AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Attack: ಹೃದಯಾಘಾತವಾದಾಗ ಮೊದಲು ಮಾಡಬೇಕಾದ ಕೆಲಸವೇನು? ಇಲ್ಲಿವೆ ಲೈಫ್​ ಸೇವಿಂಗ್ ಟಿಪ್ಸ್​!

ಒಬ್ಬ ವ್ಯಕ್ತಿಗೆ ಹೃದಯಾಘಾತವಾದಾಗ ಏನು ಮಾಡಬೇಕು? ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

Heart Attack: ಹೃದಯಾಘಾತವಾದಾಗ ಮೊದಲು ಮಾಡಬೇಕಾದ ಕೆಲಸವೇನು? ಇಲ್ಲಿವೆ ಲೈಫ್​ ಸೇವಿಂಗ್ ಟಿಪ್ಸ್​!
Heart Attack (ಪ್ರಾತಿನಿಧಿಕ ಚಿತ್ರ)
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 07, 2022 | 8:50 PM

Share

ಪ್ರಸ್ತುತ ದಿನಮಾನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ನಮ್ಮ ಕಾರ್ಯದ ಒತ್ತಡದಿಂದಾಗಿ ವೃದ್ಧರು ಮಾತ್ರವಲ್ಲದೆ ಯುವ ಜನರು ಸಹ ಹೃದಯಾಘಾತ (Heart Attack) ದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಅಪಾಯಕಾರಿ ಹೃದ್ರೋಗದಿಂದ ಅನೇಕರು ಬಳಲುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹೃದಯಾಘಾತವನ್ನು ತಪ್ಪಿಸಲು ನಮ್ಮ ನಿತ್ಯದ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಅವಶ್ಯಕ. ಇಂದು ಅಂತಹ ಕೆಲವು ಪ್ರಮುಖ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನೀವು ಹೃದಯಾಘಾತದಂತಹ ಗಂಭೀರ ಸಮಸ್ಯೆಯಿಂದ ನಿಮ್ಮನ್ನು ಸುರಕ್ಷಿತವಾಗಿ ರಕ್ಷಿಸಿಕೊಳ್ಳಬಹುದು. ಹಾಗೆಯೇ ಒಬ್ಬ ವ್ಯಕ್ತಿಗೆ ಹೃದಯಾಘಾತವಾದಾಗ ಏನು ಮಾಡಬೇಕು? ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಹೃದಯಾಘಾತವಾದಾಗ ಮೊದಲು ಏನು ಮಾಡಬೇಕು:

  1. ಯಾರಿಗಾದರೂ ಹೃದಯಾಘಾತವಾಗಿದ್ದರೆ, ಮೊದಲು ಗಾಬರಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
  2. ಹೃದಯಾಘಾತದ ಸಂದರ್ಭದಲ್ಲಿ ರೋಗಿಯನ್ನು ಮೊದಲು ಮಲಗಿಸಿ ಆರಾಮದಾಯಕವಾಗಿಸಬೇಕು. ಆಸ್ಪಿರಿನ್ ಮಾತ್ರೆಯನ್ನು ಆದಷ್ಟು ಬೇಗ ರೋಗಿಗೆ ನೀಡಬೇಕು. ಆಸ್ಪಿರಿನ್ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಮರಣ ಪ್ರಮಾಣವನ್ನು 15 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
  3. ಈ ಸಮಯದಲ್ಲಿ ಹೃದಯ ಬಡಿತ ನಿಧಾನವಾಗಬಹುದು ಅಥವಾ ನಿಲ್ಲಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ಎದೆಯ ಮೇಲೆ ಒತ್ತುವ ಮೂಲಕ ಉಸಿರಾಡಿಸುವಂತೆ ಪ್ರಯತ್ನಿಸಬೇಕು. ಇದನ್ನು ಸಿಪಿಆರ್ ತಂತ್ರ ಎಂದು ಕರೆಯಲಾಗುತ್ತದೆ.
  4. ರೋಗಿಯು ಚೇತರಿಸಿಕೊಳ್ಳದಿದ್ದರೆ ಕೃತಕ ಉಸಿರಾಟವನ್ನು ನೀಡಬೇಕು. ಅಂತಹ ಪರಿಸ್ಥಿತಿಯಲ್ಲಿ ನೀವು ರೋಗಿಯ ತಲೆಯ ಕೆಳಗೆ ದಿಂಬನ್ನು ಇಡಬಾರದು.
  5. ನಿಮ್ಮ ಬೆರಳುಗಳಿಂದ ರೋಗಿಯ ಮೂಗು ಪಿಂಚ್ ಮಾಡಿ. ನಂತರ ನಿಮ್ಮ ಬಾಯಿಯ ಮೂಲಕ ಉಸಿರು ನೀಡಿ. ಮೂಗನ್ನು ಹಿಸುಕುವ ಮೂಲಕ, ಬಾಯಿಯ ಮೂಲಕ ನೀಡಲಾದ ಉಸಿರು ನೇರವಾಗಿ ರೋಗಿಯ ಶ್ವಾಸಕೋಶಕ್ಕೆ ಹೋಗುತ್ತದೆ. ಆಳವಾದ ಉಸಿರನ್ನು ತೆಗೆದುಕೊಳ್ಳಬೇಡಿ. ಯಾವುದೇ ರೀತಿಯಲ್ಲಿ ಬಾಯಿಯಿಂದ ಗಾಳಿ ಹೊರಹೋಗದಂತೆ ಎಚ್ಚರಿಕೆ ವಹಿಸಿ. ಇದನ್ನು ಎರಡು ಅಥವಾ ಮೂರು ಬಾರಿ ಮಾಡಿ.
  6. ಹೃದಯಾಘಾತದ ಸಂದರ್ಭದಲ್ಲಿ ಯಾವುದೇ ನಿರ್ಲಕ್ಷ್ಯವಹಿಸಬಾರದು. ಹೆಚ್ಚು ಸಮಯ ವ್ಯರ್ಥ ಮಾಡದೇ ಹೃದಯಾಘಾತ ರೋಗಿಯನ್ನು ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.

ಹೃದಯದ ಆರೋಗ್ಯಕ್ಕೆ ಹೀಗೆ ಮಾಡಿ:

  • ನಿಮ್ಮ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ. ಧೂಮಪಾನಕ್ಕೆ ಶಾಶ್ವತವಾಗಿ ವಿದಾಯ ಹೇಳಿ.
  • ಬಿಡುವಿಲ್ಲದ ಜೀವನದಿಂದಾಗಿ ಮನಸ್ಸು ಮತ್ತು ದೇಹ ಎರಡು ಜಿಡ್ಡು ಹಿಡಿದಿದೆ. ಆದ್ದರಿಂದ 20 ನಿಮಿಷ ವ್ಯಾಯಾಮ ಮತ್ತು ಯೋಗವನ್ನು ನಿಮ್ಮ ದಿನಚರಿಯ ಭಾಗವಾಗಿಸಿಕೊಳ್ಳಿ.
  • ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ನೀವು ಬಯಸುವುದಾದರೆ, ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿ. ಉಪ್ಪು ಮತ್ತು ಸಕ್ಕರೆಯಿಂದ ಅನೇಕ ಸಮಸ್ಯೆಗಳು ಹೆಚ್ಚಾಗುತ್ತವೆ. ಇವುಗಳಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 pm, Fri, 7 October 22

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ