Heart Health: ಹೃದಯದ ಆರೋಗ್ಯ ಕಾಪಾಡಲು ಏನು ಮಾಡಬೇಕು? ಏನು ಮಾಡಬಾರದು?
ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವ ಮಾರ್ಗವನ್ನು ನೀವು ಹುಡುಕುತ್ತಿದ್ದೀರಾ? ಕಳಪೆ ಆಹಾರದ ಆಯ್ಕೆಗಳು ನಿಮ್ಮ ಹೃದಯ, ತೂಕ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವ ಮಾರ್ಗವನ್ನು ನೀವು ಹುಡುಕುತ್ತಿದ್ದೀರಾ? ಕಳಪೆ ಆಹಾರದ ಆಯ್ಕೆಗಳು ನಿಮ್ಮ ಹೃದಯ, ತೂಕ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಆದರೆ ನಿಮ್ಮ ಆಹಾರಕ್ರಮವನ್ನು ಸುಧಾರಿಸಲು ಸಣ್ಣ, ಸುಸ್ಥಿರ ಬದಲಾವಣೆಗಳನ್ನು ಮಾಡುವುದು ಮುಖ್ಯವಾಗುತ್ತದೆ. ಯಾವ ಆಹಾರಗಳು ಹೃದಯಕ್ಕೆ ಆರೋಗ್ಯಕರವಲ್ಲ ಎಂಬುದರ ಕುರಿತು ಬಹಳಷ್ಟು ತಪ್ಪು ಮಾಹಿತಿಗಳಿವೆ, ಮನೆಗೆ ನೀವು ತರುವ ಆಹಾರ ಪದಾರ್ಥಗಳು, ಹೋಟೆಲ್ಗೆ ಹೋದಾಗ ನೀವು ಆಯ್ಕೆ ಮಾಡುವ ತಿನಿಸುಗಳು ಕೂಡ ಮುಖ್ಯವಾಗಿರುತ್ತದೆ.
ಹೃದಯದ ಆರೋಗ್ಯ: ಏನು ಮಾಡಬೇಕು, ಏನು ಮಾಡಬಾರದು? -ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಕೇಂದ್ರೀಕರಿಸಿ.
-ದಿನಕ್ಕೆ ಕನಿಷ್ಠ 5 ಬಾರಿ ತಿನ್ನುವುದು, ಆಹಾರದಲ್ಲಿ ಉತ್ತಮವಾದ್ದು ಮಾತ್ರ ತಿನ್ನಿ
– ಫೈಬರ್, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರ ತರಕಾರಿಗಳನ್ನು ಸೇವಿಸಿ -ಅದು ಆರೋಗ್ಯಕರ ಹೃದಯ ಮತ್ತು ದೇಹವನ್ನು ಉತ್ತೇಜಿಸುತ್ತದೆ, ಜೊತೆಗೆ ಅವು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ, ಇದು ತೂಕ ನಿರ್ವಹಣೆಯನ್ನು ಉತ್ತೇಜಿಸುತ್ತದೆ.
-ಸಕ್ಕರೆ ಭರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
ಮನುಷ್ಯನ ದೇಹದಲ್ಲಿ ತುಂಬಾ ಮುಖ್ಯವಾದ ಭಾಗ ಅಂದರೆ ಹೃದಯ. ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಆರೋಗ್ಯವಾಗಿರಬೇಕು ಎಂದು ಹಲವಾರು ಬಗೆಯ ವ್ಯಾಯಾಮ ಮಾಡ್ತೀವಿ, ಡಯಟ್ ಕೂಡ ಮಾಡ್ತೀವಿ. ಆದರೆ ಹೃದಯಕ್ಕೆ ಬೇಕಾದ ಆರೋಗ್ಯಕರ ಆಹಾರಗಳು ಎಂದು ತುಂಬಾ ಜನರಿಗೆ ಗೊತ್ತಿರಲ್ಲ. ನಿಮ್ಮ ನಿತ್ಯದ ಆಹಾರದಲ್ಲಿ ಯಾವ ಯಾವ ಆಹಾರವನ್ನು ಸೇವಿಸಿದರೇ ಹೃದಯಕ್ಕೆ ಒಳ್ಳೆದು ಎಂಬ ಪಟ್ಟಿ ಇಲ್ಲಿದೆ. ಹೌದು, ನಾವು ಹೇಳುವ ಕೆಲವು ಆಹಾರವನ್ನು ನೀವು ಪ್ರತಿನಿತ್ಯವು ಸೇವೆಸುವುದರಿಂದ ಹಲವು ಹೃದಯ ಸಂಬಂಧಿತ ರೋಗಗಳಿಂದ ಪಾರಾಗಬಹುದು. ಹೃದಯದ ಆರೋಗ್ಯ ಕಾಪಾಡಲು ಹಲವು ಬಗೆ ಬಗೆಯ ತರಾಕಾರಿ, ಹಣ್ಣುಗಳು ಹಾಗೂ ಆಹಾರಗಳು ಇದೆ. ಅವುಗಳು ಯಾವುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೃದಯಕ್ಕೆ ಅವಶ್ಯವಾದ 10 ಆಹಾರಗಳು ಯಾವುದು?
ಓಮೇಘಾ- 3ಎಸ್ ಗುಣವುಳ್ಳ ಮೀನುಗಳು ಅಂದರೆ ಸಾಲ್ಮನ್, ಟುನಾ, ಮ್ಯಕ್ರೇಲ್, ಹೆರ್ರಿಂಗ್ ಮತ್ತು ಟ್ರಾಟ್ ಪ್ರಜಾತಿಯ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ಹೃದಯಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ.
ಬಾದಾಮಿ, ವಾಲ್‍ನಟ್‍ಗಳಂತಹ ಒಣ ಬೀಜಗಳನ್ನು ಸೇವಿಸುವುದರಿಂದ ಬೇಗ ನಿಮ್ಮ ಹೊಟ್ಟೆ ತುಂಬುತ್ತದೆ ಹಾಗೂ ದೇಹಕ್ಕೂ ಒಳ್ಳೆಯದು. ಇದರಿಂದ ನೀವು ಕೊಲೆಸ್ಟ್ರಾಲ್ ಇರುವ ತಿನಿಸುಗಳನ್ನು ತಿನ್ನುವುದು ಕಡಿಮೆಯಾಗುತ್ತದೆ. ಹೀಗೆ ಮಾಡಿದರೇ ಅಪಾಯಕಾರಿ ಕೊಲೆಸ್ಟ್ರಾಲ್ ಹೃದಯಕ್ಕೆ ಸೇರುವುದಿಲ್ಲ.
ಸ್ಟ್ರಾಬೆರಿ, ಬ್ಲೂಬೆರಿ, ಕ್ಯಾನ್‍ಬೆರಿ ಅಥವಾ ರಸ್‍ಬೆರಿ ಅಂತಹ ಹಣ್ಣುಗಳನ್ನು ಮೊಸರು ಅಥವಾ ಧಾನ್ಯಗಳೊಡನೆ ಸೇವಿಸುವುದರಿಂದ ಹೃದಯಕ್ಕೆ ಬೇಕಾದ ಫೈಟೋನ್ಯೂಟ್ರಿಯಂಟ್‍ಗಳು ಹಾಗೂ ಫೈಬರ್ ದೊರೆಯುತ್ತದೆ.
ಅಗಸೆ ಬೀಜದಲ್ಲಿ (ಫ್ಲಾಕ್ಸ್ ಸೀಡ್) ಓಮೇಘಾ-3 ಕೊಬ್ಬಿನಾಮ್ಲಗಳ ಅಂಶವಿರುತ್ತದೆ. ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ನೇರವಾಗಿ ತಿನ್ನುವುದರಿಂದ ದೇಹಕ್ಕೆ ಪೋಷಕಾಂಶ ದೊರೆಯುತ್ತದೆ. ಅಲ್ಲದೆ ರಕ್ತದ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಿಡಿತದಲ್ಲಿಡುತ್ತದೆ.
ಓಟ್ ಮೀಲ್ ನಲ್ಲಿ ಪೋಷಕಾಂಶದ ಆಗರವೇ ತುಂಬಿರುತ್ತದೆ. ಇದನ್ನು ದಿನ ನಿತ್ಯದ ಆಹಾದಲ್ಲಿ ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. -ನಿತ್ಯವೂ ನಿಮ್ಮ ಆಹಾರದಲ್ಲಿ 20-30 ಗ್ರಾಂ ಫೈಬರ್ ಇರಲಿ.
ಏನು ತಿನ್ನಬಾರದು -ಹೆಚ್ಚು ಸಕ್ಕರೆ ಇರುವ ಪದಾರ್ಥಗಳು, ಜ್ಯೂಸ್, ಪೇಸ್ಟ್ರಿ ಸೇರಿದಂತೆ ಹಲವು ಪದಾರ್ಥಗಳಿಂದ ದೂರವಿರಿ. -ನೀವು ಈಗಾಗಲೇ ಮದ್ಯಪಾನ ಮಾಡುತ್ತಿಲ್ಲ ಎಂದಾದರೆ ಎಂದೂ ಮದ್ಯಪಾನವನ್ನು ಶುರು ಮಾಡಬೇಡಿ, ಧೂಮಪಾನವೂ ಬೇಡ, ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ. ತೂಕವನ್ನು ಒಂದು ಹಂತದಲ್ಲಿ ಇಟ್ಟುಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ