Heart Attack:ಕೈಗಳಲ್ಲಿ ಜುಮ್ಮೆನ್ನುವ ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ, ಹೃದಯಾಘಾತದ ಲಕ್ಷಣವಾಗಿರಬಹುದು

ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ ಲಕ್ಷಣಗಳನ್ನು ಈ ಹಿಂದೆಯೇ ತೋರಿಸಿರುತ್ತದೆ ಆದರೆ ಯಾರೂ ಕೂಡ ಅದರ ಬಗ್ಗೆ ಹೆಚ್ಚು ಗಮನಹರಿಸಿರುವುದಿಲ್ಲ.

Heart Attack:ಕೈಗಳಲ್ಲಿ ಜುಮ್ಮೆನ್ನುವ ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ, ಹೃದಯಾಘಾತದ ಲಕ್ಷಣವಾಗಿರಬಹುದು
Heart Attack
Follow us
| Updated By: ನಯನಾ ರಾಜೀವ್

Updated on: Nov 20, 2022 | 1:35 PM

ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ ಲಕ್ಷಣಗಳನ್ನು ಈ ಹಿಂದೆಯೇ ತೋರಿಸಿರುತ್ತದೆ ಆದರೆ ಯಾರೂ ಕೂಡ ಅದರ ಬಗ್ಗೆ ಹೆಚ್ಚು ಗಮನಹರಿಸಿರುವುದಿಲ್ಲ. ಹೃದಯಾಘಾತ ಸಂಭವಿಸುವ ಕೆಲವು ದಿನಗಳ ಮೊದಲು, ಕೆಲವು ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ, ಅದನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ.

ಹೆಚ್ಚಿನ ಜನರು ಈ ಸಣ್ಣ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಉದಾಹರಣೆಗೆ, ಹೆಚ್ಚು ಆಮ್ಲೀಯತೆಯನ್ನು ಹೊಂದಿರುವುದು. ಕೈಯಲ್ಲಿ ಜುಮ್ಮೆನ್ನುವುದು, ಆಹಾರ ಜೀರ್ಣವಾಗುವುದಿಲ್ಲ. ಎದೆಯುರಿ, ಬೆನ್ನಿನ ಭಾಗದಲ್ಲಿ ನಿರಂತರ ನೋವು. ಹೃದಯಾಘಾತಕ್ಕೆ ಸಂಬಂಧಿಸಿದ ಹಲವು ಚಿಹ್ನೆಗಳಾಗಿವೆ.

ಹಾರ್ವರ್ಡ್ ಹೆಲ್ತ್ ರಿಸರ್ಚ್ ಏನು ಹೇಳುತ್ತದೆ? ಹೃದಯಾಘಾತದ ಅನೇಕ ಸಂದರ್ಭಗಳಲ್ಲಿ ಸಣ್ಣ ಚಿಹ್ನೆಗಳು ನೀವು ಬೇಗನೆ ವೈದ್ಯರ ಬಳಿಗೆ ಹೋಗಬೇಕು ಎಂಬ ಸಂಕೇತವನ್ನು ನೀಡುತ್ತವೆ, ಆದರೆ ಜನರು ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.

ಹಾರ್ವರ್ಡ್ ಹೆಲ್ತ್ ಇತ್ತೀಚೆಗೆ ಒಂದು ಸಂಶೋಧನೆಯನ್ನು ಪ್ರಕಟಿಸಿದೆ. ಅವರು ಮಹಿಳೆಯರ ಮೇಲೆ ಈ ಸಂಶೋಧನೆಯನ್ನು ಮಾಡಿದ್ದಾರೆ. ಇದರಲ್ಲಿ ಶೇ.95 ಮಹಿಳೆಯರು ಹೃದಯಾಘಾತವಾಗುವ ಒಂದು ತಿಂಗಳ ಮೊದಲು ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಂಡಿತ್ತು. ಸುಸ್ತಾಗಿ ನಿದ್ದೆ ಬಾರದಂತಹ ಅನುಭವ ಹೃದಯಾಘಾತಕ್ಕೆ ಒಂದು ತಿಂಗಳ ಮೊದಲು ಇಂತಹ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ

1. ಸಂಶೋಧನೆಯ ಪ್ರಕಾರ ಉಸಿರಾಟದ ತೊಂದರೆ, ದೌರ್ಬಲ್ಯ, ರಾತ್ರಿಯಲ್ಲಿ ಬೆವರುವುದು, ತಲೆತಿರುಗುವಿಕೆ ಮತ್ತು ವಾಂತಿ ಹೃದಯಾಘಾತದ ಆರಂಭಿಕ ಲಕ್ಷಣಗಳಾಗಿರಬಹುದು. ಮತ್ತೊಂದೆಡೆ, ಹೆಚ್ಚಿನ ಪುರುಷರಲ್ಲಿ, ಎದೆ ನೋವು, ಬಿಗಿತ, ಉಸಿರಾಟದ ತೊಂದರೆ ಆರಂಭಿಕ ಲಕ್ಷಣವಾಗಿ ಸಂಭವಿಸಬಹುದು.

2. ಹಾರ್ವರ್ಡ್ ಹೆಲ್ತ್ ನ ಸಂಶೋಧನೆಯ ಪ್ರಕಾರ, ಕೆಲವು ಮಹಿಳೆಯರಿಗೆ ಅತಿಯಾದ ಆಯಾಸ, ಅಸಮಾಧಾನ, ನಿದ್ರಾಹೀನತೆ ಅಥವಾ ಉಸಿರಾಟದ ತೊಂದರೆ ನಿರಂತರವಾಗಿ ಇದ್ದರೆ, ಅದು ಹೃದಯಾಘಾತದ ಆರಂಭಿಕ ಲಕ್ಷಣಗಳಾಗಿರಬಹುದು. ಈ ರೋಗಲಕ್ಷಣಗಳನ್ನು ಗಮನಿಸಿದರೆ, ತಕ್ಷಣವೇ ಚಿಕಿತ್ಸೆ ನೀಡಬಹುದು ಮತ್ತು ಹೃದಯಾಘಾತವನ್ನು ತಡೆಯಬಹುದು.

3. ಹಾರ್ವರ್ಡ್ ಹೆಲ್ತ್ ಪ್ರಕಾರ, ಎದೆ ನೋವು, ಉಸಿರಾಟದ ತೊಂದರೆ, ಆಯಾಸ, ಶೀತ ಬೆವರು, ತಲೆತಿರುಗುವಿಕೆ ಮತ್ತು ವಾಕರಿಕೆ ಮುಂತಾದ ರೋಗಲಕ್ಷಣಗಳನ್ನು ಹೊಂದಿರುವ ಮಹಿಳೆಯರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ