ಉಪ್ಪಿನಲ್ಲಿ ಎಷ್ಟು ವಿಧ?; ಆರೋಗ್ಯಕ್ಕೆ ಯಾವ ರೀತಿಯ ಉಪ್ಪು ಉತ್ತಮ?

ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಿಸುವ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಗಳ ಸಮತೋಲನವನ್ನು ಕಾಪಾಡಿಕೊಳ್ಳಲು ನಮ್ಮ ದೇಹಕ್ಕೆ ಉಪ್ಪು ಅತ್ಯಗತ್ಯ. ನಮ್ಮ ಆರೋಗ್ಯಕ್ಕೆ ಯಾವ ಉಪ್ಪು ಅತ್ಯುತ್ತಮವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಉಪ್ಪಿನಲ್ಲಿ ಎಷ್ಟು ವಿಧ?; ಆರೋಗ್ಯಕ್ಕೆ ಯಾವ ರೀತಿಯ ಉಪ್ಪು ಉತ್ತಮ?
ಉಪ್ಪುImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 17, 2023 | 6:19 PM

ಉಪ್ಪು ಇಲ್ಲದಿದ್ದರೆ ಅಡುಗೆಗೆ ಯಾವ ರುಚಿಯೂ ಇರುವುದಿಲ್ಲ. ಸಿಹಿ ತಿಂಡಿಗೂ ಒಂದು ಚಿಟಿಕೆ ಉಪ್ಪು ಹಾಕಿದರೆ ಮಾತ್ರ ಅದರ ರುಚಿ ಹೆಚ್ಚಾಗುತ್ತದೆ. ಆದರೆ, ನಾವು ಸೇವಿಸುವ ಉಪ್ಪು ಆರೋಗ್ಯಯುತವಾಗಿದೆಯೇ? ಎಂದು ನಾವು ಯೋಚಿಸಬೇಕು. ಏಕೆಂದರೆ ಎಷ್ಟೋ ಜನರಿಗೆ ಉಪ್ಪಿನಲ್ಲಿ ಹಲವು ಬಗೆಯಿದೆ ಎಂಬ ವಿಚಾರವೇ ಗೊತ್ತಿಲ್ಲ. ಕಲ್ಲು ಉಪ್ಪು ಮತ್ತು ಪುಡಿ ಉಪ್ಪು ಎಂಬ ಎರಡೇ ಬಗೆಯಿದೆ ಎಂಬುದು ಅವರಿಗೆ ತಿಳಿದಿರುವ ಸಂಗತಿ. ಇದು ತಪ್ಪು. ಉಪ್ಪಿನಲ್ಲಿ ಹಲವು ವಿಧಗಳಿವೆ. ಇವು ನಮ್ಮ ದೇಹಕ್ಕೆ ಬೇರೆ ಬೇರೆ ರೀತಿಯ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಹಾಗಾದರೆ, ನಮ್ಮ ಆರೋಗ್ಯಕ್ಕೆ ಯಾವ ಉಪ್ಪು ಅತ್ಯುತ್ತಮವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಿಸುವ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಗಳ ಸಮತೋಲನವನ್ನು ಕಾಪಾಡಿಕೊಳ್ಳಲು ನಮ್ಮ ದೇಹಕ್ಕೆ ಉಪ್ಪು ಅತ್ಯಗತ್ಯ. ಎಲ್ಲ ಉಪ್ಪುಗಳಲ್ಲೂ ಸೋಡಿಯಂ ಅಂಶವಿರುತ್ತದೆ. ಹಾಗೆಂದು ಎಲ್ಲ ಉಪ್ಪೂ ಆರೋಗ್ಯಕರವೆಂದು ಪರಿಗಣಿಸಲಾಗದು. ಕೆಲವು ಉಪ್ಪಿನಲ್ಲಿ ಹೆಚ್ಚುವರಿ ಖನಿಜಗಳು ಇರುತ್ತವೆ. ಕೆಲವು ಉಪ್ಪನ್ನು ಕಡಿಮೆ ಸಂಸ್ಕರಿಸಲಾಗಿರುತ್ತದೆ. ಇದರಿಂದ ಅದರ ಅಂಶವು ಬದಲಾಗುತ್ತದೆ.

ಉಪ್ಪಿನ ವಿಧಗಳು ಹೀಗಿವೆ:

ಹಿಮಾಲಯನ್ ಗುಲಾಬಿ ಉಪ್ಪು:

ಗುಲಾಬಿ ಹಿಮಾಲಯನ್ ಉಪ್ಪು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಇರುತ್ತದೆ. ಈ ಖನಿಜಗಳು ಒಟ್ಟಾರೆ ಪೌಷ್ಟಿಕಾಂಶದ ಸೇವನೆಗೆ ಕೊಡುಗೆ ನೀಡಬಲ್ಲವು.

ಇದನ್ನೂ ಓದಿ: ನಿದ್ರಾಹೀನತೆಯಿಂದ ಮಹಿಳೆಯರಲ್ಲಿ ಡಯಾಬಿಟಿಸ್ ಹೆಚ್ಚಳ; ಅಧ್ಯಯನದಲ್ಲಿ ಬಯಲು

ಸಮುದ್ರದ ಉಪ್ಪು:

ಸಮುದ್ರದ ಲವಣಗಳು ಉದಾಹರಣೆಗೆ ಸೆಲ್ಟಿಕ್ ಅಥವಾ ಫ್ರೆಂಚ್ ಫ್ಲೂರ್ ಡಿ ಸೆಲ್ ಸಮುದ್ರದ ನೀರಿನ ಆವಿಯಾಗುವಿಕೆಯ ಮೂಲಕ ಉಪ್ಪು ತಯಾರಿಸಲಾಗುತ್ತದೆ. ಇದು ಸಮುದ್ರ ಮೂಲದಿಂದ ಬರುವ ಖನಿಜಗಳನ್ನು ಉಳಿಸಿಕೊಳ್ಳುತ್ತದೆ. ಆದರೆ, ಇದು ಹಿಮಾಲಯನ್ ಉಪ್ಪಿನಂತೆ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದಿಲ್ಲ. ಸಮುದ್ರದ ಉಪ್ಪಿನಲ್ಲಿರುವ ಖನಿಜಾಂಶವು ಆರೋಗ್ಯದ ಪ್ರಭಾವದ ದೃಷ್ಟಿಯಿಂದ ಅತ್ಯಲ್ಪವೆಂದು ಪರಿಗಣಿಸಲಾಗಿದೆ.

ಪೊಟ್ಯಾಸಿಯಮ್ ಉಪ್ಪು:

ಪೊಟ್ಯಾಸಿಯಮ್ ಲವಣಗಳು ಮತ್ತೊಂದು ಪರ್ಯಾಯವಾಗಿದ್ದು, ಪ್ರಮಾಣಿತ ಟೇಬಲ್ ಉಪ್ಪಿಗಿಂತ 70% ಕಡಿಮೆ ಸೋಡಿಯಂ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಆಹಾರದ ಸೋಡಿಯಂನಲ್ಲಿನ ಸಾಧಾರಣ ಕಡಿತವು ರಕ್ತದೊತ್ತಡವನ್ನು ಸುಮಾರು 5 ರಿಂದ 6 mm Hg ವರೆಗೆ ಸುಧಾರಿಸುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಕಡಿಮೆ-ಸೋಡಿಯಂ ಇರುವ ಉಪ್ಪನ್ನು ಸೇವಿಸಲು ಸೂಚಿಸಲಾಗುತ್ತದೆ.

ಇದನ್ನೂ ಓದಿ: ನೀವು ಹೆಚ್ಚು ಉಪ್ಪು ಸೇವಿಸುತ್ತೀರಾ?; ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ

ಟೇಬಲ್ ಉಪ್ಪು:

ಟೇಬಲ್ ಉಪ್ಪು ಬಹುತೇಕರ ಮನೆಯಲ್ಲಿ ಎಲ್ಲರೂ ಬಳಸುವ ಉಪ್ಪಾಗಿದೆ. ಸೌರ ಆವಿಯಾಗುವಿಕೆಯ ಮೂಲಕ ಸಮುದ್ರದ ನೀರು ಅಥವಾ ಉಪ್ಪು ಸರೋವರಗಳಿಂದ ಇದನ್ನು ಪಡೆಯಲಾಗುತ್ತದೆ. ಈ ಉಪ್ಪಿನಲ್ಲಿರುವ ಕಲ್ಮಶಗಳನ್ನು ತೊಡೆದುಹಾಕಲು ಸಾಕಷ್ಟು ಸಂಸ್ಕರಣೆ ಮಾಡಲಾಗುತ್ತದೆ. ಟೇಬಲ್ ಉಪ್ಪಿನ ಒಂದು ಪ್ರಚಲಿತ ರೂಪವೆಂದರೆ “ಅಯೋಡಿಕರಿಸಿದ ಉಪ್ಪು”. ಜನರಲ್ಲಿ ಅಯೋಡಿನ್ ಕೊರತೆಯನ್ನು ಪರಿಹರಿಸಲು ಅಯೋಡಿನ್​ಯುಕ್ತ ಉಪ್ಪನ್ನು ಪರಿಚಯಿಸಲಾಗಿದೆ. ಇದನ್ನು ಎಲ್ಲರ ಮನೆಯಲ್ಲೂ ಊಟಕ್ಕೆ, ಅಡುಗೆಗೆ ಬಳಸಲಾಗುತ್ತದೆ.

ಅಮೆರಿಕಾದ ಕೃಷಿ ಇಲಾಖೆಯು ದಿನಕ್ಕೆ 2,300 mg ಸೋಡಿಯಂನ ಸೇವನೆಯನ್ನು ಶಿಫಾರಸು ಮಾಡುತ್ತದೆ. ಆದರೆ ಸರಾಸರಿ ವಯಸ್ಕರು ದಿನಕ್ಕೆ ಸುಮಾರು 3,393mg ಹೆಚ್ಚು ಉಪ್ಪು ಸೇವಿಸುತ್ತಾರೆ. ಆದ್ದರಿಂದ ನೀವು ಯಾವ ವಿಧದ ಉಪ್ಪನ್ನು ಸೇವಿಸಿದರೂ ಅದನ್ನು ಮಿತವಾಗಿ ಸೇವಿಸುವುದು ಅಗತ್ಯವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ