AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Water Fasting: ನೀರಿನ ಉಪವಾಸ ಎಂದರೇನು?; ಆರೋಗ್ಯದ ಮೇಲೆ ಅದರ ಪರಿಣಾಮಗಳೇನು?

ತೂಕ ಇಳಿಸಿಕೊಳ್ಳಲು ಇಂದಿನ ಯುವಕ-ಯುವತಿಯರು ಮಾಡುವ ಡಯೆಟ್​ನಲ್ಲಿ ನೀರಿನ ಉಪವಾಸ ಅಥವಾ ವಾಟರ್ ಫಾಸ್ಟಿಂಗ್ ಕೂಡ ಒಂದು. ಈ ವಾಟರ್ ಫಾಸ್ಟಿಂಗ್​ನಿಂದ ಯಾರಿಗೆಲ್ಲ ಉಪಯೋಗವಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Water Fasting: ನೀರಿನ ಉಪವಾಸ ಎಂದರೇನು?; ಆರೋಗ್ಯದ ಮೇಲೆ ಅದರ ಪರಿಣಾಮಗಳೇನು?
ನೀರಿನ ಉಪವಾಸ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 27, 2023 | 7:14 PM

ತೂಕ ಇಳಿಸಿಕೊಳ್ಳಲು ನಾವು ಅನೇಕ ರೀತಿಯ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತೇವೆ. ಆದರೆ, ವೈದ್ಯರ ಸಲಹೆಯಿಲ್ಲದೆ ನಾವು ಕೆಲವೊಮ್ಮೆ ಮಾಡುವ ಡಯೆಟ್​ನಿಂದ ಪ್ರಯೋಜನಕ್ಕಿಂತ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು. ಇತ್ತೀಚೆಗೆ, ಡಯಟಿಂಗ್ ಜೊತೆಗೆ ವಿವಿಧ ರೀತಿಯ ಉಪವಾಸಗಳು ಸಹ ಟ್ರೆಂಡ್ ಆಗುತ್ತಿವೆ. ತೂಕ ಇಳಿಸಿಕೊಳ್ಳಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಈ ಉಪವಾಸಗಳನ್ನು ಮಾಡಲಾಗುತ್ತದೆ. ಈ ಉಪವಾಸಗಳಲ್ಲಿ ನೀರಿನ ಉಪವಾಸವೂ ಒಂದು. ನೀರಿನ ಉಪವಾಸ ಎಂದರೇನು ಮತ್ತು ಅದರ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ನೀರಿನ ಉಪವಾಸ ಎಂದರೇನು?:

ನೀರಿನ ಉಪವಾಸದಲ್ಲಿ ವ್ಯಕ್ತಿಯು ನೀರನ್ನು ಹೊರತುಪಡಿಸಿ ಬೇರೆ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ಉಪವಾಸದಲ್ಲಿ ನೀರನ್ನು ಮಾತ್ರ ಕುಡಿಯಲಾಗುತ್ತದೆ. ಈ ಉಪವಾಸವನ್ನು ಸಾಮಾನ್ಯವಾಗಿ 24 ರಿಂದ 72 ಗಂಟೆಗಳ ಕಾಲ ಮಾಡಲಾಗುತ್ತದೆ. ತೂಕವನ್ನು ಕಳೆದುಕೊಳ್ಳಲು ಇದು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಜನರು ಈ ಉಪವಾಸವನ್ನು ಹೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಕೊಬ್ಬಿನ ಪ್ರಮಾಣ ಕಡಿತವಾಗುವುದರಿಂದ ತೂಕವೂ ಕಡಿಮೆಯಾಗುತ್ತದೆ.

ಇದನ್ನೂ ಓದಿ: Constipation Diet Plan: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ, ಈ ಆಹಾರ ಪದಾರ್ಥಗಳು ನಿಮ್ಮ ಡಯೆಟ್​ನಲ್ಲಿರಲಿ

ನೀರಿನ ಉಪವಾಸದ ಪ್ರಯೋಜನಗಳೇನು?:

ನೀರಿನ ಉಪವಾಸವು ನಮ್ಮ ಜೀವಕೋಶಗಳನ್ನು ಮರುಬಳಕೆ ಮಾಡಲು ಅಥವಾ ಕ್ಯಾನ್ಸರ್​ನಂತಹ ರೋಗಗಳಿಗೆ ಕಾರಣವಾಗುವ ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ.

ನೀರಿನ ಉಪವಾಸವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ, ವೈದ್ಯರ ಸಲಹೆಯಿಲ್ಲದೆ ಈ ಉಪವಾಸ ಮಾಡುವುದರಿಂದ ಕೆಲವರಿಗೆ ತೊಂದರೆಗಳು ಕೂಡ ಆಗಬಹುದು.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಬೇಕಾ?; ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಿ

ನೀರಿನ ಉಪವಾಸದ ಅನಾನುಕೂಲಗಳು ಏನು?:

ಕ್ಯಾಲೋರಿಗಳ ಕೊರತೆಯಿಂದಾಗಿ ನೀರಿನ ಉಪವಾಸದ ಅವಧಿಯಲ್ಲಿ ನಮ್ಮ ದೇಹವು ಶಕ್ತಿಗಾಗಿ ಸಂಗ್ರಹಿಸಿದ ಕೊಬ್ಬನ್ನು ಬಳಸುತ್ತದೆ. ಈ ಕಾರಣದಿಂದಾಗಿ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ಕಾರಣದಿಂದಾಗಿ ನೀವು ಇದ್ದಕ್ಕಿದ್ದಂತೆ ತೂಕವನ್ನು ಕಳೆದುಕೊಳ್ಳುತ್ತೀರಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ನಂತರ ಈ ತೂಕವು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಈ ಉಪವಾಸದ ಸಮಯದಲ್ಲಿ ಕೊಬ್ಬಿನ ಜೊತೆಗೆ, ಸ್ನಾಯುಗಳು ಸಹ ದುರ್ಬಲಗೊಳ್ಳುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಕೇವಲ ನೀರು ಕುಡಿಯುವುದರಿಂದ ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗುತ್ತದೆ, ಇದರಿಂದ ಆಯಾಸ, ತಲೆಸುತ್ತು ಮುಂತಾದ ಸಮಸ್ಯೆಗಳು ಬರಬಹುದು. ನೀರಿನ ಉಪವಾಸದಿಂದಾಗಿ ನಿರ್ಜಲೀಕರಣದ ಅಪಾಯವೂ ಇದೆ. ಇಷ್ಟು ನೀರು ಕುಡಿದರೂ ನಿರ್ಜಲೀಕರಣವಾಗುವುದು ಹೇಗೆ ಎಂಬುದು ಸ್ವಲ್ಪ ವಿಚಿತ್ರ ಎನಿಸಬಹುದು. ಆದರೂ ಇದು ನಿಜ. ಕೇವಲ ನೀರು ಕುಡಿಯುವುದರಿಂದ ಮತ್ತು ಏನನ್ನೂ ತಿನ್ನದಿರುವುದರಿಂದ ನಿರ್ಜಲೀಕರಣ ಉಂಟಾಗುವ ಅಪಾಯವಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ