ಇದನ್ನು ಒಂದೇ ಒಂದು ತುತ್ತು ತಿಂದರೂ ಕ್ಯಾನ್ಸರ್ ಬರುವುದು ಗ್ಯಾರಂಟಿ!
ಕೊಯಿ ಪ್ಲಾ ವಿವಿಧ ಮಸಾಲೆಗಳು ಮತ್ತು ನಿಂಬೆ ರಸದೊಂದಿಗೆ ಮಸಾಲೆ ಹಾಕಿದ, ಕೊಚ್ಚಿದ ಹಸಿ ಮೀನುಗಳಿಂದ ಮಾಡಲಾಗುವ ಭಕ್ಷ್ಯವಾಗಿದೆ. ಈ ಖಾದ್ಯದ ಒಂದೇ ಒಂದು ಪೀಸ್ ತಿಂದರೂ ಲಿವರ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ. ಥೈಲ್ಯಾಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಮೀನುಗಳನ್ನು ಸೇವಿಸುತ್ತಾರೆ. ಅದೇರೀತಿ ಅಲ್ಲಿನ ಹಲವು ಕುಟುಂಬದವರು ನಿಯಮಿತವಾಗಿ ಕೋಯಿ ಪ್ಲಾವನ್ನು ತಿನ್ನುತ್ತಿದ್ದರು.
ನವದೆಹಲಿ: ಥೈಲ್ಯಾಂಡ್ ಆಹಾರ ವಿಶ್ವಾದ್ಯಂತ ಪ್ರಸಿದ್ಧವಾದ ಪಾಕಪದ್ಧತಿಯಾಗಿದೆ. ಇದರಲ್ಲಿ ಒಂದು ಭಯಾನಕ ಪದಾರ್ಥವೂ ಇದೆ. ಈ ಆಹಾರ ನಿಮ್ಮ ಲಿವರ್ ಕ್ಯಾನ್ಸರ್ಗೆ ಕಾರಣವಾಗಬಹುದು. ಈ ಆಹಾರವನ್ನು ಒಂದೇ ಒಂದು ಪೀಸ್ ತಿಂದರೂ ನಿಮಗೆ ಅಪಾಯ ತಪ್ಪಿದ್ದಲ್ಲ. ಅಷ್ಟಕ್ಕೂ ಯಾವುದು ಈ ಆಹಾರ? ಆಗ್ನೇಯ ಏಷ್ಯಾದ ರಾಷ್ಟ್ರವಾದ ಥೈಲ್ಯಾಂಡ್‌ನಲ್ಲಿ ಇಡೀ ಜಗತ್ತನ್ನು ಬೆಚ್ಚಿಬೀಳಿಸುವಂತೆ 20,000 ಜನರು ಥಾಯ್ ಆಹಾರವೊಂದನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಈ ತಿನಿಸಿನ ಹೆಸರು ಕೊಯಿ ಪ್ಲಾ.
ಕೊಯಿ ಪ್ಲಾ ವಿವಿಧ ಮಸಾಲೆಗಳು ಮತ್ತು ನಿಂಬೆ ರಸದೊಂದಿಗೆ ಮಸಾಲೆ ಹಾಕಿದ, ಕೊಚ್ಚಿದ ಹಸಿ ಮೀನುಗಳಿಂದ ಮಾಡಲಾಗುವ ಭಕ್ಷ್ಯವಾಗಿದೆ. ಈ ಖಾದ್ಯದ ಒಂದೇ ಒಂದು ಪೀಸ್ ತಿಂದರೂ ಲಿವರ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ. ಥೈಲ್ಯಾಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಮೀನುಗಳನ್ನು ಸೇವಿಸುತ್ತಾರೆ. ಅದೇರೀತಿ ಅಲ್ಲಿನ ಹಲವು ಕುಟುಂಬದವರು ನಿಯಮಿತವಾಗಿ ಕೋಯಿ ಪ್ಲಾವನ್ನು ತಿನ್ನುತ್ತಿದ್ದರು.
ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಲು ರಾತ್ರಿ 9 ಗಂಟೆಯ ನಂತರ ಈ 6 ಆಹಾರವನ್ನು ತಿನ್ನಬೇಡಿ
ಮಸಾಲೆಗಳು ಮತ್ತು ಸುಣ್ಣವನ್ನು ಕಚ್ಚಾ ಮೀನಿನ ಪೀಸುಗಳ ಮೇಲೆ ಹಾಕಿ, ಅದಕ್ಕೆ ನಿಂಬೆ ಹುಳಿ ಹಿಂಡಲಾಗುತ್ತದೆ. ಇದು ಇಲ್ಲಿನ ವಿಶೇಷ ಭಕ್ಷ್ಯವಾಗಿದೆ. ಈ ಫುಡ್ ಬಹಳ ಅಗ್ಗದ ಮತ್ತು ರುಚಿಕರವಾದುದಾಗಿದೆ. ಆದರೆ, ಈ ಕೋಯಿ ಪ್ಲಾ ತಿಂದ ಬಹುತೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದರು. ಆದರೆ, ಅದಕ್ಕೆ ತಾವು ತಿಂದ ಆಹಾರವೇ ಕಾರಣ ಎಂಬ ವಿಷಯ ಅವರಿಗೆ ಗೊತ್ತಿರಲಿಲ್ಲ.
ಸುಮಾರು 20,000 ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ, ಕ್ಯಾನ್ಸರ್ನಿಂದ ಸಾವನ್ನಪ್ಪಿದ ಬಳಿಕ ವೈದ್ಯರು ಅವರ ಆಹಾರದ ಹಿಸ್ಟರಿಯನ್ನು ತೆಗೆದು ನೋಡಿದಾಗ ಅವರೆಲ್ಲರೂ ಕೋಯಿ ಪ್ಲಾ ಸೇವಿಸಿರುವುದು ತಿಳಿದುಬಂದಿತು. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡಿದ್ದು, ಈ ಅಪಾಯಕ್ಕೆ ಆ ಭಕ್ಷ್ಯಕ್ಕೆ ಬಳಸುವ ಮೀನುಗಳು ಕಾರಣವಲ್ಲ. ಆ ಮೀನುಗಳು ತಿನ್ನುವ ಫ್ಲೂಕ್ ಎಂಬ ಚಪ್ಪಟೆ ಹುಳುಗಳೇ ಇದಕ್ಕೆ ಕಾರಣ.
ಇದನ್ನೂ ಓದಿ: World Egg Day 2023: ಆರೋಗ್ಯ, ಸೌಂದರ್ಯಕ್ಕೆರಡೂ ಮೊಟ್ಟೆಯಿಂದ ಆಗುವ ಪ್ರಯೋಜನ ಒಂದೆರಡಲ್ಲ!
ಈ ಚಪ್ಪಟೆ ಹುಳುಗಳನ್ನು ಸಾಮಾನ್ಯವಾಗಿ ಫ್ಲೂಕ್ ಎಂದು ಕರೆಯಲಾಗುತ್ತದೆ. ಇದು ಮೆಕಾಂಗ್ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ. ಸಿಹಿ ನೀರಿನ ಮೀನುಗಳು ಈ ಹುಳಗಳನ್ನು ತಿನ್ನುತ್ತವೆ. ಈಶಾನ್ಯ ಥೈಲ್ಯಾಂಡ್‌ನ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾದ ಇಸಾನ್ನಲ್ಲಿ ಕೋಲಾಂಜಿಯೋಕಾರ್ಸಿನೋಮ (CCA) ಎಂಬ ಕ್ಯಾನ್ಸರ್ ಪತ್ತೆಯಾಗಿದೆ. ಇದು ಒಂದು ರೀತಿಯ ಪಿತ್ತರಸ ನಾಳದ ಕ್ಯಾನ್ಸರ್ ಆಗಿದೆ. ಹಸಿ ಮೀನಿನ ಅತಿಯಾದ ಸೇವನೆಯೇ ಇದಕ್ಕೆ ಕಾರಣವಾಗಿದೆ.
ಈ ಹುಳಗಳಿರುವ ಮೀನನ್ನು ಸೇವಿಸಿದರೆ ದೇಹದೊಳಗೆ ಸೇರಿಕೊಳ್ಳುವ ಈ ಹುಳುಗಳು ಪಿತ್ತರಸ ನಾಳಗಳಲ್ಲಿ ಕೆಲವು ವರ್ಷಗಳವರೆಗೆ ಜೀವಂತವಾಗಿರುತ್ತವೆ. ಇದು ನಿರಂತರವಾಗಿ ಉರಿಯೂತವನ್ನು ಉಂಟುಮಾಡುತ್ತದೆ. ಕೊನೆಗೆ ಇದು ಕ್ಯಾನ್ಸರ್ ಆಗಿ ಉಲ್ಬಣಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ