Women Lose Weight: ನೋಡಲು ತುಂಬಾ ದಪ್ಪಗಿದ್ದೀರಾ? ತೂಕ ಇಳಿಸಿಕೊಳ್ಳಲು ಇಲ್ಲಿದೆ ಸಲಹೆಗಳು

| Updated By: Skanda

Updated on: Jul 03, 2021 | 8:00 AM

ಪ್ರತಿನಿತ್ಯವೂ ಕೂಡಾ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ವ್ಯಾಯಾಮದಿಂದ ಅದೆಷ್ಟೋ ಆರೋಗ್ಯ ಸಮಸ್ಯೆಗಳು ವಾಸಿಯಾಗುತ್ತದೆ.

Women Lose Weight: ನೋಡಲು ತುಂಬಾ ದಪ್ಪಗಿದ್ದೀರಾ? ತೂಕ ಇಳಿಸಿಕೊಳ್ಳಲು ಇಲ್ಲಿದೆ ಸಲಹೆಗಳು
ತೂಕ ಇಳಿಸಿಕೊಳ್ಳುವುದು ಹೇಗೆ?
Follow us on

ತೂಕ ಹೆಚ್ಚಾಗಿದೆ ಎಂಬುದೇ ಅದೆಷ್ಟೋ ಜನರ ಕೊರಗು. ಅದರಲ್ಲಿಯೂ ಮಹಿಳೆಯರಿಗೆ ಕೊಂಚ ಜಾಸ್ತಿಯೇ ಚಿಂತೆ ಎಂದರೆ ತಪ್ಪಾಗಲಾರದು. ಮಹಿಳೆಯರು ಹೆರಿಗೆ ಆದಮೇಲೆ ಸಹಜವಾಗಿ ದಪ್ಪಗಾಗಿಬಿಡುತ್ತಾರೆ. ಮಕ್ಕಳಾದ ಮೇಲೆ ಮಹಿಳೆಗೆ ಆಕೆಯ ಕುರಿತಾಗಿ ಕಾಳಜಿವಹಿಸಲು ಸಮಯ ಸಿಗುವುದಿಲ್ಲ. ಹೀಗಿದ್ದಾಗ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸುಲಭದಲ್ಲಿ ತೂಕ ಇಳಿಸಿಕೊಳ್ಳಬಹುದಾದ ಕೆಲವು ಟಿಪ್ಸ್​ಗಳು ಹೀಗಿವೆ.

ತೂಕ ಹೆಚ್ಚಾದರೆ ನೋಡಲು ಸುಂದರವಾಗಿ ಕೊಣಿಸುವುದಿಲ್ಲ ಎಂಬುದು ಮಹಿಳೆಯ ಚಿಂತೆ. ಹೀಗಿರುವಾಗ ಅದೆಷ್ಟೋ ಔಷಧಗಳನ್ನು ಮಾಡಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಗಿಡಮೂಲಿಕೆಯಿಂದ ತಯಾರಿಸಿ ಚಹ ಸೇವಿಸಿ. ಇದರಿಂದ ನಿಮ್ಮ ದೇಹದಲ್ಲಿನ​ ಕೊಬ್ಬಿನಾಂಶವನ್ನು ಕರಗಿಸಿಕೊಳ್ಳಲು ಸಹಾಯವಾಗುತ್ತದೆ. ಆದರೆ ಆದಷ್ಟು ಸಕ್ಕರೆ ಸೇರಿಸದ ಚಹವನ್ನು ಸೇವಿಸಿ. ಇದು ನಿಮ್ಮ ಆರೋಗ್ಯಕ್ಕೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಬಾದಾಮಿ ಮತ್ತು ಒಣದ್ರಾಕ್ಷಿ
ಬಾದಾಮಿ, ಒಣದ್ರಾಕ್ಷಿಯನ್ನು ಸೇವಿಸಿ. ಇದು ನಿಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. 10 ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಪುಡಿ ಮಾಡಿ ತಯಾರಿಸಿಕೊಳ್ಳಿ. ಒಂದು ಗ್ಲಾಸ್​ ಹಾಲಿನೊಂದಿಗೆ ಒಂದು ಚಮಚ ಪುಡಿಯನ್ನು ಮಿಕ್ಸ್​ ಮಾಡಿ ಸೇವಿಸಿ.

ದಾಲ್ಚಿನ್ನಿ ಮತ್ತು ಲವಂಗ
ದಾಲ್ಚಿನ್ನಿ ಮತ್ತು ಲವಂಗ ಕೊಬ್ಬಿನಾಂಶವನ್ನು ಕರಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ 2ರಿಂದ 3 ಲವಂಗ ಸೇರಿಸಿ ಮತ್ತು ದಾಲ್ಚಿನ್ನಿಯನ್ನು ಸೇರಿಸಿ ಕುದಿಸಿ. ನಂತರ ಕುದಿಸಿದ ನೀರನ್ನು ಸೇವಿಸುವುದರ ಮೂಲಕ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹಾಗೆಯೇ ಒಂದು ಲೋಟ ಹಾಲಿಗೆ ಒಂದು ಚಮಚ ಜಾಯಿಕಾಯಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಪ್ರತಿನಿತ್ಯ ವ್ಯಾಯಾಮ
ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ದೈಹಿಕವಾಗಿ ಚಟುವಟಿಕೆಯಿಂದ ಕೂಡಿರಲು ಇದು ಸಹಾಯ ಮಾಡುತ್ತದೆ. ಇದು ಹಾರ್ಮೋನು ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ. ಹಾಗಿರುವಾಗ ಪ್ರತಿನಿತ್ಯವೂ ಕೂಡಾ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ವ್ಯಾಯಾಮದಿಂದ ಅದೆಷ್ಟೋ ಆರೋಗ್ಯ ಸಮಸ್ಯೆಗಳು ವಾಸಿಯಾಗುತ್ತದೆ. ಜತೆಗೆ ದೇಹದ ತೂಕವನ್ನು ಇಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ವ್ಯಾಯಾಮದ ಜತೆಗೆ ಬೆಳಗ್ಗೆ ಜಾಗಿಂಗ್​ ಮತ್ತು ಸಂಜೆ ವಾಕಿಂಗ್​ ಹೋಗುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ: 

Weight loss Tips: ತೂಕವನ್ನು ಇಳಿಸಲು ದೇಹದಂಡನೆ ಮಾಡುವುದನ್ನು ಬಿಡಿ; ಈ ಸರಳ ಆಹಾರ ಪದ್ಧತಿಯನ್ನು ಅನುಸರಿಸಿ

ಬೊಜ್ಜು ಮತ್ತು ಅಧಿಕ ತೂಕವಿರುವವರು ತೀವ್ರ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವಿಗೀಡಾಗಿದ್ದು ಕಡಿಮೆ: ವರದಿ