ರಾಗಿ ಮುದ್ದೆ ನಿಮ್ಮ ಆಹಾರದ ಒಂದು ಭಾಗವಾದರೆ ಈ ಎಲ್ಲಾ ಪ್ರಯೋಜನಗಳು ನಿಮ್ಮದಾಗಲಿದೆ

ರಾಗಿ ಮುದ್ದೆ ಆಹಾರವು ಇತರೆ ಆಹಾರಗಳಿಗಿಂತ ಭಿನ್ನವಾಗಿದ್ದು, ನಿತ್ಯ ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ತೂಕ ನಷ್ಟ ಮಾಡಿಕೊಳ್ಳುವವರಿಗೆ, ಶಕ್ತಿಯುತ ಮೂಳೆಗಳಿಗಾಗಿ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

TV9 Web
| Updated By: Rakesh Nayak Manchi

Updated on:Aug 05, 2022 | 1:21 PM

ರಾಗಿ ಮುದ್ದೆ ಆಹಾರವು ಇತರೆ ಆಹಾರಗಳಿಗಿಂತ ಭಿನ್ನವಾಗಿದ್ದು, ನಿತ್ಯ ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ತೂಕ ನಷ್ಟ ಮಾಡಿಕೊಳ್ಳುವವರಿಗೆ, ಶಕ್ತಿಯುತ ಮೂಳೆಗಳಿಗಾಗಿ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ರಾಗಿ ಮುದ್ದೆ ನಿಮ್ಮ ಆಹಾರದಲ್ಲಿ ಯಾಕೆ ಇರಬೇಕು? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Healthy Food Make Ragi Mudde a part of diet Benefits of eating Ragi mudde

1 / 10
ತೂಕ ನಷ್ಟ: ತೂಕ ನಷ್ಟಕ್ಕೆ ನೀವು ಭಕ್ಷ್ಯಗಳಲ್ಲಿ ರಾಗಿ ಮುದ್ದೆಯನ್ನು ಸೇರಿಸಿಕೊಳ್ಳಬಹುದು. ಇದು ಟ್ರಿಪ್ಟೊಫಾನ್ ಎಂಬ ಅಪರೂಪದ ಅಮೈನೋ ಆಮ್ಲವನ್ನು ಹೊಂದಿರುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ. ಅವು ಪ್ರೋಟೀನ್ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಸಹ ಹೊಂದಿರುತ್ತವೆ.

Healthy Food Make Ragi Mudde a part of diet Benefits of eating Ragi mudde

2 / 10
Healthy Food Make Ragi Mudde a part of diet Benefits of eating Ragi mudde

ಮೂಳೆಗಳ ಆರೋಗ್ಯ: ರಾಗಿ ಮುದ್ದೆ ಸೇವನೆಯಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು. ರಾಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ ಇದೆ. ವೃದ್ಧಾಪ್ಯದಲ್ಲಿ ರಾಗಿ ಮುದ್ದೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ. ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳು ಚಯಾಪಚಯ ದರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಸುಗಮಗೊಳಿಸಲು ಮತ್ತು ಉತ್ತಮ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.

3 / 10
Healthy Food Make Ragi Mudde a part of diet Benefits of eating Ragi mudde

ಮಧುಮೇಹಕ್ಕೆ ಪರಿಣಾಮಕಾರಿ: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಮಧುಮೇಹದ ದುಷ್ಪರಿಣಾಮಗಳಿಂದ ಬಳಲುತ್ತಿದ್ದಾರೆ. ಈ ಖಾದ್ಯವು ರೋಗದ ಲಕ್ಷಣಗಳನ್ನು ಮತ್ತು ಜಠರಗರುಳಿನ ಅಸ್ವಸ್ಥತೆಗಳನ್ನು ಕಡಿಮೆ ಮಾಡುತ್ತದೆ. ರಾಗಿ ಮುದ್ದೆಯಲ್ಲಿನ ಫೈಬರ್ ಅಂಶವು ಸಕ್ಕರೆಯ ಮಟ್ಟವನ್ನು ಮತ್ತು ಜೀರ್ಣಕ್ರಿಯೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

4 / 10
Healthy Food Make Ragi Mudde a part of diet Benefits of eating Ragi mudde

ಕಡಿಮೆ ಕೊಲೆಸ್ಟ್ರಾಲ್: ರಾಗಿಯಲ್ಲಿರುವ ಅಮೈನೋ ಆಮ್ಲಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಯಕೃತ್ತಿನಿಂದ ಅನಗತ್ಯ ಕೊಬ್ಬನ್ನು ನಿರ್ಮೂಲನೆ ಮಾಡುತ್ತದೆ. ಹೃದಯ ಮತ್ತು ಯಕೃತ್ತಿನಲ್ಲಿ ಪ್ಲೇಗ್ ಮಟ್ಟಗಳ ರಚನೆಯು ಕಡಿಮೆಯಾಗುತ್ತದೆ. ಪ್ರತಿಯಾಗಿ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಿಸುತ್ತದೆ.

5 / 10
Healthy Food Make Ragi Mudde a part of diet Benefits of eating Ragi mudde

ರಕ್ತಹೀನತೆ: ನಿಮ್ಮ ದೇಹದಲ್ಲಿನ ಕಬ್ಬಿಣದ ಮಟ್ಟ ಆರೋಗ್ಯಕರವಾಗಿರಲು ನೀವು ದೇಹದಲ್ಲಿ ಸಾಕಷ್ಟು ಪ್ರಮಾಣದ ಹಿಮೋಗ್ಲೋಬಿನ್ ಅನ್ನು ಹೊಂದಿರಬೇಕು. ಹಿಮೋಗ್ಲೋಬಿನ್ ಮಟ್ಟದಲ್ಲಿನ ಕೊರತೆಯು ರಕ್ತಹೀನತೆ ಮತ್ತು ದೇಹದ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ರಾಗಿ ಮುದ್ದೆಯ ನಿಯಮಿತ ಸೇವನೆಯು ರಕ್ತದ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡಲಿದೆ.

6 / 10
Healthy Food Make Ragi Mudde a part of diet Benefits of eating Ragi mudde

ವಿಶ್ರಾಂತಿ: ರಾಗಿ ಮುದ್ದೆ ಸೇವನೆಯಿಂದ ದೇಹಕ್ಕೆ ವಿಶ್ರಾಂತಿ ಸಿಗಲಿದೆ. ನಕಾರಾತ್ಮಕ ಭಾವನೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ದೈನಂದಿನ ಆಹಾರದಲ್ಲಿ ರಾಗಿ ಮುದ್ದೆಗಳನ್ನು ಸೇರಿಸಿಕೊಳ್ಳಬಹುದು. ರಾಗಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಸಕಾರಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ.

7 / 10
Healthy Food Make Ragi Mudde a part of diet Benefits of eating Ragi mudde

ತಂಪಾದ ದೇಹ: ರಾಗಿ ಮುದ್ದೆಯನ್ನು ವಿಶೇಷವಾಗಿ ಬೇಸಿಗೆಯಲ್ಲಿ ಸೇವನೆ ಮಾಡಿದರೆ ದೇಹವನ್ನು ತಂಪಾಗಿರಿಸುತ್ತದೆ. ಇದು ಬಿಸಿ ವಾತಾವರಣಕ್ಕೆ ಸಂಬಂಧಿಸಿದ ರೋಗಗಳನ್ನು ಸಹ ದೂರ ಮಾಡುತ್ತದೆ.

8 / 10
Healthy Food Make Ragi Mudde a part of diet Benefits of eating Ragi mudde

ಎದೆ ಹಾಲು ಉತ್ಪಾದನೆಗೆ ಸಹಕಾರಿ: ರಾಗಿ ಮುದ್ದೆ ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರಮುಖ ಪೋಷಕಾಂಶಗಳ ಸಮೃದ್ಧ ಮೂಲವಾಗಿರುವುದರ ಜೊತೆಗೆ ಹಾಲುಣಿಸುವ ತಾಯಿಯಲ್ಲಿ ಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ.

9 / 10
Healthy Food Make Ragi Mudde a part of diet Benefits of eating Ragi mudde

ಚರ್ಮದ ಆರೋಗ್ಯ: ರಾಗಿ ಮುದ್ದೆಗಳನ್ನು ಸೇವನೆ ಮಾಡುವುದರಿಂದ ಚರ್ಮದ ಅರೋಗ್ಯವನ್ನು ಕಾಪಾಡಬಹುದು ಮತ್ತು ಕಾಂತಿಯುತ ಚರ್ಮವನ್ನು ಪಡೆಯಬಹುದು.

10 / 10

Published On - 1:03 pm, Fri, 5 August 22

Follow us