ಸಾಮಾನ್ಯವಾಗಿ ಪೇರಲ ಹಣ್ಣು ಪೌಷ್ಟಿಕ ಹಣ್ಣಾಗಿದ್ದು ಇದು ಕಡಿಮೆ ಕ್ಯಾಲೊರಿ ಮತ್ತು ಫೈಬರ್ ಅಂಶ ಅಧಿಕವಾಗಿರುವ ಹಣ್ಣಾಗಿದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿಯೂ ಹೌದು. ಪೇರಲ ಹಣ್ಣು ಮಾತ್ರವಲ್ಲ ಅದರ ಎಲೆಗಳೂ ಸಹ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪೇರಲ ಎಲೆಗಳು ಹೃದಯ, ಜೀರ್ಣಕ್ರಿಯೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ಜು ಬಲಪಡಿಸುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪೇರಲೆ ಹಣ್ಣನ್ನು ಸೇವಿಸದಿರುವುದು ಉತ್ತಮ. ಜತೆಗೆ ಅತಿಯಾಗಿ ಈ ಹಣ್ಣನ್ನು ಸೇವಿಸುವುದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಪೇರಲೆ ಹಣ್ಣಿನಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್, ವಿಟಮಿನ್ ಸಿ ಮತ್ತು ಪೊಟ್ಯಾಷಿಯಂ ಸಮೃದ್ಧವಾಗಿರುತ್ತದೆ. ಒಂದು ಪೇರಲ ಹಣ್ಣಿನಲ್ಲಿ 23 ಗ್ರಾಂ ಕಾರ್ಬೋಹೈಡ್ರೆಟ್ಗಳು, 9 ಗ್ರಾಂ ಫೈಬರ್ ಹಾಗೂ ಅತ್ಯಲ್ಪ ಪಿಷ್ಟದ ಪ್ರಮಾಣ ಕಂಡು ಬರುತ್ತದೆ. ದೇಹಕ್ಕೆ ಬೇಕಾದ ಉತ್ತಮ ಪೌಷ್ಟಿಕಾಂಶಗಳು ಪೇರಲೆ ಹಣ್ಣಿನಲ್ಲಿ ಸಿಗುತ್ತವೆ. ಇದರಲ್ಲಿ ಫೋಲೇಟ್, ಬೀಟಾ ಕ್ಯಾರಟಿನ್ನಂತಹ ಪೌಷ್ಠಿಕಾಂಶದ ಅಂಶಗಳು ಕಂಡು ಬರುತ್ತವೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಅತಿಯಾದ ಪೇರಲೆ ಹಣ್ಣಿನ ಸೇವನೆಯನ್ನು ತಪ್ಪಿಸುವುದು ಮುಖ್ಯ.
ವಾಯು ಸಮಸ್ಯೆ
ಪೇರಲೆಯಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಅಂಶ ಇರುತ್ತದೆ. ಇವುಗಳು ದೇಹಕ್ಕೆ ಹೆಚ್ಚಾದ ಪ್ರಮಾಣದಲ್ಲಿ ಸೇರಿಕೊಂಡಾಗ ಹೊಟ್ಟೆ ಉಬ್ಬುವ ಸಮಸ್ಯೆ ಕಾಡಬಹುದು. ನೀವು ಹೊಟ್ಟು ಉಬ್ಬುವುದು ಅಥವಾ ಗ್ಯಾಸ್ (ವಾಯು) ಸಮಸ್ಯೆಯನ್ನು ಹೊಂದಿದ್ದರೆ ಅಂತಹ ಸಮಯದಲ್ಲಿ ಪೇರಲೆ ಹಣ್ಣು ಸೆವನೆಯನ್ನು ಆದಷ್ಟು ತಪ್ಪಿಸುವುದು ಒಳಿತು. ಒಂದು ಪೂರ್ಣ ಹಣ್ಣಿನ ಸೇವನೆಯಿಂದ ದೇಹವು ಶೇ. 40ರಷ್ಟು ಫ್ರಕ್ಟೋಸ್ ಅಂಶವನ್ನು ಪಡೆಯುತ್ತದೆ. ಇದರಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿದೆ.
ಕರುಳಿನ ಸಿಂಡ್ರೋಮ್ನಿಂದ ಬಳಲುತ್ತಿದ್ದರೆ ಸೇವಿಸಬೇಡಿ
ಪೇರಲೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ ಅತಿಯಾದ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲಿಯೂ ಮುಖ್ಯವಾಗಿ ಕರುಳಿನ ಸಿಂಡ್ರೋಮ್ನಿಂದ ಬಳಲುತ್ತಿದ್ದರೆ ಮಿತವಾಗಿ ಪೇರಲ ಹಣ್ಣು ಸೇವಿಸುವುದು ಉತ್ತಮ.
ಪೇರಲ ಹಣ್ಣು ಸೇವನೆ
ಹೆಚ್ಚು ಅಂದರೆ ಒಂದು ಪೂರ್ಣ ಹಣ್ಣನ್ನು ಸೇವಿಸಬಹುದು. ರುಚಿ ಎಂದು ಅದಕ್ಕಿಂತಲೂ ಹೆಚ್ಚಿನ ಹಣ್ಣಿನ ಸೇವನೆ ಮಾಡುವುದರಿಂದ ಶೀತ, ಕಫದಂತಹ ಸಮಸ್ಯೆ ಕಾಡುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಹಿತಮಿತವಾಗಿ ಸೇವಿಸಿ ಪೇರಲೆ ಹಣ್ಣಿನ ಪ್ರಯೋಜನಗಳನ್ನು ಪಡೆಯಿರಿ.
ಇದನ್ನೂ ಓದಿ:
Health Tips: ಈ 5 ಹಣ್ಣಿನ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿ ತರಬಹುದು! ಆರೋಗ್ಯದ ಕುರಿತು ಗಮನವಿರಲಿ
Health Tips: ಸಿಟ್ರಸ್ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆಯೇ? ಇಲ್ಲಿದೆ ಮಾಹಿತಿ