Heart Attack: ಹೃದಯಾಘಾತದ ಆರಂಭಿಕ ಈ ಲಕ್ಷಣಗಳನ್ನು ಪತ್ತೆ ಮಾಡಿ, ಅಪಾಯದಿಂದ ಪಾರಾಗಿ

ಹೃದಯಾಘಾತ(Heart Attack)ವು ಯಾವ ವಯಸ್ಸಿನಲ್ಲಿ ಬೇಕಾದರೂ ಸಂಭವಿಸಬಹುದು, ಆದರೆ ಅದರ ಲಕ್ಷಣಗಳನ್ನು ನೀವು ತಿಳಿದಿದ್ದರೆ ಸುಲಭವಾಗಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬಹುದು.

Heart Attack: ಹೃದಯಾಘಾತದ ಆರಂಭಿಕ ಈ ಲಕ್ಷಣಗಳನ್ನು ಪತ್ತೆ ಮಾಡಿ, ಅಪಾಯದಿಂದ ಪಾರಾಗಿ
Heart Attack
Follow us
TV9 Web
| Updated By: ನಯನಾ ರಾಜೀವ್

Updated on: Aug 25, 2022 | 1:09 PM

ಹೃದಯಾಘಾತ(Heart Attack)ವು ಯಾವ ವಯಸ್ಸಿನಲ್ಲಿ ಬೇಕಾದರೂ ಸಂಭವಿಸಬಹುದು, ಆದರೆ ಅದರ ಲಕ್ಷಣಗಳನ್ನು ನೀವು ತಿಳಿದಿದ್ದರೆ ಸುಲಭವಾಗಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆಯ್ಕೆಯಾಗಬೇಕು.

ವಿಶೇಷವಾಗಿ ನೀವು 40 ವರ್ಷ ದಾಟಿದವರಾಗಿದ್ದರೆ ಇನ್ನೂ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಹೃದಯಾಘಾತವನ್ನು ಉಂಟುಮಾಡಲು ಬಹಳಷ್ಟು ಅಂಶಗಳು ಕಾರಣವಾಗಿವೆ, ಅವುಗಳಲ್ಲಿ ಕೆಲವು ವಯಸ್ಸಿಗೆ ಸಂಬಂಧಿಸಿವೆ, ಜೀವನ ಶೈಲಿ, ಕೊಲೆಸ್ಟ್ರಾಲ್ ಮಟ್ಟ ಮತ್ತು ಒತ್ತಡದ ಹೆಚ್ಚಳದಿಂದಲೂ ಸಂಭವಿಸುತ್ತದೆ.

ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯು ಸಾಮಾನ್ಯವಾಗಿ ಅನೇಕ ರೋಗಲಕ್ಷಣಗಳನ್ನು ಹೊಂದಿರುತ್ತಾನೆ. ಆದಾಗ್ಯೂ, ವೈದ್ಯರು ರೋಗಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಮತ್ತು ಹೃದಯಾಘಾತದ ಸಾಧ್ಯತೆಯನ್ನು ತಳ್ಳಿಹಾಕಬಹುದು.

ಹೃದಯಾಘಾತದ ಬಗ್ಗೆ ಸ್ವಯಂ-ಅರಿವು ಮೂಡಿಸಿಕೊಳ್ಳುವುದು ಮುಖ್ಯ, ನೀವು ಮಾತ್ರವಲ್ಲ, ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಹ ರೋಗಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಮುಂಚಿತವಾಗಿ ತಿಳಿದಿರಬೇಕು. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ವಿವರಿಸಿದಂತೆ ಹೃದಯಾಘಾತದ ಎರಡು ಸಾಮಾನ್ಯ ಲಕ್ಷಣಗಳಿವೆ.

ಎದೆಯ ಅಸ್ವಸ್ಥತೆ: ಈಗ, ಇದು ಸ್ನಾಯು ಸೆಳೆತ ಅಥವಾ ಗಾಯವಾದ ಸಂದರ್ಭದಲ್ಲಿ ನೀವು ಅನುಭವಿಸಬಹುದಾದ ಸಾಮಾನ್ಯ ಅಸ್ವಸ್ಥತೆ ಅಲ್ಲ, ಹೃದಯಾಘಾತ ಸಂಭವಿಸುವುದಕ್ಕೂ ಮುನ್ನ ವ್ಯಕ್ತಿಯ ಭುಜ, ತೋಳು ಮತ್ತು ಕುತ್ತಿಗೆಯ ಪ್ರದೇಶಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.

ಎದೆಯ ಮಧ್ಯದಲ್ಲಿ ಬಿಗಿತವನ್ನು ಅನುಭವಿಸುತ್ತಾನೆ. ನೋವು ಒಂದೇ ಬಾರಿಗೆ ಅನುಭವಿಸಬಹುದು ಅಥವಾ ಅನುಭವಿಸದಿರಬಹುದು. ಕೆಲವರು ಮೊದಲು ಎದೆಯ ಗೂಡಿನಲ್ಲಿ ನೋವು ಅನುಭವಿಸಿ ಬಳಿಕ ಒಂದೇ ಸಲಕ್ಕೆ ಹೃದಯಾಘಾತ ಅನುಭವಿಸುತ್ತಾರೆ.

ಎದೆಯ ಮಧ್ಯದಲ್ಲಿ ನಿರ್ದಿಷ್ಟ ರೀತಿಯ ಒತ್ತಡ, ನೋವು, ಬಿಗಿತವನ್ನು ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

ಇತರೆ ಲಕ್ಷಣಗಳು  :ಲೆತಿರುಗುವಿಕೆ, ವಾಕರಿಕೆ, ಬೆವರು: ಹೃದಯಾಘಾತ ಉಂಟಾಗುತ್ತಿದೆ ಎನ್ನುವಾಗ ವ್ಯಕ್ತಿಯು ಎದೆ ನೋವು ಹೊರತುಪಡಿಸಿ ಇತರ ರೋಗಲಕ್ಷಣಗಳನ್ನು ಅನುಭವಿಸಬಹುದು. ಹೆಚ್ಚಿನ ಸಂದರ್ಭದಲ್ಲಿ ಬೆವರುವಿಕೆ ಅಥವಾ ತಲೆತಿರುಗುವಿಕೆಯೊಂದಿಗೆ ಬರುತ್ತದೆ. ಕೆಲವು ಸಂದರ್ಭಗಳಲ್ಲಿ, ಜನರು ಸೌಮ್ಯವಾದ ಎದೆ ನೋವು ಅನುಭವಿಸುತ್ತಿರುವಾಗ ಈ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ.

ಎದೆಯಲ್ಲಿ ಅಸ್ವಸ್ಥತೆ ಸೇರಿದಂತೆ ಇಂತಹ ಯಾವುದೇ ಲಕ್ಷಣಗಳನ್ನು ನೀವು ಎದುರಿಸುತ್ತಿದ್ದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ