ಕೆಲವೊಮ್ಮೆ ಏಕಾಂತವಾಗಿರಬೇಕು ಎನಿಸುತ್ತದೆ. ಇನ್ನು ಕೆಲವೊಮ್ಮೆ ಏಕಾಂತವೇ ಶಾಪವೆನಿಸುತ್ತದೆ. ಸ್ವಲ್ಪ ಸಮಯ ನಮ್ಮ ಮನಸು ಒಂಟಿಯಾಗಿರಬೇಕೆಂದು ಬಯಸುವುದು ಸಾಮಾನ್ಯ. ಆದರೆ, ಒಂಟಿತನ ಕೆಲವೊಮ್ಮೆ ಮಾನಸಿಕ ಸಮಸ್ಯೆಗಳನ್ನು ಕೂಡ ತಂದೊಡ್ಡಬಹುದು. ಸಂತೋಷ, ದುಃಖದ ಕ್ಷಣಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕೆಂದು ಮನುಷ್ಯ ಬಯಸುವುದು ಸಹಜ. ಇದು ಭಾವನಾತ್ಮಕ ಸಮಸ್ಯೆಯಾಗಿದ್ದು, ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇತ್ತೀಚಿನ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಒಂಟಿತನವನ್ನು ಆರೋಗ್ಯ ಸಮಸ್ಯೆಯಾಗಿ ಬಿಂಬಿಸಿದೆ. ಏಕಾಂತವನ್ನು ನಿರ್ವಹಿಸಲು ಸಲಹೆಗಳು ಇಲ್ಲಿವೆ.
ನಿಮ್ಮ ಹವ್ಯಾಸಗಳನ್ನು ಮತ್ತೆ ಶುರು ಮಾಡಿ:
ನಿಮಗೆ ಏನು ಇಷ್ಟವೋ ಅದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮನಸ್ಸು ಮತ್ತು ದೇಹವನ್ನು ಸಂತೋಷವಾಗಿಡುವ ವಿಷಯಗಳತ್ತ ಗಮನಹರಿಸಿ. ಫೋಟೋಗ್ರಫಿ, ಸಾಹಸ ಕ್ರೀಡೆಗಳು, ಪುಸ್ತಕ ಓದುವುದು, ಕುಂಬಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಇದನ್ನೂ ಓದಿ: ಉಪ್ಪಿನಲ್ಲಿ ಎಷ್ಟು ವಿಧ?; ಆರೋಗ್ಯಕ್ಕೆ ಯಾವ ರೀತಿಯ ಉಪ್ಪು ಉತ್ತಮ?
ಸೋಷಿಯಲ್ ಕಾರ್ಯದಲ್ಲಿ ತೊಡಗಿಸಿಕೊಳ್ಳಿ:
ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ಜನರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ.
ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಿಕೊಳ್ಳಿ:
ಏಕಾಂತದಿಂದ ಹೊರಬರಲು ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಬೆಳೆಸಿ. ಅವರೊಂದಿಗೆ ಮಾತನಾಡಿ, ಟ್ರಿಪ್ ಹೋಗಿ.
ಇದನ್ನೂ ಓದಿ: ಮಾನಸಿಕ ಒತ್ತಡದಿಂದ ಮೈಗ್ರೇನ್ ಬರುತ್ತಾ?
ಮನೋವೈದ್ಯರಿಂದ ಸಲಹೆ ಪಡೆಯಿರಿ:
ಏಕಾಂಗಿತನವೇ ಮುಂದೆ ಖಿನ್ನತೆಯಾಗಿ ಬದಲಾಗಬಹುದು. ಹೀಗಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಮನೋವೈದ್ಯರ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ