ಮನೆಯ ಹಿತ್ತಲಿನಲ್ಲಿರುವ ಸಸ್ಯಗಳು ಅನೇಕ ರೀತಿಯ ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾಗಿರುತ್ತದೆ. ಹಿಂದಿನ ಕಾಲದಲ್ಲಿ ಜ್ವರ, ಶೀತಕ್ಕೆ ಮೊದಲು ಮನೆಮದ್ದುಗಳನ್ನು ಮಾಡುತ್ತಿದ್ದರು. ಆದರೆ ಇಂದು ನಾವು ಮಾತ್ರೆಗಳ ಮೊರೆ ಹೋಗಿದ್ದೇವೆ. ಮಕ್ಕಳಿಗೂ ನಾವು ಈ ಅಭ್ಯಾಸವನ್ನೇ ರೂಢಿಸಿಕೊಂಡು ಬರುತ್ತಿದ್ದೇವೆ. ಇದಕ್ಕಿಂತ ಮನೆಯಲ್ಲಿರುವ ಕೆಲವು ಸಸ್ಯಗಳಿಂದ ಸಣ್ಣ ಪುಟ್ಟ ಶೀತ, ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು. ಇಂತಹ ಪರಿಣಾಮಕಾರಿ ಔಷಧಿ ಗಿಡಗಳಲ್ಲಿ ದೊಡ್ಡ ಪತ್ರೆ ಗಿಡವೂ ಒಂದಾಗಿದೆ. ಇದು ಶೀತ, ಜ್ವರಕ್ಕೆ ಮನೆ ಮದ್ದಾಗಿದೆ. ಹಾಗಾದರೆ ಇದನ್ನು ಬಳಸುವುದು ಹೇಗೆ? ಮಕ್ಕಳಿಗೂ ನೀಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ಆದಂತಹ ಬದಲಾವಣೆ, ಹವಾಮಾನದಲ್ಲಿನ ವ್ಯತ್ಯಾಸದಿಂದ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಳ್ಳುತ್ತದೆ. ಇದರಿಂದ ಶೀತವಾದರೆ ಎಷ್ಟು ದಿನವಾದರೂ ಕಡಿಮೆಯಾಗುವುದಿಲ್ಲ. ಇದಕ್ಕೆ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ಇನ್ನು ಚಿಕ್ಕ ಮಕ್ಕಳಿಗೂ ಕೂಡ ಈ ಸೊಪ್ಪನ್ನು ಔಷಧವಾಗಿ ಬಳಸಬಹುದಾಗಿದೆ. ಇದರ ರಸವನ್ನು ಸ್ವಲ್ಪ ಕುಡಿಯಲು ಕೊಡುವುದರಿಂದ ನೆಗಡಿಯನ್ನು ಕಡಿಮೆ ಮಾಡಬಹುದಾಗಿದೆ.
ಇದನ್ನೂ ಓದಿ: ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ? ಡಾಕ್ಟರ್ ಮಾತು ಕೇಳಿ
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: