AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Day to Combat Desertification and Drought 2025: ಹವಾಮಾನ ಬದಲಾವಣೆಯಿಂದ ಬರಡಾಗುತ್ತಿದೆ ಭೂಮಿ

ಹವಾಮಾನ ಬದಲಾವಣೆಯಿಂದ ಮಂಜುಗಡ್ಡೆಯ ಕರಗುವಿಕೆ ಹೆಚ್ಚಾಗುತ್ತೆ ಇದರಿಂದ ಸಾಗರಗಳ ನೀರಿನ ಮಟ್ಟ ಕೂಡಾ ಹೆಚ್ಚಾಗುತ್ತಿದೆ. ಇದರ ಜೊತೆ ಜೊತೆಗೆ ಮರುಭೂಮೀಕರಣ, ಬರಗಾಲದಂತಹ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಜೂನ್‌ 17 ರಂದು ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುತ್ತದೆ.

World Day to Combat Desertification and Drought 2025: ಹವಾಮಾನ ಬದಲಾವಣೆಯಿಂದ ಬರಡಾಗುತ್ತಿದೆ ಭೂಮಿ
ಮರುಭೂಮೀಕರಣ ಮತ್ತು ಬರಗಾಲ ತಡೆ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 16, 2025 | 10:06 PM

Share

ಅರಣ್ಯ ನಾಶ, ನಗರೀಕರಣ, ಸೇರಿದಂತೆ ಮಾನವನ ಸ್ವಾರ್ಥದ ಕಾರಣದಿಂದ ಇಂದು ಪರಿಸರ ಮಾಲಿನ್ಯದ ಜೊತೆಗೆ ಹವಾಮಾನ ಬದಲಾವಣೆಯಂತ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಹವಾಮಾನ ಬದಲಾವಣೆಯ (climate change) ಕಾರಣದಿಂದ ಮಂಜುಗಡ್ಡೆ ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಬರಗಾಲ, ಭೂಮಿ ಬರಡಾಗುವಂತಹ ಸಮಸ್ಯೆಗಳು ಕೂಡಾ ಉಂಟಾಗಿದೆ. ಈ ಬರಗಾಲ ಪರಿಸ್ಥಿತಿ ಜಗತ್ತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. 2050 ರ ವೇಳೆಗೆ, ಬರಗಾಲವು ವಿಶ್ವದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ಬರಗಾಲ ಮತ್ತು ಮರುಭೂಮೀಕರಣದ ಪರಿಣಾಮಗಳನ್ನು ತಡೆಗಟ್ಟಲು ಪ್ರತಿವರ್ಷ ಜೂನ್‌ 17 ರಂದು ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ (World Day to Combat Desertification and Drought) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಮರುಭೂಮೀಕರಣ ಮತ್ತು ಬರಗಾಲ ತಡೆ ದಿನದ ಇತಿಹಾಸ:

ಮರುಭೂಮೀಕರಣ ಮತ್ತು ಬರಗಾಲ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಪರಿಸರ ಅವನತಿ ಮತ್ತು ಮರುಭೂಮೀಕರಣವನ್ನು ಎದುರಿಸಲು  ವಿಶ್ವಸಂಸ್ಥೆಯ ಸಮಾವೇಶವನ್ನು (UNCCD) ಅಂಗೀಕರಿಸಿತು. ಆ ದಿನದಂದು ಜೂನ್‌ 17 ರಂದು ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಈ ದಿನವನ್ನು ಮೊದಲು 1995 ರಲ್ಲಿ ಆಚರಿಸಲಾಯಿತು. ಮತ್ತು  ಅಂದಿನಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.

ಮರುಭೂಮೀಕರಣ ಮತ್ತು ಬರಗಾಲ ತಡೆ ದಿನದ ಮಹತ್ವ:

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆ ಜಗತ್ತಿನಲ್ಲಿ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಜೊತೆ ಜೊತೆಗೆ ಬರಗಾಲದ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ  ಮರುಭೂಮೀಕರಣ ಮತ್ತು ಬರಗಾಲದಿಂದಾಗಿ ಜಗತ್ತಿನಲ್ಲಿ ಎಷ್ಟು ಸಮಸ್ಯೆಗಳು ಎದುರಾಗುತ್ತಿವೆ ಮತ್ತು ಅವುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಜನರಿಗೆ ಅರ್ಥಮಾಡಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ
Image
ವಿಶ್ವ ವಾಯು ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ವಿಶ್ವ ಸಾಗರ ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ರಾಷ್ಟ್ರೀಯ ಬೆಸ್ಟ್‌ ಫ್ರೆಂಡ್ ದಿನದ ಮಹತ್ವವನ್ನು ತಿಳಿಯಿರಿ
Image
ಪ್ರಕೃತಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಇದನ್ನೂ ಓದಿ: ಹಸಿರೇ ಉಸಿರು; ಪ್ರಕೃತಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಬರಗಾಲದ ಸಮಸ್ಯೆಯನ್ನು ಎದುರಿಸುವುದು ಹೇಗೆ?

ಬರಗಾಲದ ಸಮಸ್ಯೆಯ ವಿರುದ್ಧ ಹೋರಾಡಲು ಮೊದಲನೆಯದಾಗಿ, ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಸಾಧ್ಯವಾದಷ್ಟು ಮರ ಗಿಡಗಳನ್ನು ನೆಡುವತ್ತ ಗಮನ ಹರಿಸಬೇಕು. ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಶ್ರಮಿಸಬೇಕು, ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸದಂತೆ ರಕ್ಷಿಸಬೇಕು. ಮಳೆ ನೀರನ್ನು ಸಂರಕ್ಷಿಸಬೇಕು,  ಭೂಮಿ ಬಂಜರು ಆಗದಂತೆ ರಕ್ಷಿಸಬೇಕು. ಹೀಗೆಲ್ಲಾ ಮಾಡುವ ಮೂಲಕ ಬರಗಾಲ ಮತ್ತು ಮರುಭೂಮೀಕರಣ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ