೆ. ಹಾಗಾಗಿ ಇದನ್ನು ಬಾಣತಿಯರಿಂದ ಹಿಡಿದು ಮಕ್ಕಳ ವರೆಗೆ ಎಲ್ಲರೂ ತಿನ್ನಬಹುದಾಗಿದ್ದು ಎಲ್ಲೇ ಸಿಕ್ಕರೂ ತಿನ್ನುವುದನ್ನು ಮರೆಯಬೇಡಿ. ಇವುಗಳ ಮತ್ತಷ್ಟು ಆರೋಗ್ಯ ಪ್ರಯೋನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೀತಾಫಲ (Custard apple) ಮತ್ತು ರಾಮಫಲದಂತೆಯೇ, ಲಕ್ಷ್ಮಣಫಲದ ಬಗ್ಗೆಯೂ ನೀವು ಕೇಳಿರಬಹುದು. ಇದನ್ನು ಮುಳ್ಳುರಾಮಫಲ, ಹನುಮಾನ್ ಹಣ್ಣು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹಣ್ಣನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಏಕೆಂದರೆ ಇದರಲ್ಲಿ ಅಷ್ಟು ಔಷಧೀಯ ಗುಣಗಳಿವೆ. ಮಾತ್ರವಲ್ಲ ಆರೋಗ್ಯ (Health) ತಜ್ಞರ ಪ್ರಕಾರ, ಲಕ್ಷ್ಮಣಫಲ 12 ರೀತಿಯ ಕ್ಯಾನ್ಸರ್ (Cancer) ಉಂಟುಮಾಡುವ ಕೋಶಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಲಕ್ಷ್ಮಣಫಲ ಮಾತ್ರವಲ್ಲ ಆ ಮರದ ತೊಗಟೆ, ಎಲೆ ಮತ್ತು ಬೀಜ ಎಲ್ಲವನ್ನೂ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಈ ಹಣ್ಣಿನ ಸೇವನೆ ಯಾರಿಗೆ ಒಳ್ಳೆಯದು, ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದರ ಬಗ್ಗೆ ತಿಳಿದುಕೊಳ್ಳಿ.
ಲಕ್ಷ್ಮಣಫಲ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:
- ಲಕ್ಷ್ಮಣಫಲ ಕ್ಯಾನ್ಸರಿಗೆ ರಾಮಬಾಣವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಈ ಹಣ್ಣಿನಿಂದ ಜ್ಯೂಸ್ ಮಾಡಿ ಅಥವಾ ಹಣ್ಣನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ಈ ಹಣ್ಣುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 1 ಮತ್ತು ವಿಟಮಿನ್ ಬಿ 2 ಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿ ಇವುಗಳ ಸೇವನೆ ನಮ್ಮ ದೇಹಕ್ಕೆ ಬಹಳ ಒಳ್ಳೆಯದು.
- ಕೆಲವರು ಪದೇ ಪದೇ ಜಂತು ಹುಳುವಿನ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಈ ಹಣ್ಣನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಕಾಡುವುದಿಲ್ಲ.
- ಈಗ ಮಳೆಗಾಲವಾಗಿರುವುದರಿಂದ ಜ್ವರ, ಶೀತ ಕಡಿಮೆಯಾಗುವುದೇ ಇಲ್ಲ. ಇಂತಹ ಸಮಯದಲ್ಲಿ ಈ ಹಣ್ಣುಗಳ ಸೇವನೆ ಮಾಡುವುದರಿಂದ ವಿಷಕಾರಿ ಜ್ವರ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ಈ ಹಣ್ಣು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಉಪಯುಕ್ತವಾಗಿವೆ.
- ಲಕ್ಷ್ಮಣಫಲದ ಎಲೆಗಳನ್ನು ತಲೆನೋವನ್ನು ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರ ಎಲೆಗಳನ್ನು ಚೆನ್ನಾಗಿ ಪುಡಿಮಾಡಿ ತಲೆಗೆ ಹಚ್ಚಿ, ಬಳಿಕ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿಯೇ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು.
- ಲಕ್ಷ್ಮಣಫಲವನ್ನು ಪಾರ್ಶ್ವ ನೋವು, ಮಧುಮೇಹ ಮತ್ತು ಮೂತ್ರನಾಳದ ಕಾಯಿಲೆಗಳ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ.
- ಹಾಲುಣಿಸುವ ತಾಯಂದಿರಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಈ ಹಣ್ಣು ಸಹಾಯ ಮಾಡುತ್ತದೆ. ಹಾಗಾಗಿ ಈ ಹಣ್ಣುಗಳನ್ನು ಬಾಣಂತಿಯರು ಸೇವನೆ ಮಾಡಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
- ಇನ್ನು, ಈ ಹಣ್ಣುಗಳ ಒಳಗಿರುವ ಬೀಜಗಳನ್ನು ಚೆನ್ನಾಗಿ ಒಣಗಿಸಿ, ಪುಡಿಮಾಡಿ ನೀರಿನಲ್ಲಿ ಬೆರೆಸಿಕೊಂಡು ಕುಡಿಯುವುದರಿಂದ ಸ್ನಾಯು ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
- ಅಲ್ಲದೆ ಈ ಹಣ್ಣುಗಳನ್ನು ಬೆನ್ನು ನೋವು, ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕೂಡ ಬಳಕೆ ಮಾಡಲಾಗುತ್ತದೆ.
- ಲಕ್ಷ್ಮಣಫಲ ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಯಕೃತ್ತನ್ನು ಹಾನಿಯಿಂದ ರಕ್ಷಿಸುತ್ತದೆ. ಹಾಗಾಗಿ ಈ ಹಣ್ಣುಗಳ ಸೇವನೆಯನ್ನು ಹೆಚ್ಚು ಹೆಚು ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




