ಹನಿನಟ್ ಸ್ಕ್ವ್ಯಾಷ್ ಅಥವಾ ಜೇನು ಕುಂಬಳಕಾಯಿ ಎಂದು ಕರೆಯಲಾಗುವ ಈ ತರಕಾರಿ ಸಣ್ಣದಾಗಿರುತ್ತದೆ ಮತ್ತು ಸಿಹಿಯಾಗಿರುತ್ತದೆ. ವಿವಿಧ ರೀತಿಯ ಅಡುಗೆ, ಸ್ವೀಟ್ಗಳನ್ನು ಇದರಿಂದ ಮಾಡಬಹುದು. ಚಳಿಗಾಲದಲ್ಲಿ ಹೆಚ್ಚು ಬೆಳೆಯುವ ಈ ಹನಿನಟ್ ಸ್ಕ್ವ್ಯಾಷ್ ಪೌಷ್ಠಿಕಾಂಶದಿಂದ ಕೂಡಿದೆ. ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್ ಅಂಶವನ್ನು ಹೊಂದಿರುವ ಹನಿನಟ್ ಸ್ಕ್ವ್ಯಾಷ್ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿದವರಿಗೆ ಅತ್ಯುತ್ತಮ ತರಕಾರಿ.
ಹನಿನಟ್ ಸ್ಕ್ವ್ಯಾಷ್ನಿಂದ ಸೂಪ್, ಸಲಾಡ್ ಮತ್ತು ಸಿಹಿತಿಂಡಿಗಳು, ಸಾಂಬಾರ್, ಪಲ್ಯವನ್ನು ಮಾಡಬಹುದು. ಚಳಿಗಾಲದಲ್ಲಿ ಹನಿನಟ್ ಸ್ಕ್ವ್ಯಾಷ್ ಅನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಹನಿನಟ್ ಸ್ಕ್ವ್ಯಾಷ್ ಸಿಪ್ಪೆ ಬಹಳ ತೆಳ್ಳಗಿರುತ್ತದೆ. ಇದನ್ನು ಹಾಗೆಯೇ ತಿನ್ನಬಹುದಾಗಿದೆ. ಸಿಪ್ಪೆ ಸುಲಿಯದೆ ಕೂಡ ಇದನ್ನು ತಿನ್ನಬಹುದು.
ಇದನ್ನೂ ಓದಿ: World Egg Day 2023: ಆರೋಗ್ಯ, ಸೌಂದರ್ಯಕ್ಕೆರಡೂ ಮೊಟ್ಟೆಯಿಂದ ಆಗುವ ಪ್ರಯೋಜನ ಒಂದೆರಡಲ್ಲ!
ಹನಿನಟ್ ಸ್ಕ್ವ್ಯಾಷ್ ಚಿಕ್ಕದಾಗಿರುತ್ತದೆ. ಇದು ನಯವಾದ ಸಿಪ್ಪೆಯನ್ನು ಹೊಂದಿದ್ದು, ಕಂದು ಬಣ್ಣದಿಂದ ಕಡು ಕಿತ್ತಳೆ ಬಣ್ಣದವರೆಗೆ ಇದರ ಬಣ್ಣವಿರುತ್ತದೆ. ಒಳಗೆ, ಇದು ಕಿತ್ತಳೆ ಬಣ್ಣದ ತಿರುಳಿನಿಂದ ತುಂಬಿರುತ್ತದೆ.
ಹನಿನಟ್ ಸ್ಕ್ವ್ಯಾಷ್ನ ಪೌಷ್ಟಿಕಾಂಶಗಳು:
ಹನಿನಟ್ ಸ್ಕ್ವ್ಯಾಷ್ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದರಲ್ಲಿ ಅತ್ಯಂತ ಸಮೃದ್ಧವಾಗಿರುವ ವಿಟಮಿನ್ ಎ ಇದು ನಿಮ್ಮ ಕಣ್ಣುಗಳು, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಜೀವಕೋಶಗಳಿಗೆ ಪ್ರಮುಖವಾಗಿದೆ. ಇದರ ಜೊತೆ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಸಹ ಹನಿನಟ್ ಸ್ಕ್ವ್ಯಾಷ್ ನೀಡುತ್ತದೆ.
ಇದನ್ನೂ ಓದಿ: ಈ ಥಾಯ್ ತಿನಿಸನ್ನು ಒಂದೇ ಒಂದು ತುತ್ತು ತಿಂದರೂ ಕ್ಯಾನ್ಸರ್ ಬರುವುದು ಗ್ಯಾರಂಟಿ!
ಹನಿನಟ್ ಸ್ಕ್ವ್ಯಾಷ್ ಫೈಬರ್ಭರಿತವಾಗಿರುತ್ತದೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹನಿನಟ್ ಸ್ಕ್ವ್ಯಾಷ್‌ನಲ್ಲಿ ಹೆಚ್ಚಿನ ಮಟ್ಟದ ಬೀಟಾ-ಕ್ಯಾರೋಟಿನ್ ಇದೆ. ಇದು ನಿಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ನಿಮ್ಮ ದೇಹವನ್ನು ಒತ್ತಡದಿಂದ ರಕ್ಷಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ