Health Tips: ಉಬ್ಬಿರುವ ರಕ್ತನಾಳಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ ಇಲ್ಲಿದೆ ತಜ್ಞರ ಸಲಹೆಗಳು

ತಿರುಚಿದಂತಿರುವ ಈ ರಕ್ತನಾಳಗಳು ಸಾಕಷ್ಟು ನೋವನ್ನು ಉಂಟುಮಾಡುತ್ತದೆ ಮತ್ತು ದಿನನಿತ್ಯದ ಜೀವನ ಚಟುವಟಿಕೆಗಳಲ್ಲಿ ಅಡ್ಡಿಯುಂಟು ಮಾಡುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆಯೂ ಋತುಬಂಧ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಾಗಿ ಪರಿಣಾಮ ಬೀರುತ್ತದೆ.

Health Tips: ಉಬ್ಬಿರುವ ರಕ್ತನಾಳಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ ಇಲ್ಲಿದೆ ತಜ್ಞರ ಸಲಹೆಗಳು
Varicose Veins
Follow us
ಅಕ್ಷತಾ ವರ್ಕಾಡಿ
|

Updated on: Oct 25, 2022 | 11:36 AM

ಉಬ್ಬಿರುವ ರಕ್ತನಾಳಗಳು, ಹೆಚ್ಚಾಗಿ ಕಾಲುಗಳು ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಮಹಿಳೆಯರಲ್ಲಿ ಈ ಸಮಸ್ಯೆಯೂ ಋತುಬಂಧ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ನೇರಳೆ ಅಥವಾ ನೀಲಿ ಬಣ್ಣದಲ್ಲಿ ಕಂಡುಬರುತ್ತದೆ. ಸಾಕಷ್ಟು ಜನರಲ್ಲಿ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಂದರೆನ್ನುಂಟು ಮಾಡುವ ಈ ಸಮಸ್ಯೆಗೆ ಪರಿಹಾರವು ಅತ್ಯಂತ ಅಗತ್ಯವಾಗಿದೆ.

ಹೆಚ್ಚು ಹೊತ್ತು ನಿಲ್ಲುವುದರಿಂದ ಉಬ್ಬಿರುವ ರಕ್ತನಾಳ ನೋವಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಕುಳಿತು ವಿಶಾಂತ್ರಿಸುವುದು ಉತ್ತಮ ಎಂದು ಆಯುರ್ವೇದ ತಜ್ಞರಾದ ಡಾ.ರೇಖಾ ರಾಧಾಮೋನಿಯವರು ಹೇಳುತ್ತಾರೆ.

ತಿರುಚಿದಂತಿರುವ ಈ ರಕ್ತನಾಳಗಳು ಕೆಲವು ಜನರಿಗೆ ಸಾಕಷ್ಟು ನೋವನ್ನು ಉಂಟುಮಾಡುತ್ತದೆ ಮತ್ತು ದಿನನಿತ್ಯದ ಜೀವನ ಚಟುವಟಿಕೆಗಳಲ್ಲಿ ಸಹ ಅಡ್ಡಿಪಡಿಸಬಹುದು. ಮಹಿಳೆಯರಲ್ಲಿ ಈ ಸಮಸ್ಯೆಯೂ ಋತುಬಂಧ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಸುಡುವ ಸಂವೇದನೆ, ತುರಿಕೆ, ಉಬ್ಬಿರುವ ರಕ್ತನಾಳಗಳ ಸುತ್ತಲಿನ ಚರ್ಮದ ಬಣ್ಣದಲ್ಲಿ ಬದಲಾವಣೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವ ಮತ್ತು ನಿಂತಾಗ ಉಲ್ಬಣಗೊಳ್ಳುವ ನೋವು ಮುಂತಾದ ಲಕ್ಷಣಗಳನ್ನು ಹೊಂದಿದೆ ಎಂದು ಇವರು ಹೇಳುತ್ತಾರೆ.

ಉಬ್ಬಿರುವ ರಕ್ತನಾಳಗಳ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ ಕಾಲಾನಂತರದಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಋತುಬಂಧಕ್ಕೊಳಗಾದ ಮಹಿಳೆಯರು ತಮ್ಮ ಅಭಿಧಮನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಆರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಬೆಂಗಳೂರಿನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಜನರಲ್ ಮತ್ತು ಲ್ಯಾಪ್ರೊಸ್ಕೋಪಿಕ್ ಸರ್ಜನ್ ಡಾ. ನಂದಾ ರಜನೀಶ್ ರವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಮಾಹಿತಿಯಾಗಿದೆ.

ಉಬ್ಬಿರುವ ರಕ್ತನಾಳಗಳ ಸಮಸ್ಯೆಗೆ ಪರಿಹಾರ ಕ್ರಮಗಳು 

  • ಹೆಚ್ಚು ಹೊತ್ತು ನಿಲ್ಲಬೇಡಿ ಸಾಧ್ಯವಾದಷ್ಟು ಕಾಲುಗಳನ್ನು ನೇರ ಚಾಚಿ ವಿರಾಮ ತೆಗೆದುಕೊಳ್ಳಿ.
  • ಉಬ್ಬಿರುವ ರಕ್ತನಾಳಗಳ ಸಮಸ್ಯೆ ಕಾಣಿಸಿಕೊಂಡ ಭಾಗಗಳಿಗೆ ಉರಿಯೂತ ನಿವಾರಕ ತೈಲಗಳನ್ನು ಬಳಸಿ ಮಸಾಜ್ ಮಾಡಿ.
  • ತಮ್ಮ ದಿನ ನಿತ್ಯದ ಚಟುವಟಿಕೆಗಳೊಂದಿಗೆ ಯೋಗಾಸನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ವಿಶೇಷವಾಗಿ ಶಿರಶಾಸನ, ಮೇರುದಂಡಾಸನ, ಪಡುತ್ತನಾಸನ, ಸರ್ವಾಂಗಾಸನ, ನೌಕಾಸನ ಮುಂತಾದ ಭಂಗಿಗಳನ್ನು ಹೊಂದಿರುವ ಆಸನಗಳನ್ನು ಮಾಡುವುದು ಉಬ್ಬಿರುವ ರಕ್ತನಾಳಗಳಿಂದ ತೊಂದರೆ ಅನುಭವಿಸುವವರಿಗೆ ಅತ್ಯಂತ ಪ್ರಯೋಜನಕಾರಿ.

ಇದನ್ನು ಓದಿ:

ಈ ಮೇಲಿನ ಸಲಹೆಗಳು ನಿಮ್ಮ ನೋವಿಗೆ ಪರಿಹಾರ ನೀಡದಿದ್ದಲ್ಲಿ ,ನಿಮ್ಮ ಹತ್ತಿರದ ಆಯುರ್ವೇದ ತಜ್ಞರನ್ನು ಭೇಟಿಯಾಗುವುದು ಉತ್ತಮ. ಇದಾಗಿಯೂ ಈ ಸಮಸ್ಯೆ ಕಡಿಮೆಯಾಗದ್ದಿದ್ದರೆನ ಶಸ್ತ್ರಚಿಕಿತ್ಸೆ ಏಕೈಕ ಆಯ್ಕೆಯಾಗಿದೆ ಎಂದು ಡಾ ರೇಖಾ ಹೇಳಿದ್ದಾರೆ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್