AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಟ್ರೆಂಡಿ ಮೂಗುತಿಗಳಿಗೂ ಇದೆ ವೈಜ್ಞಾನಿಕ ಕಾರಣ

ಇದೀಗಾ ಹಬ್ಬಗಳ ಸಂದರ್ಭದಲ್ಲಿ ಬೆಳೆಬಾಳುವ ಬಟ್ಟೆಗಳ ಜೊತೆ ಮೂಗುತಿಯೂ ಪೈಪೋಟಿಯಲ್ಲಿದೆ. ಮೂಗುಬೊಟ್ಟಿನಲ್ಲಿ ನೋಡಲು ಹೋದರೆ ಅನೇಕ ರೀತಿಯ ವಿಧವಿಧವಾದ ಡಿಸೈನ್‍ಗಳ ಮೂಗು ಬೊಟ್ಟುಗಳಿರುವುದನ್ನು ಕಾಣಬಹುದು.

Beauty Tips: ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ  ಟ್ರೆಂಡಿ ಮೂಗುತಿಗಳಿಗೂ ಇದೆ ವೈಜ್ಞಾನಿಕ ಕಾರಣ
Nose Piercing
TV9 Web
| Edited By: |

Updated on:Oct 29, 2022 | 3:51 PM

Share

ನಮ್ಮಲ್ಲಿ ಅನೇಕ ನಟಿಯರೂ ತಮ್ಮ ಸಿನಿಮಾಗಳಲ್ಲಿ   ಮೂಗುತಿಯನ್ನು ಧರಿಸುವ ಮೂಲಕ ಸಕ್ಕತ್ ಟ್ರೆಂಡ್ ಕ್ರಿಯೇಟ್ ಮಾಡ್ತಾ ಇದ್ದಾರೆ. ಇದ್ದರಿಂದಾಗಿ ಮೂಗುತಿ ಧರಿಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಕಾಂತಾರ ಚಿತ್ರದಲ್ಲಿಯೂ ನಟಿ ಸಪ್ತಮಿ ಗೌಡ ಕೂಡ ತಮ್ಮ ಮೂಗುತಿಯ ಮೂಲಕ ಸಾಕಷ್ಟು ಜನರ ಮನ ಗೆದ್ದಿದ್ದಾರೆ.

ಇದೀಗ ಹಬ್ಬಗಳ ಸಂದರ್ಭದಲ್ಲಿ ಬೆಳೆಬಾಳುವ ಬಟ್ಟೆಗಳ ಜೊತೆ ಮೂಗುತಿಯೂ ಪೈಪೋಟಿಯಲ್ಲಿದೆ. ಮೂಗುಬೊಟ್ಟಿನಲ್ಲಿ ನೋಡಲು ಹೋದರೆ ಅನೇಕ ರೀತಿಯ ಬೇರೆ ಬೇರೆ ಡಿಸೈನ್‍ಗಳ ಮೂಗು ಬೊಟ್ಟುಗಳಿರುವುದನ್ನು ಕಾಣಬಹುದು. ಅದರಲ್ಲಿಯೂ ಚಿನ್ನ, ವಜ್ರ ಹಾಗೂ ಇತರ ರತ್ನ ಕಲ್ಲುಗಳಿಂದ ತಯಾರಿಸಿದ ಮೂಗುತಿಗಳಿಗೆ ಯಾವಾಗಲೂ ಸಕ್ಕತ್ ಬೇಡಿಕೆಯಿದೆ.

ಮೂಗು ಚುಚ್ಚಿಸಿಕೊಳ್ಳುವ ಮುನ್ನ ಪಾಲಿಸಬೇಕಾದ ಕೆಲವು ಅಂಶಗಳು

1.ನೀವು ಮೂಗುತಿಗಳಿಗೆ ಆಕರ್ಷಿತರಾಗಿದ್ದೀರಿ ಎಂದು ನೀವಾಗಿಯೇ ಯಾವತ್ತೂ ಮೂಗು ಚುಚ್ಚಲು ಹೋಗಬೇಡಿ. ಬದಲಾಗಿ ತಜ್ಞರನ್ನು ಭೇಟಿ ಮಾಡಿ ಚುಚ್ಚಿಸಿಕೊಳ್ಳಿ.

2.ಮೂಗು ಚುಚ್ಚಿದ ಮೊದಲೆರಡು ದಿನ ಪದೇ ಪದೇ ಮೂಗನ್ನು ಮುಟ್ಟುತ್ತಲೇ ಇರುವ ಅಭ್ಯಾಸವು ಪ್ರತಿಯೊಬ್ಬರಿಗೂ ಇರುತ್ತದೆ. ಆದಷ್ಟು ಇದನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ಚುಚ್ಚಿರುವ ಭಾಗದಲ್ಲಿ ನೋವು ಕಾಣಿಸಿ ಕೆಲವು ದಿನಗಳ ನಂತರ ಅದು ಹುಣ್ಣಾಗುವ ಸಾಧ್ಯತೆ ಇದೆ.

3.ಇದರ ಜೊತೆಗೆ ಮೂಗು ಚುಚ್ಚಿದ ಕೆಲವು ದಿನಗಳ ವರೆಗೆ ಆ ಜಾಗದಲ್ಲಿ ರಾಸಾಯನಿಕ ಸೌಂದರ್ಯ ವರ್ಧಕಗಳನ್ನು ಬಳಸದಿರಿ. ಯಾಕೆಂದರೆ ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ.

ಮೂಗುತಿಯಿಂದಾಗುವ ಕೆಲವೊಂದಿಷ್ಟು ಆರೋಗ್ಯದ ಪ್ರಯೋಜನಗಳು

ಸಾಮಾನ್ಯವಾಗಿ ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಆದ್ದರಿಂದ ಯುವತಿಯರಿಗೆ ಋತುಮತಿಯಾದ ಬಳಿಕ ಮೂಗು ಚುಚ್ಚಿಸುತ್ತಾರೆ ಮತ್ತು ಇದು ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಪದ್ದತಿಗಳೂ ಇಂದಿಗೂ ಹಳ್ಳಿಗಳಲ್ಲಿದೆ.

ಇದರ ಜೊತೆಗೆ ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಆದ್ದರಿಂದ ಇಂದು ಫ್ಯಾಶನ್ ಆಗಿ ಉಪಯೋಗಿಸುವ ಮೂಗು ಬೊಟ್ಟುಗಳಿಗೆ ಹಳ್ಳಿಗಳಲ್ಲಿ ಹಾಗೂ ವೈಜ್ಞಾನಿಕವಾಗಿ ಅದರದ್ದೇ ಆದ ಮಹತ್ವವಿದೆ. ಸಿನಿಮಾ ನಟಿಯರಿಂದಾಗಿ ಇಂದು ಮೂಗುತಿಗಳ ಪ್ರಾಮುಖ್ಯತೆಯೂ ಹೆಚ್ಚಾಗುತ್ತಿದೆ ಎಂಬುದು ಖುಷಿಯ ಸಂಗತಿ.

Published On - 3:43 pm, Sat, 29 October 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?