Weight Loss Tips: ಏನು ಮಾಡಿದರು ತೂಕ ಕಡಿಮೆಯಾಗುತ್ತಿಲ್ವಾ? ಹಾಗಾದರೆ ಈ ಸಲಹೆಗಳನ್ನು ಅನುಸರಿ..!

ತೂಕ ಹೆಚ್ಚಾಗುವುದರಿಂದ ಮಧುಮೇಹ, ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳು ಮಾತ್ರವಲ್ಲದೆ ಮೂತ್ರಪಿಂಡ, ಯಕೃತ್ತು, ಮೆದುಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Weight Loss Tips: ಏನು ಮಾಡಿದರು ತೂಕ ಕಡಿಮೆಯಾಗುತ್ತಿಲ್ವಾ? ಹಾಗಾದರೆ ಈ ಸಲಹೆಗಳನ್ನು ಅನುಸರಿ..!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 06, 2022 | 7:00 AM

ಸಾಮಾನ್ಯವಾಗಿ ತೂಕ ವೇಗವಾಗಿ ಹೆಚ್ಚಾಗುತ್ತೆ, ಆದರೆ ವೇಗವಾಗಿ ಕಡಿಮೆಯಾಗುವುದಿಲ್ಲ. ಹೆಚ್ಚುತ್ತಿರುವ ತೂಕವನ್ನು (Weight Loss)  ನಿಯಂತ್ರಿಸಲು ಜನರು ಸರ್ಕಸ್​ ಮಾಡುವುದುಂಟು. ಗಂಟೆಗಟ್ಟಲೆ ಜಿಮ್‌ನಲ್ಲಿ ವ್ಯಾಯಾಮ ಮಾಡುವುದು, ಆಹಾರದಲ್ಲಿ ಬದಲಾವಣೆಗಳನ್ನು ಮಾಡುವುದು, ಮನೆಮದ್ದುಗಳನ್ನು ಸಹ ಅನುಸರಿಸಲಾಗುತ್ತದೆ. ಆದಾಗ್ಯೂ, ಅವರು ಬಯಸಿದ ದೇಹವನ್ನು ಪಡೆಯುವುದಿಲ್ಲ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಬೊಜ್ಜು ಹೊಂದಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ರೋಗವಾಗಿ ಪರಿಣಮಿಸಲಿದೆ ಎನ್ನುತ್ತಾರೆ ತಜ್ಞರು. 1980 ರಿಂದ ಭಾರತ ಸೇರಿದಂತೆ 70 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥೂಲಕಾಯತೆಯ ಪ್ರಮಾಣವು ದ್ವಿಗುಣಗೊಂಡಿದೆ. ತೂಕ ಹೆಚ್ಚಾಗುವುದರಿಂದ ಮಧುಮೇಹ, ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳು ಮಾತ್ರವಲ್ಲದೆ ಮೂತ್ರಪಿಂಡ, ಯಕೃತ್ತು, ಮೆದುಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸ್ಥೂಲಕಾಯವನ್ನು ನಿಯಂತ್ರಿಸಲು ನೀವು ಬಯಸಿದ್ದಾದಲ್ಲಿ ವ್ಯಾಯಾಮ, ಆಹಾರ ಸೇವಿಸುವಾಗ ಕೆಲವು ವಿಶೇಷ ಅಂಶಗಳಿಗೆ ಗಮನ ಕೊಡಿ.

ಇದನ್ನೂ ಓದಿ: Dementia: ನಿಮ್ಮ ಆರೋಗ್ಯವನ್ನು ಹೀಗೆ ನೋಡಿಕೊಂಡರೆ ವಯಸ್ಸಾದ ಮೇಲೆ ಮರೆವಿನ ಕಾಯಿಲೆ ಬರದು

ಬೆಳಿಗ್ಗೆ ನಿಂಬೆ ರಸ ಕುಡಿಯಿರಿ:

ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು,  ಬೆಳಿಗ್ಗೆ ನಿಂಬೆ ರಸವನ್ನು ಕುಡಿಯಿರಿ. ನಿಂಬೆ ನೀರು ದೇಹವನ್ನು ಹೈಡ್ರೀಕರಿಸುತ್ತದೆ. ತೂಕವನ್ನು ನಿಯಂತ್ರಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ನೀವು ನಿಂಬೆ ನೀರಿನೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸಹ ತೆಗೆದುಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಸೇವಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

ಊಟಕ್ಕೆ ಮುಂಚೆ ಸಲಾಡ್​ ತಿನ್ನಿ:

ಊಟಕ್ಕೂ ಮುನ್ನ ಸಲಾಡ್ ಸೇವಿಸುವುದರಿಂದ ಹಸಿವು ನಿಯಂತ್ರಣದಲ್ಲಿದ್ದು ದೇಹದಲ್ಲಿ ಕ್ಯಾಲೋರಿ ಕಡಿಮೆಯಾಗುತ್ತದೆ. ಊಟಕ್ಕೆ ಮುಂಚೆ ಸಲಾಡ್ ತಿನ್ನುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಸಲಾಡ್ ಖನಿಜಗಳು, ವಿಟಮಿನ್ಗಳು ಮತ್ತು ಫೈಬರ್​ನಿಂದ ಸಮೃದ್ಧವಾಗಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕವನ್ನು ನಿಯಂತ್ರಿಸುತ್ತದೆ. ಸಲಾಡ್‌ನಲ್ಲಿರುವ  ರೋಗನಿರೋಧಕ ಅಂಶಗಳು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.

ರಾತ್ರಿ ಮಿತ ಆಹಾರ ಒಳ್ಳೆದು:

ನೀವು ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ನಿಮ್ಮ ಆಹಾರದಲ್ಲಿ ಬುದ್ಧಿವಂತಿಕೆಯಿರಬೇಕು. ಒಂದು ದಿನದಲ್ಲಿ ಎಷ್ಟು ರೊಟ್ಟಿ ಮತ್ತು ಎಷ್ಟು ಅನ್ನವನ್ನು ತಿನ್ನಬೇಕು ಎಂಬುದರ ಬಗ್ಗೆ ವಿಶೇಷ ಗಮನ ಕೊಡಿ. ಸಾದ್ಯವಾದಷ್ಟು ಹಗಲಿನಲ್ಲಿ ರೊಟ್ಟಿ ತಿನ್ನಲು ಪ್ರಯತ್ನಿಸಿ. ರಾತ್ರಿ ರೊಟ್ಟಿ ತಿನ್ನುವುದನ್ನು ತ್ಯಜಿಸಿ. ರಾತ್ರಿಯಲ್ಲಿ ರೊಟ್ಟಿ ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬೊಜ್ಜು ಕೂಡ ಹೆಚ್ಚಾಗುತ್ತದೆ. ರಾತ್ರಿಯಲ್ಲಿ ರೊಟ್ಟಿ ಮತ್ತು ಅನ್ನ ಎರಡನ್ನೂ ತಿನ್ನುವುದರಿಂದ ನಿಮಗೆ ಅನಾನುಕೂಲವಾಗಬಹುದು. ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಅನ್ನ ತಿಂದರೆ ಅನ್ನವನ್ನೇ ತಿನ್ನಿ. ಅದರೊಂದಿಗೆ ರೊಟ್ಟಿ ತಿನ್ನಬೇಡಿ. ಮತ್ತು ರಾತ್ರಿಯ ಊಟವನ್ನು ತುಂಬಾ ತಡ ಮಾಡದೆ ಬೇಗ ಸೇವಿಸಬೇಕು.

ಇದನ್ನೂ ಓದಿ: ರಾಗಿ ಮುದ್ದೆ ನಿಮ್ಮ ಆಹಾರದ ಒಂದು ಭಾಗವಾದರೆ ಈ ಎಲ್ಲಾ ಪ್ರಯೋಜನಗಳು ನಿಮ್ಮದಾಗಲಿದೆ

ಊಟವಾದ ಬಳಿಕ ನೀರು ಕುಡಿಯಬೇಡಿ:

ಕೆಲವರಿಗೆ ಆಹಾರದ ಜೊತೆಗೆ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆಹಾರದೊಂದಿಗೆ ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ನಿಮ್ಮ ಬೊಜ್ಜು ಕೂಡ ವೇಗವಾಗಿ ಹೆಚ್ಚಾಗುತ್ತದೆ. ಊಟ ಮಾಡಿದ ಒಂದು ಗಂಟೆಯ ನಂತರ ನೀರು ಕುಡಿಯುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಮತ್ತು ಜೀರ್ಣಕ್ರಿಯೆ ಸುಗಮವಾಗಿರುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.