High Cholesterol Symptoms : ಈ ಲಕ್ಷಣ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಬೇಡ, ಇದು ಅಧಿಕ ಕೊಲೆಸ್ಟ್ರಾಲ್ ಇರುವುದರ ಸೂಚಕ
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಕೊಲೆಸ್ಟ್ರಾಲ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂದಿನ ಜನರು ಅನುಸರಿಸುತ್ತಿರುವ ಜೀವನ ಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿಯೇ ಇದಕ್ಕೆ ಮೂಲ ಕಾರಣವಾಗಿದೆ. ಆದರೆ ಹೆಚ್ಚಿನವರಿಗೆ ತಮಗೆ ಕೊಲೆಸ್ಟ್ರಾಲ್ ಕಾಯಿಲೆ ಇದೆ ಎನ್ನುವುದನ್ನು ತಿಳಿಯದೆ ಸಿಕ್ಕ ಸಿಕ್ಕ ಆಹಾರಗಳನ್ನು ತಿಂದು ತೊಂದರೆಯನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಆದರೆ ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ ಈ ಕೆಲವು ಲಕ್ಷಣಗಳು ಗೋಚರವಾಗುತ್ತದೆ.
ಕೊಲೆಸ್ಟ್ರಾಲ್(Cholesterol) ಮಟ್ಟವು ಹೆಚ್ಚಾದಂತೆ ಆರೋಗ್ಯ(Health) ಸಮಸ್ಯೆಗಳು ಕಾಡುವ ಸಂಭವವೇ ಹೆಚ್ಚು. ಈ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕಕ ಕೊಲೆಸ್ಟ್ರಾಲ್ ಹೊಂದಿದ್ದರೆ ಪಾದಗಳಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ. ಕೆಲವೊಮ್ಮೆ ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯವಾಗುತ್ತದೆ. ಹಾಗಾಗಿ ಈ ಕೆಲವು ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.
* ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್‌ನ ಆರಂಭಿಕ ಲಕ್ಷಣವೆಂದರೆ ವಾಕಿಂಗ್ ಅಥವಾ ಸ್ವಲ್ಪ ವ್ಯಾಯಾಮ ಮಾಡಿದ ನಂತರವೂ ಉಸಿರಾಟದ ತೊಂದರೆಯು ಉಂಟಾಗುತ್ತದೆ. ಆದರೆ ಈ ಉಸಿರಾಟದ ತೊಂದರೆಗೆ ಇತರ ಹಲವು ಕಾರಣಗಳು ಇರಬಹುದು. ಹೀಗಾಗಿ ರಕ್ತ ಪರೀಕ್ಷೆ ಮಾಡದೇನೇ ಅಧಿಕ ಕೊಲೆಸ್ಟ್ರಾಲ್ ಇದೆ ಎಂದು ಹೇಳುವಂತಿಲ್ಲ.
* ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಪಾದಗಳಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ರಾತ್ರಿಯಲ್ಲಿ ಪಾದಗಳು ತಣ್ಣಗಾಗುತ್ತವೆ. ಚಳಿಗಾಲವಿರಲಿ, ಬೇಸಿಗೆಯಿರಲಿ, ಮಳೆಗಾಲವಿರಲಿ.. ಎಲ್ಲ ಕಾಲದಲ್ಲೂ ರಾತ್ರಿ ವೇಳೆ ಪಾದಗಳು ತಣ್ಣಗಾಗುತ್ತಿದ್ದರೆ ಅದು ಕೊಲೆಸ್ಟ್ರಾಲ್ ಇದೆಯೆನ್ನುವುದರ ಸಂಕೇತವಾಗಿದೆ.
ಮತ್ತಷ್ಟು ಓದಿ: ICMR Dietary Guidelines Part 2 : ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಏನು ತಿನ್ನಬೇಕು, ತಿನ್ನಬಾರದು?
* ಪಾದಗಳಲ್ಲಿ ಕಾಣಿಸಿಕೊಳ್ಳುವ ಊತವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೆಲವರಿಗೆ ಪಾದಗಳು ಉರಿಯುತ್ತವೆ. ದೇಹದಲ್ಲಿ ಪಿತ್ತರಸ ಹೆಚ್ಚಾದಾಗಲೂ ಹೀಗೂ ಆಗಬಹುದು. ಆದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದಿಂದಲೂ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
* ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟವು ಕಾಲುಗಳ ನರಗಳ ಹಾನಿಯಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ ಪಾದಗಳು, ಕಾಲ್ಬೆರಳುಗಳಲ್ಲಿನ ನರಗಳಲ್ಲಿ ಅಸ್ಥಿರತೆಗೆ ಕಾರಣವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ