Kannada News Health Here are 5 reasons why Badam almonds are best weight loss know details in kannada
Almonds: ಬಾದಾಮಿ -ತೂಕ ಇಳಿಸುವ ಅತ್ಯುತ್ತಮ ಪದಾರ್ಥ ಎಂದು ಸಾಬೀತುಪಡಿಸುವುದಕ್ಕೆ ಇಲ್ಲಿದೆ 5 ಕಾರಣಗಳು
Badam- ಬಾದಾಮಿ ಪ್ರೋಟೀನ್ ಮತ್ತು ಫೈಬರ್ ಕೇಂದ್ರೀಕೃತ ಮೂಲವಾಗಿರುವುದರಿಂದ, ಇವೆರಡೂ ನಿಮಗೆ ಹಸಿವಾಗದಿರುವಂತೆ ಹೆಚ್ಚು ಕಾಲ ಪೂರ್ಣವಾಗಿರಿಸಲು ಸಹಾಯ ಮಾಡುತ್ತದೆ. ಹೀಗಾಗಿ ತೂಕ ನಷ್ಟದಲ್ಲಿ ಇದು ಹೆಚ್ಚು ಸಹಾಯ ಮಾಡುತ್ತದೆ.
ಬಾದಾಮಿ -ಅತ್ಯುತ್ತಮ ತೂಕ ಇಳಿಸುವ ಪದಾರ್ಥ ಎಂದು ಸಾಬೀತುಪಡಿಸುವುದಕ್ಕೆ ಇಲ್ಲಿದೆ 5 ಕಾರಣಗಳು
ಹೆಚ್ಚಿಗೆ ಚರ್ಚೆಗೆ ಬರುವ ಪ್ರಶ್ನೆಯೆಂದರೆ – ಯಾರಾದರೂ ದೇಹದ ತೂಕ ಇಳಿಸುವ (Weight Loss) ಪ್ರಯತ್ನದಲ್ಲಿದ್ದರೆ ಅವರು ಸೇವಿಸಬೇಕಾದ ಅತ್ಯುತ್ತಮ ತಿಂಡಿ ಯಾವುದು? ಅದಕ್ಕೆ ಉತ್ತರ- ಬಾದಾಮಿ (Badam -Almonds). ಹೌದು ಬಾದಾಮಿಯು ಕೊಬ್ಬನ್ನು ಸುಡುವ ಶಕ್ತಿಯನ್ನು ಗಮನಾರ್ಹವಾಗಿ ಹೊಂದಿದೆ. ನಾವು ಬೆರಳೆಣಿಕೆಯಷ್ಟು ಬಾದಾಮಿಗಳನ್ನು ಅಗೆದಾಗ ನಮ್ಮ ದೇಹದಲ್ಲಿನ ಕೊಬ್ಬಿನ ಚಯಾಪಚಯವನ್ನು (metabolism) ಅದು ತೀವ್ರವಾಗಿ ಹೆಚ್ಚಿಸುತ್ತದೆ. 28 ಗ್ರಾಂ ಬಾದಾಮಿಯಲ್ಲಿ 164 ಕ್ಯಾಲೋರಿಗಳು, 6.01 ಗ್ರಾಂ ಪ್ರೋಟೀನ್, 14.1 ಗ್ರಾಂ ಕೊಬ್ಬು ಮತ್ತು 3.54 ಗ್ರಾಂ ಫೈಬರ್ ಇರುತ್ತದೆ.
ಬಾದಾಮಿಯು ಅತ್ಯುತ್ತಮ ತೂಕ ಇಳಿಸುವ ತಿಂಡಿ ಎಂಬುದನ್ನು ಸಾಬೀತುಪಡಿಸುವುದಕ್ಕೆ ಇಲ್ಲಿದೆ 5 ಕಾರಣಗಳು
Weight Loss and Hunger Management – ತೂಕ ನಷ್ಟ ಮತ್ತು ಹಸಿವು ನಿರ್ವಹಿಸುವ ಬಾದಾಮಿ ಕಡಿಮೆ ಕಾರ್ಬೊಹೈಡ್ರೇಟ್ಗಳು ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವಾಗಿದೆ. ಅದು ಪ್ರೋಟೀನ್ ಮತ್ತು ಫೈಬರ್ ಕೇಂದ್ರೀಕೃತ ಮೂಲವಾಗಿರುವುದರಿಂದ, ಇವೆರಡೂ ನಿಮಗೆ ಹಸಿವಾಗದಿರುವಂತೆ ಹೆಚ್ಚು ಕಾಲ ಪೂರ್ಣವಾಗಿರಿಸಲು ಸಹಾಯ ಮಾಡುತ್ತದೆ. ಹೀಗಾಗಿ ತೂಕ ನಷ್ಟದಲ್ಲಿ ಇದು ಹೆಚ್ಚು ಸಹಾಯ ಮಾಡುತ್ತದೆ.
Helps build Immunity – ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ. ಕೇವಲ 30 ಗ್ರಾಂ ಬಾದಾಮಿಯು 7.7mg ಆಲ್ಫಾ-ಟೋಕೋಫೆರಾಲ್ ವಿಟಮಿನ್ ಇ ಅನ್ನು ಹೊಂದಿರುತ್ತದೆ, ವಿಟಮಿನ್ ಇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಸೋಂಕು ಮತ್ತು ಉರಿಯೂತದ ಅಪಾಯವನ್ನು ಕಡಿಮೆ ಮಾಡುವ ಪ್ರಮುಖ ಪೋಷಕಾಂಶ ಇದಾಗಿದೆ.
Controls Diabetes – ಮಧುಮೇಹ ನಿಯಂತ್ರಣಕ್ಕೆ ಬಾದಾಮಿ ಮುಖ್ಯವಾಗುತ್ತದೆ. ಇದರಲ್ಲಿರುವ ಫೈಬರ್ ಅಂಶವು ಊಟವನ್ನು ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರಿ-ಡಯಾಬಿಟಿಸ್ ತಡೆಗಟ್ಟುವಲ್ಲಿ ಬಾದಾಮಿ ಸಹ ಸಹಾಯ ಮಾಡುತ್ತದೆ.
Reduces BP – ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಮೆಗ್ನೀಸಿಯಮ್ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಬಾದಾಮಿ ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡುವ ಸಿಗ್ನಲಿಂಗ್ ಅಣುವಾಗಿದೆ. ಮೆಗ್ನೀಸಿಯಮ್ ಕೊರತೆಯು ಅಧಿಕ ರಕ್ತದೊತ್ತಡಕ್ಕೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ಬಾದಾಮಿ ತಿನ್ನುವುದು ಅದಕ್ಕೆ ಸಹಾಯಕವಾಗಿದೆ.
Lowers Cholsterol – ಬಾದಾಮಿ ಸೇವನೆಯು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ- ಸಂಶೋಧನೆಗಳ ಪ್ರಕಾರ ದಿನಕ್ಕೆ ಒಂದು ಮುಷ್ಟಿಯಷ್ಟು ಬಾದಾಮಿಗಳನ್ನು ಸೇವಿಸುವ ಜನರು 4.4 ಪ್ರತಿಶತದಷ್ಟು ಕೆಟ್ಟ LDL ಕೊಲೆಸ್ಟ್ರಾಲ್ ( LDL cholesterol)ಅನ್ನು ಹೊಂದಿದ್ದರು. ಅದೇ ಎರಡು ಹಿಡಿಯಷ್ಟು ಬಾದಾಮಿ ತಿಂದವರು ಶೇ. 9.4 ರಷ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಂಡಿದ್ದಾರೆ.
ತೂಕ ನಷ್ಟಕ್ಕೆ ಬಾದಾಮಿಯನ್ನು ಹೇಗೆ ಸೇವಿಸಬೇಕು: ಈಗ ಮತ್ತೊಂದು ಮುಖ್ಯವಾದ ಸಂಗತಿ ಹೇಳಬೇಕು ಅಂದರೆ ದೇಹದ ತೂಕ ಕಡಿಮೆ ಮಾಡಲು ಬಾದಾಮಿಯನ್ನು ಹೇಗೆ ಸೇವಿಸಬೇಕು ಅಂದರೆ ರಾತ್ರಿ ವೇಳೆ ನೆನೆಸಿದ ಬಾದಾಮಿಯನ್ನು ಸೇವಿಸಬೇಕು. ಅದಕ್ಕೂ ಮುನ್ನ ಅದರ ಹೊಟ್ಟನ್ನು ತೆಗೆದುಹಾಕಿ ತಿನ್ನಬೇಕು. ಇದರಿಂದ ಬೀಜಗಳು ನೇರವಾಗಿ ನಮ್ಮ ದೇಹದಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ಬಾದಾಮಿಯನ್ನು ನೆನೆಸಿ ಸಿಪ್ಪೆ ತೆಗೆಯುವುದರಿಂದ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ. ನೀವು ಹುರಿದ ಬಾದಾಮಿಯನ್ನು ತಿನ್ನುವುದೂ ಒಳ್ಳೆಯದು. ಆದರೆ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಯಾವುದೇ ಇತರೆ ಕೃತಕ ಪದಾರ್ಥಗಳಿಲ್ಲದೆ ಇದನ್ನ ಬಳಸಬೇಕು.