
ಚಳಿಗಾಲದಲ್ಲಿ (Winter) ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಿರುತ್ತದೆ. ಬೇಸಿಗೆಗೆ ಹೋಲಿಸಿದರೆ ಹೃದಯಾಘಾತದ (Heart Attacks) ಪ್ರಕರಣಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಚಳಿಯಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತವೆ, ಹಾಗಾಗಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ, ಆರಂಭಿಕ ಹಂತದಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಕೆಲವು ಅಗತ್ಯ ಹೃದಯ ಪರೀಕ್ಷೆಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಬಹುದು. ಮಾತ್ರವಲ್ಲ, ಹೃದಯಾಘಾತದ ಪ್ರಕರಣಗಳನ್ನೂ ಕೂಡ ಕಡಿಮೆ ಮಾಡಬಹುದು. ಹಾಗಾದರೆ ಚಳಿಗಾಲದಲ್ಲಿ ಅಗತ್ಯವಾಗಿ ಮಾಡಬೇಕಾದ ಟೆಸ್ಟ್ ಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದೆಹಲಿಯ ಅಪೋಲೋ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ವರುಣ್ ಬನ್ಸಾಲ್ ಅವರು, ಚಳಿಗಾಲದಲ್ಲಿ ತಪ್ಪದೆ ಮಾಡಬೇಕಾದ ಕೆಲವು ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಪರೀಕ್ಷೆಯು ದೇಹದಲ್ಲಿನ ಲಿಪಿಡ್‌ಗಳ ಮಟ್ಟವನ್ನು ತಿಳಿಸುತ್ತದೆ. ಆ ಮೂಲಕ, LDL (ಕೆಟ್ಟ ಕೊಲೆಸ್ಟ್ರಾಲ್), HDL (ಉತ್ತಮ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಂಡುಹಿಡಿಯಬಹುದು. ಈ ಮಟ್ಟಗಳು ದೇಹದಲ್ಲಿನ ಪ್ರಮಾಣಿತ ಶ್ರೇಣಿಗಿಂತ ಹೆಚ್ಚಿದ್ದರೆ, ಅದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದರ್ಥ.
ರಕ್ತವನ್ನು ಪಂಪ್ ಮಾಡಲು ಹೃದಯವು ಎಷ್ಟು ಒತ್ತಡವನ್ನು ಬಳಸುತ್ತಿದೆ ಎಂಬುದನ್ನು ಈ ಪರೀಕ್ಷೆಯು ತೋರಿಸುತ್ತದೆ. ಚಳಿಗಾಲದಲ್ಲಿ ಹೃದಯದ ನಾಳಗಳು ಸಂಕುಚಿತಗೊಳ್ಳುವುದರಿಂದ ಈ ಸಮಯದಲ್ಲಿ ಈ ಪರೀಕ್ಷೆ ಮಾಡಿಸುವುದು ಬಹಳ ಒಳ್ಳೆಯದು. ಅಧಿಕ ರಕ್ತದೊತ್ತಡ ಹೊಂದಿರುವವರು ಖಂಡಿತವಾಗಿಯೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ಈ ಪರೀಕ್ಷೆಯು ಹೃದಯ ಬಡಿತ, ಹೃದಯ ಸ್ನಾಯುಗಳ ಬಲ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ಬಹಿರಂಗಪಡಿಸುತ್ತದೆ. ವ್ಯಕ್ತಿಗೆ ಪದೇ ಪದೇ ಎದೆ ನೋವು ಬರುತ್ತಿದ್ದರೆ ಅವರು ಈ ಪರೀಕ್ಷೆಯನ್ನು ಖಂಡಿತವಾಗಿಯೂ ಮಾಡಬೇಕು.
ಇದನ್ನೂ ಓದಿ: ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ
ಡಾ. ಬನ್ಸಾಲ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತವೆ. ಅದರಲ್ಲಿಯೂ ಬೆಳಿಗ್ಗೆ 4 ರಿಂದ 6 ಗಂಟೆಯ ನಡುವೆ, ಈ ಅಪಾಯ ಹೆಚ್ಚಾಗಿ ಕಂಡುಬರುತ್ತವೆ. ಈ ಸಮಯದಲ್ಲಿ, ಬೆಳಗಿನ ತಾಪಮಾನ ಕಡಿಮೆ ಇರುವುದರಿಂದ ಇದು ಹೃದಯದ ನಾಳಗಳ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದನ್ನು ತಡೆಯಲು ಈ ಮೂರು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇವುಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೆ, ಆ ಆಧಾರದ ಮೇಲೆ ಇತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ