ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತುಳಸಿ: ಇಲ್ಲಿದೆ ತುಳಸಿಯ ಮಹತ್ವ

ತುಳಸಿಯಲ್ಲಿ ಯಥೇಚ್ಛವಾದ ರೋಗ ನಿರೋಧಕ ಶಕ್ತಿ ಅಡಗಿದೆ. ತುಳಸಿ ಆ್ಯಂಟಿ ಬಯೋಟಿಕ್​,  ಆ್ಯಂಟಿ ಫಂಗಲ್​,  ಆ್ಯಂಟಿ ವೈರಲ್​ ಗುಣಗಳನ್ನು ಹೊಂದಿದೆ ಹೀಗಾಗಿ ಸೋಂಕುಗಳ ವಿರುದ್ಧ ಹೋರಾಡಲು ತುಳಸಿ ಸಹಾಯಮಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತುಳಸಿ: ಇಲ್ಲಿದೆ ತುಳಸಿಯ ಮಹತ್ವ
ತುಳಸಿ
Follow us
TV9 Web
| Updated By: Pavitra Bhat Jigalemane

Updated on: Jan 02, 2022 | 7:30 AM

ತುಳಸಿ ಭಾರತೀಯ ಸಂಸ್ಕೃತಿ, ಇತಿಹಾಸ ಮತ್ತು ಪುರಾಣಗಳ ಅವಿಭಾಜ್ಯ ಅಂಗವಾಗಿದೆ. ತುಳಸಿಯನ್ನು ಹೋಲಿ ಬೆಸಿಲ್​ ಅಥವಾ ಒಸಿಮಮ್​ ಟೆನ್ಯೂಪ್ಲೊರಮ್​ ಎಂದು ಕರೆಯುತ್ತಾರೆ. ಭಾರತೀಯ ಆಯುರ್ವೇದ ಆರೋಗ್ಯ ಪದ್ಧತಿಯಲ್ಲಿ ತುಳಿಸಿಗೆ ವಿಶೇಷ ಸ್ಥಾನವಿದೆ. ರೋಗ ನಿರೋಧಕ ಶಕ್ತಿಯನ್ನು ಯಥೇಚ್ಛವಾಗಿ ಹೊಂದಿರುವ ತುಳಸಿ ಪರಿಪೂರ್ಣ ಮನೆಮದ್ದಾಗಿದೆ. ಶೀತ, ನೆಗಡಿ, ಕೆಮ್ಮಿನಂತಹ ರೋಗಗಳಿಗೆ ತುಳಸಿ ರಾಮಬಾಣವಾಗಿದೆ. ತುಳಿಸಿಯಿಂದ ಸ್ವಚ್ಛವಾದ ಗಾಳಿ ಕೂಡ ದೊರೆಯುತ್ತದೆ. ಭಾರತೀಯರು ತುಳಸಿಯನ್ನು ದೇವರಾಗಿ ಕಾಣುತ್ತಾರೆ ಮತ್ತು ಪೂಜಿಸುತ್ತಾರೆ ಕೂಡ.  ಅದರ ಜೊತೆಗೆ ತುಳಸಿ ದೇಹವನ್ನು ಆರೋಗ್ಯವಾಗಿಡುವ ಅತ್ಯುತ್ತಮ ಗುಣಗಳನ್ನೂ ಹೊಂದಿದೆ. ತುಳಸಿ ಸೇವನೆಯಿಂದ ದೇಹಕ್ಕೆ ಸಾಕಷ್ಟು ಲಾಭಗಳೂ ಇವೆ. ಇಲ್ಲಿದೆ ನೋಡಿ ಮಾಹಿತಿ.

ರೋಗ ನಿರೋಧಕ ಶಕ್ತಿ ತುಳಸಿಯಲ್ಲಿ ಯಥೇಚ್ಛವಾದ ರೋಗ ನಿರೋಧಕ ಶಕ್ತಿ ಅಡಗಿದೆ. ತುಳಸಿ ಆ್ಯಂಟಿ ಬಯೋಟಿಕ್​,  ಆ್ಯಂಟಿ ಫಂಗಲ್​,  ಆ್ಯಂಟಿ ವೈರಲ್​ ಗುಣಗಳನ್ನು ಹೊಂದಿದೆ ಹೀಗಾಗಿ ಸೋಂಕುಗಳ ವಿರುದ್ಧ ಹೋರಾಡಲು ತುಳಸಿ ಸಹಾಯಮಾಡುತ್ತದೆ. ಆದ್ದರಿಂದ ತುಳಸಿಯ ಬಳಕೆ ನಿಮ್ಮ ಬದುಕಿನಲ್ಲಿರಲಿ.

ಕ್ಯಾನ್ಸರ್​ ವಿರುದ್ಧ ಹೋರಾಡಲು ಸಹಾಯ ತುಳಸಿಯ ಗಿಡ ಚಿಕ್ಕದಾದರೂ ಅದರ ಔಷಧೀಯ ಗುಣ ಮಾತ್ರ ಬಹಳ ದೊಡ್ಡದು.  ಕೆಲವು ಅಧ್ಯಯನಗಳು ತುಳಸಿ ಕ್ಯಾನ್ಸರ್​ ಅನ್ನು ತಡೆಗಟ್ಟುವ ಗುಣ ಹೊಂದದೆ ಎಂದು ಹೇಳಿವೆ. ಪಬ್ ​ಮೆಡ್​ ಸೆಂಟ್ರಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ತುಳಸಿ ಕ್ಯಾನ್ಸರ್​ಕಾರಕವಾಗಿದೆ. ಆದರೂ ಈ ಕುರಿತು ಹೆಚ್ಚಿನ ಅಧ್ಯಯನಗಳ ಅವಶ್ಯಕತೆಯಿದೆ.

ಚರ್ಮದ ಆರೋಗ್ಯ ರಕ್ಷಣೆ ಆ್ಯಂಟಿ ಬಯೋಟಿಕ್​ ಅಂಶಗಳನ್ನು ಹೊಂದಿರುವ ತುಳಸಿ ನಿಮ್ಮ ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ಮೊಡವೆ ಸಮಸ್ಯೆ, ಚರ್ಮ ಸುಕ್ಕಾದಂತೆ ಕಾಣುವುದು ಸೇರಿದಂತೆ. ತಲೆಯ ಕೂದಲಿನ ಬೇರುಗಳನ್ನೂ ಕೂಡ ಬಲಪಡಿಲು ತುಳಸಿ ಸಹಾಯಕಾವಗಿದೆ.

ಮಧುಮೇಹಿ ಸ್ನೇಹಿ ನೀವು ಸಕ್ಕರೆ ಕಾಯಿಲೆ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ತುಳಸಿ ಸೇವನೆಯಿಂದ ನಿಮ್ಮ ಆರೋಗ್ಯ ಸ್ಥರವಾಗಿರುವಂತೆ ಮಾಡುತ್ತದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿದೆ. ಆದರೂ ಒಂದು ಹಂತದಲ್ಲಿ ತುಳಸಿ ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣ ತುಳಸಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನಿಮ್ಮ ಟೆನ್ಷನ್​ಅನ್ನೂ ಕೂಡ ನಿಯಂತ್ರಣಕ್ಕೆ ತರುವಲ್ಲಿ ತುಳಸಿ ಸಹಾಯಕವಾಗಿದೆ. ಹೀಗಾಗಿ ಹೃದಯದ ಆರೋಗ್ಯವನ್ನೂ ತುಳಸಿ ಕಾಪಾಡುತ್ತದೆ. ಆದ್ದರಿಂದ ತುಳಸಿ ಬಳಕೆ ನಿಮ್ಮ ಜೀವನದಲ್ಲಿರಲಿ. ಆದರೆ ನೆನಪಿಡಿ ಅತಿಯಾಗಿ ತುಳಸಿ ಎಲೆಯನ್ನು ಸೇವಿಸದರೆ ದೇಹದ ಉಷ್ಣತೆ ಜಾಸ್ತಿಯಾಗಿ ಉರಿಮೂತ್ರದಂತಹ ಸಮಸ್ಯೆಗಳು ಉಲ್ಬಣವಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಸೇವಿಸಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ