Skin Care: ಈ ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಕಾಪಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಗಳು

| Updated By: ಅಕ್ಷತಾ ವರ್ಕಾಡಿ

Updated on: Nov 02, 2022 | 5:19 PM

ಚಳಿಗಾಲದ ಸಂದರ್ಭದಲ್ಲಿ ತ್ವಚೆಯ ರಕ್ಷಣೆಯು ಅತ್ಯಂತ ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ ತ್ವಚೆಯು ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ.

Skin Care: ಈ ಚಳಿಗಾಲದಲ್ಲಿ  ನಿಮ್ಮ ತ್ವಚೆಯನ್ನು ಕಾಪಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಗಳು
Skin Care
Image Credit source: HealthShots
Follow us on

ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ನಿಮ್ಮ ಆಹಾರಕ್ಕಿಂತ ಉತ್ತಮವಾದ ಮಾರ್ಗವಿಲ್ಲ. ಆದ್ದರಿಂದ, ನಿಮ್ಮ ಚರ್ಮವನ್ನು ಕೆಲವೊಂದು ಸೌಂದರ್ಯ ವರ್ಧಕ ಬಳಸುವ ಬದಲಾಗಿ, ಈ ಆಹಾರ ಸಲಹೆಗಳೊಂದಿಗೆ ರೂಢಿಸಿಕೊಳ್ಳಿ.
ಈ ಚಳಿಗಾಲದ ಸಂದರ್ಭದಲ್ಲಿ ತ್ವಚೆಯ ರಕ್ಷಣೆಯು ಅತ್ಯಂತ ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ ತ್ವಚೆಯು ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಆದರಂತೆಯೇ ಬೇಸಿಗೆ ಕಾಲದಲ್ಲೂ ಅತಿಯಾದ ಬಿಸಿಲಿನಿಂದ ತ್ವಚೆಯನ್ನು ರಕ್ಷಿಸುವುದು ಅಗತ್ಯವಾಗಿದೆ. ಆದ್ದರಿಂದ ಆರೋಗ್ಯಕರ ತ್ವಚೆಯನ್ನು ಪಡೆಯುವಲ್ಲಿ ನಿಮ್ಮ ಆಹಾರ ಪದ್ದತಿಯು ಪ್ರಮುಖ ಪಾತ್ರ ವಹಿಸುತ್ತದೆ.

ಹೆಚ್ಚು ನೀರು ಕುಡಿಯುವುದು ಅಗತ್ಯ:
ಈ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಇರುವುದರಿಂದ ನೀರು ಕುಡಿಯುವುದನ್ನೇ ಮರೆತು ಬಿಡುವುದುಂಟು. ಇದರಿಂದಾಗಿ ನಿಮ್ಮ ದೇಹದಲ್ಲಿ ತೇವಾಂಶವು ಕಡಿಮೆಯಾಗುತ್ತಾ ಹೋಗುತ್ತದೆ. ನಿಮ್ಮ ಚರ್ಮದ ತೇವಾಂಶವನ್ನು ಮರಳಿ ಪಡೆಯಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು ಅಗತ್ಯ. ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನು ಕುಡಿಯಿರಿ. ನೀರಿನ ಬದಲಾಗಿ ನಿಂಬೆ ರಸ ಅಥವಾ ಹಣ್ಣಿನ ರಸಗಳ ಜ್ಯೂಸ್ ದೇಹಕ್ಕೆ ತೇವಾಂಶ ಹೆಚ್ಚಿಸುತ್ತದೆ.

ವಿಟಮಿನ್ ಸಿ:
ಹೆಚ್ಚಿನ ವಿಟಮಿನ್ ಸಿ ಹೊಂದಿರುವ ಆಹಾರಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿರುವುದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಇದರಿಂದ ನಿಮ್ಮ ಚರ್ಮವು ಆರೋಗ್ಯವಾಗಿರಲು ಸಹಾಯಮಾಡುತ್ತದೆ. ಆದ್ದರಿಂದ ಆದಷ್ಟು ಕಿತ್ತಳೆ ಹಣ್ಣು ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಮಾಡಿ ಸೇವಿಸುವುದು ಉತ್ತಮ.

ಬೀಟ್ರೂಟ್:
ಬೀಟ್ರೂಟ್ ನಲ್ಲಿ ಸಾಕಷ್ಟು ಮಟ್ಟದ ಪ್ರೋಟೀನ್ ಅಂಶವನ್ನು ಹೊಂದಿದ್ದು, ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದ್ದು ಅದು ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಮೃದು ಮತ್ತು ಕಾಂತಿಯುತವಾಗಿ ಮಾಡುತ್ತದೆ.

ಸೊಪ್ಪು ತರಕಾರಿಗಳು:
ಈ ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಮಾರುಕಟ್ಟೆಗಳಲ್ಲಿ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಕಾಣಬಹುದು. ಪಾಲಕ್, ಎಲೆಕೋಸು, ಸಾಸಿವೆ, ಮೆಂತ್ಯ ಎಲೆಗಳು ನಿಮ್ಮ ಚರ್ಮವನ್ನು ಪೋಷಿಸುವ ವಿಟಮಿನ್ ಕೆ ಯನ್ನು ಹೊಂದಿದ್ದು, ಇದು ಚಳಿಗಾಲ ಮಾತ್ರವಲ್ಲದೆ, ಎಲ್ಲಾ ಸಮಯದಲ್ಲೂ ಚರ್ಮವನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ.

ಇದನ್ನು ಓದಿ: ವಿಪರೀತ ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ತಲೆನೋವಿಗೆ ಕಾರಣಗಳು ಇಲ್ಲಿವೆ

ಡ್ರೈ ಫ್ರೂಟ್ಸ್:
ಡ್ರೈ ಫ್ರೂಟ್ಸ್ ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಇದು ಚರ್ಮಕ್ಕೆ ಹೊಳಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಲು ಪ್ರತಿ ಡ್ರೈ ಫ್ರೂಟ್ಸ್ ಪ್ರತಿದಿನ ತಿನ್ನುವುದನ್ನು ರೂಡಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:19 pm, Wed, 2 November 22