Health Tips: ಶೀತ, ಕೆಮ್ಮಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆಗಳು ಇಲ್ಲಿವೆ

| Updated By: shruti hegde

Updated on: Sep 28, 2021 | 7:31 AM

ನೆಗಡಿ, ಕೆಮ್ಮಿನಂತಹ ಸಮಸ್ಯೆ ಕಾಡುತ್ತಿದೆ ಎಂದರೆ ಸುಲಭದಲ್ಲಿ ತಯಾರಿಸಬಹುದಾದ ಮನೆ ಮದ್ದುಗಳನ್ನು ಬಳಸಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಲಭ ಮಾರ್ಗಗಳು ಈ ಕೆಳಗಿನಂತಿವೆ.

Health Tips: ಶೀತ, ಕೆಮ್ಮಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆಗಳು ಇಲ್ಲಿವೆ
ಸಂಗ್ರಹ ಚಿತ್ರ
Follow us on

ಮಳೆ, ಗಾಳಿ ಅತಿಯಾದಾಗ ಶೀತ, ನೆಗಡಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವು ಬಾರಿ ಹವಾಮಾನ ಏರು ಪೇರಿನಿಂದಾಗಿ ನಮ್ಮ ಆರೋಗ್ಯ ಹದಗೆಡಬಹುದು. ಇಲ್ಲವೇ ಆರೋಗ್ಯ ಸಮಸ್ಯೆಗಳು ಕಾಡಲು ಜೀವನ ಶೈಲಿ, ಆಹಾರ ಪದ್ಧತಿ ಹೀಗೆ ಅನೇಕ ಕಾರಣಗಳಿರಬಹುದು. ಹಾಗಿರುವಾಗ ಸಣ್ಣ ಪುಟ್ಟ ಕೆಮ್ಮು ಹಾಗೂ ನೆಗಡಿಯಂತಹ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಜತೆಗೆ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಈ ಕೆಲವು ಮನೆ ಮದ್ದುಗಳು ಸಹಾಯವಾಗುತ್ತವೆ.

ಬೆಚ್ಚಗಿನ ನೀರು ಕುಡಿಯಿರಿ
ಶೀತ, ಕೆಮ್ಮು, ಜ್ವರ ಬಂದಾಗ ಗಂಟಲು ಕಿರಿ ಕಿರಿ ಸಮಸ್ಯೆ ಮಾಮೂಲಿ. ಮೂಗು ಕಟ್ಟುವುದು, ಉಸಿರಾಟಕ್ಕೆ ತೊಂದರೆಯಾಗುವುದು ಇಂತಹ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಿರುವಾಗ ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಜತೆಗೆ ಸ್ನಾನಕ್ಕೂ ಕೂಡಾ ಬೆಚ್ಚಗಿನ ನೀರನ್ನೇ ಬಳಸಿ. ದಿನಕ್ಕೆ ಎರಡು ಬಾರಿ ಉಗುರು ಬೆಚ್ಚಗಿನ ನೀರಿಗೆ ಉಪ್ಪಿ ಮಿಶ್ರಣ ಮಾಡಿ ಗಾರ್ಗ್ಲಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ
ಶೀತ, ನೆಗಡಿಯಂತಹ ಸಮಸ್ಯೆ ಕಾಡುತ್ತಿರುವಾಗ ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ. ವಿಟಮಿನ್ ಸಿ ಶೀತದಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ಟೊಮ್ಯಾಟೊ, ಪಾಲಾಕ್, ಸಿಟ್ರಸ್ ಹಣ್ಣುಗಳಂಥಹ ವಿಟಮಿನ್ ಸಿ ಸಮೃದ್ಧವಾಗಿರುವ ತರಕಾರಿಗಳು, ಹಣ್ಣುಗಳು ನಿಮ್ಮದಾಗಿರಲಿ.

ಗಿಡಮೂಲಿಕೆ ಚಹಾ
ಮನೆಯಲ್ಲಿ ತಯಾರಿಸಿದ ಬಿಸಿ ಬಿಸಿ ಗಿಡಮೂಲಿಕೆ ಚಹಾವನ್ನು ಸೇವಿಸಿ. ಶುಂಠಿ, ಕರಿಮೆಣಸು, ತುಳಸಿ ಎಲೆಗಳು ಮತ್ತು ಅರಿಶಿಣವನ್ನು ಬಳಸಿ. ಇವುಗಳಿಂದ ತಯಾರಿಸಿದ ಚಹಾ ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯಕವಾಗಿದೆ.

ಪ್ರಾಣಾಯಾಮ ಜತೆಗೆ ಯೋಗಾಸನ
ಪ್ರಾಣಾಯಾಮವು ಉಸಿರಾಟ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಜತೆಗೆ ಶ್ವಾಸಕೋಶ ಸಂಬಂಧಿ ಕೆಮ್ಮು, ಶೀತದ ಸಮಸ್ಯೆಗೆ ಬಹುಬೇಗ ಪರಿಹಾರ ನೀಡುತ್ತದೆ. ಜತೆಗೆ ಯೋಗಾಸನಗಳನ್ನು ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ನೀವು ಫಿಟ್ ಆಗಿರಲು ಸಹಾಯ ಮಾಡುತ್ತದೆ ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 3 ಬಗೆಯ ಆರೋಗ್ಯಕರ ಪಾನೀಯಗಳು ಸಹಾಯಕ

Health Tips: ಶುಂಠಿ ಚಹಾ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

(Home remedies try these home remedies to get relief from cold and cold )

Published On - 7:30 am, Tue, 28 September 21