ತೂಕ ಕಡಿಮೆ ಮಾಡಿಕೊಳ್ಳಲು ನೀವು ಹಲವಾರು ರೀತಿಯ ದಾರಿಗಳನ್ನು ಆಯ್ಕೆ ಮಾಡಿಕೊಂಡಿರಬಹುದು. ಅದರಲ್ಲಿ ಯಾವುದು ಕೂಡ ನಿಮಗೆ ಸರಿಯಾದ ಫಲಿತಾಂಶ ನೀಡದಿರಬಹುದು ಆದರೆ ದಿನೇ ದಿನೇ ನಿಮ್ಮ ಹೊಟ್ಟೆ, ತೋಳುಗಳು ಮತ್ತು ತೊಡೆಗಳ ಸುತ್ತಲೂ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ನೀವು ಗಮನಿಸುತ್ತಿದ್ದರೆ, ನೀವು ಅದನ್ನು ತಕ್ಷಣ ಪರಿಹರಿಸುವುದು ಬಹಳ ಮುಖ್ಯ. ಅಲ್ಲದೆ ಅಧಿಕ ತೂಕವು, ಮಧುಮೇಹ, ಹೃದ್ರೋಗ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿದ್ದೀರಿ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಇದನ್ನು ಎದುರಿಸಲು, ದೇಹದ ಕೊಬ್ಬನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ನೀವು ಸಲಹೆಗಳನ್ನು ಹುಡುಕುತ್ತಿದ್ದರೆ ತಜ್ಞರು ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರ ಪ್ರಕಾರ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದಂತಹ ಆರೋಗ್ಯಕರ ಜೀವನಶೈಲಿ ಆಯ್ಕೆಗಳು ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಇನ್ನು ಮುಂದೆ ಅನಾರೋಗ್ಯಕರ ದೇಹದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಪ್ರಯತ್ನಗಳನ್ನು ಮಾಡಲು ಪ್ರಾರಂಭಿಸಿ.
ಗುರುಗ್ರಾಮದ ಆಹಾರ ತಜ್ಞೆ ಮತ್ತು ಪ್ರಮಾಣೀಕೃತ ಮಧುಮೇಹ ಶಿಕ್ಷಣ ತಜ್ಞೆ ಡಾ. ಅರ್ಚನಾ ಬಾತ್ರಾ, “ದೇಹದ ಹೆಚ್ಚುವರಿ ಕೊಬ್ಬು ನಿಮ್ಮ ದೇಹದ ನೋಟದ ಮೇಲೆ ಪರಿಣಾಮ ಬೀರುವುದಲ್ಲದೆ, ಹೃದ್ರೋಗ, ಮಧುಮೇಹ ಮತ್ತು ಕೀಲು ಸಮಸ್ಯೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನೀವು ಆ ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ, ಈ 6 ಪರಿಣಾಮಕಾರಿ ಸಲಹೆಗಳನ್ನು ಪಾಲನೆ ಮಾಡಿ.
1. ಸಮತೋಲಿತ ಆಹಾರ:
“ತೂಕ ಇಳಿಸಿಕೊಳ್ಳಲು ಬಯಸುವವರು ಮೊದಲು ಸಮತೋಲಿತ ಆಹಾರದ ಸೇವನೆ ಮಾಡಬೇಕು. ಇದು ಯಶಸ್ವಿ ಕೊಬ್ಬು ನಷ್ಟದ ಪ್ರಯಾಣದ ಅಡಿಪಾಯವೆಂದರೆ ತಪ್ಪಾಗಲಾರದು. ನಿಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಸಾಕಷ್ಟು ಫೈಬರ್ ಸೇವಿಸುವತ್ತ ಗಮನ ಹರಿಸಿ. ಅಲ್ಲದೆ, ಹೆಚ್ಚು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಸಂಸ್ಕರಿಸಿದ ಆಹಾರಗಳು, ಸಿಹಿ ತಿಂಡಿಗಳು, ಕಾರ್ಬ್ಸ್ ಮತ್ತು ಹೆಚ್ಚಿನ ಕ್ಯಾಲೊರಿ ಸೇವನೆ ಎಲ್ಲವನ್ನೂ ತಪ್ಪಿಸಬೇಕು ಅಥವಾ ಸೀಮಿತಗೊಳಿಸಬೇಕು. ನಿಮ್ಮ ದೈನಂದಿನ ಕ್ಯಾಲೊರಿ ಸೇವನೆಯನ್ನು ಟ್ರ್ಯಾಕ್ ಮಾಡುವುದು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ” ಎಂದು ಡಾ. ಅರ್ಚನಾ ಬಾತ್ರಾ ಹೇಳುತ್ತಾರೆ.
2. ದೈನಂದಿನ ದಿನಚರಿ:
ನಿಮ್ಮ ದೈನಂದಿನ ದಿನಚರಿಯಲ್ಲಿ ಕಾರ್ಡಿಯೋ ಮತ್ತು ಶಕ್ತಿ ತರಬೇತಿ ವ್ಯಾಯಾಮಗಳನ್ನು ಸೇರಿಸುವುದು ಅತ್ಯಗತ್ಯ. ಓಟ, ಈಜು ಅಥವಾ ಸೈಕ್ಲಿಂಗ್ ನಂತಹ ಕಾರ್ಡಿಯೋ ವ್ಯಾಯಾಮಗಳು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ, ಜೊತೆಗೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬು ನಷ್ಟಕ್ಕೆ ಸಹಾಯ ಮಾಡುತ್ತದೆ. ವ್ಯಾಯಾಮಗಳ ಈ ಸಂಯೋಜನೆಯು ನಿಮ್ಮ ದೇಹ ಪರಿಣಾಮಕಾರಿಯಾಗಿ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
3. ಅತಿಯಾದ ಆಹಾರ ಸೇವನೆಯ ನಿಯಂತ್ರಣ:
ಕೊಬ್ಬಿನ ನಷ್ಟಕ್ಕೆ ಬಂದಾಗ ಇದು ತುಂಬಾ ಅವಶ್ಯಕವಾಗಿರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಅತಿಯಾಗಿ ತಿನ್ನುವುದು, ನೀವು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದರೂ, ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಹೆಚ್ಚು ಹಸಿವಾದಾಗ ಗಮನ ಹರಿಸಿ ಮತ್ತು ಆ ಅವಧಿಯಲ್ಲಿ ಚಿಪ್ಸ್ ನಂತಹ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ಆರೋಗ್ಯಕರ ತಿಂಡಿಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ಪ್ರತಿ ಆಹಾರವನ್ನು ಕೂಡ ಚೆನ್ನಾಗಿ ಜಗಿಯುವ ಮೂಲಕ ಮತ್ತು ನಿಧಾನವಾಗಿ ತಿನ್ನುವ ಮೂಲಕ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಆದ್ದರಿಂದ ನೀವು ನಿಮ್ಮ ಆಹಾರವನ್ನು ಸರಿಯಾಗಿ ತಿನ್ನುತ್ತಿದ್ದೀರಿ ಮತ್ತು ಜಗಿಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
4. ಸಾಕಷ್ಟು ನೀರು ಕುಡಿಯಿರಿ:
ನೀವು ಹೆಚ್ಚು ತೇವಾಂಶದಿಂದಷ್ಟು, ನಿಮ್ಮ ದೇಹವು ಕೊಬ್ಬನ್ನು ಸುಡಲು ಹೆಚ್ಚು ಕೆಲಸ ಮಾಡುತ್ತದೆ ಎಂದು ಬಾತ್ರಾ ಹೇಳುತ್ತಾರೆ, “ಕೊಬ್ಬಿನ ಚಯಾಪಚಯ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳಿಗೆ ನೀರು ಮುಖ್ಯ ಪಾತ್ರ ವಹಿಸುತ್ತದೆ. ಕೆಲವೊಮ್ಮೆ, ಹಸಿವು ಮತ್ತು ಬಾಯಾರಿಕೆಯಾ ನಡುವೆ ಗೊಂದಲವಾಗಬಹುದು, ಹಾಗಾಗಿ ಇದು ಕ್ಯಾಲೊರಿ ಸೇವನೆಗೆ ಕಾರಣವಾಗುತ್ತದೆ, ನೀವು ನಿಮ್ಮನ್ನು ಹೈಡ್ರೇಟ್ ಆಗಿರಿಸಿಕೊಂಡರೆ ಅದನ್ನು ತಪ್ಪಿಸಬಹುದು. ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು.
5. ಸಾಕಷ್ಟು ನಿದ್ರೆ ಅವಶ್ಯಕ:
ಅಸಮರ್ಪಕ ನಿದ್ರೆಯು ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ ಮಾನಸಿಕ ಸಮಸ್ಯೆಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆಯ ಕೊರತೆಯು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುವುದರಿಂದ ಇದು ಸಂಭವಿಸುತ್ತದೆ. ಅಸಮತೋಲಿತ ಹಾರ್ಮೋನುಗಳು ಹಸಿವು ಮತ್ತು ಕಡುಬಯಕೆಗೆ ಕಾರಣವಾಗಬಹುದು. ನಿಮ್ಮ ಕೊಬ್ಬು ಕರಗಿಸುವ ಪ್ರಯತ್ನಗಳನ್ನು ಬೆಂಬಲಿಸಲು ಪ್ರತಿ ರಾತ್ರಿ 7 -9 ಗಂಟೆಗಳ ವರೆಗೆ ಗುಣಮಟ್ಟದ ನಿದ್ರೆ ಮಾಡಲು ಪ್ರಯತ್ನಿಸಿ.
6. ಒತ್ತಡವನ್ನು ನಿರ್ವಹಿಸಿ:
ದೀರ್ಘಕಾಲದ ಒತ್ತಡವು ತೂಕ ಹೆಚ್ಚಳ ಮತ್ತು ತೂಕ ನಷ್ಟ ಎರಡಕ್ಕೂ ಕಾರಣವಾಗಬಹುದು ಎಂದು ಬಾತ್ರಾ ಹೇಳುತ್ತಾರೆ, ಯೋಗ, ಆಳವಾದ ಉಸಿರಾಟದ ವ್ಯಾಯಾಮಗಳು, ಧ್ಯಾನ ಅಥವಾ ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತಹ ಅಥವಾ ನೀವು ಆನಂದಿಸುವ ಒತ್ತಡ ನಿವಾರಕ ತಂತ್ರಗಳನ್ನು ಮಾಡಿ.
ತೂಕ ನಷ್ಟ ಮತ್ತು ದೇಹದ ಕೊಬ್ಬು ನಷ್ಟವು ಒಂದು ವಾರ, 10 ದಿನಗಳು ಅಥವಾ ಒಂದು ತಿಂಗಳಲ್ಲಿ ಆಗುವಂತದ್ದಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಇದಕ್ಕೆ ನಿರಂತರ ಪ್ರಯತ್ನಗಳು ಮತ್ತು ತಾಳ್ಮೆಯ ಅಗತ್ಯವಿದೆ. ನಿಮ್ಮ ಆಹಾರವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯಕರ ವ್ಯಾಯಾಮ ದಿನಚರಿಯನ್ನು ನಿರ್ವಹಿಸುವಲ್ಲಿ ನಿರಂತರ ಪ್ರಯತ್ನಗಳೊಂದಿಗೆ, ನೀವು ಅನಾರೋಗ್ಯಕರ ಕೊಬ್ಬನ್ನು ಕಡಿಮೆ ಮಾಡಿ ಕೊಳ್ಳಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:13 pm, Thu, 21 September 23