ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು? ಕಡಿಮೆ ನೀರು ಕುಡಿಯುವ ಅಭ್ಯಾಸ ಇದ್ರೆ ಈ ಸಮಸ್ಯೆಗಳು ಬರುವುದು ಖಂಡಿತ

ಚಳಿಗಾಲದಲ್ಲಿ ಶೀತ ವಾತಾವರಣವಿರುವ ಕಾರಣ ಬಾಯಾರಿಕೆಯಾಗುವುದು ಕಡಿಮೆ. ಆದರೆ ಈ ಋತುವಿನಲ್ಲಿಯೂ ದೇಹಕ್ಕೆ ಸಾಕಷ್ಟು ನೀರಿನ ಅಗತ್ಯವಿರುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ನಿರ್ಜಲೀಕರಣವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಬೇಸಿಗೆಗೆ ಹೋಲಿಕೆ ಮಾಡಿದರೆ ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು? ನೀರು ಕುಡಿಯುವ ಪ್ರಮಾಣವು ಕಡಿಮೆಯಾದ್ರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು? ಕಡಿಮೆ ನೀರು ಕುಡಿಯುವ ಅಭ್ಯಾಸ ಇದ್ರೆ ಈ ಸಮಸ್ಯೆಗಳು ಬರುವುದು ಖಂಡಿತ
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Nov 29, 2024 | 12:27 PM

ಇದೀಗ ಚಳಿಗಾಲ ಆರಂಭವಾಗಿದೆ, ಶೀತ ವಾತಾವರಣವಿರುವ ಕಾರಣ ನೀರು ಕುಡಿಯಬೇಕೆಂದೇನಿಸುವುದಿಲ್ಲ. ಈ ಚಳಿಯ ವಾತಾವರಣದಿಂದಾಗಿ ಈ ಋತುವಿನಲ್ಲಿ ನೀರಿನ ದಾಹ ಕಡಿಮೆಯಾದರೂ ದೇಹಕ್ಕೆ ಅಗತ್ಯವಾಗಿ ನೀರು ಬೇಕಾಗುತ್ತದೆ. ಆದರೆ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ಮೈ ಕೊರೆಯುವ ಚಳಿಯ ನಡುವೆ ಸೇವಿಸುವ ಆಹಾರದಿಂದ ಹಿಡಿದು, ಕುಡಿಯುವ ನೀರಿನ ಪ್ರಮಾಣದ ಬಗ್ಗೆಯೂ ಹೆಚ್ಚು ಗಮನಹರಿಸಬೇಕು.

ಒಬ್ಬ ವ್ಯಕ್ತಿ ಎಷ್ಟು ಲೋಟ ನೀರು ಕುಡಿಯಬೇಕು?

ಬೆಳಗ್ಗೆಯಿಂದ ರಾತ್ರಿಯವರೆಗೆ ದಿನವಿಡೀ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಚಳಿಗಾಲದಲ್ಲಿ ಒಬ್ಬ ವ್ಯಕ್ತಿ ಬಾಯಾರಿಕೆ ಆಗದಿದ್ದರೂ ಕೂಡ ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯಲೇ ಬೇಕು. ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗುವ ಪುರುಷರು ದಿನಕ್ಕೆ 10 ರಿಂದ 14 ಲೋಟ ಮತ್ತು ಮಹಿಳೆಯರು 8 ರಿಂದ 12 ಲೋಟ ನೀರನ್ನು ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅದಲ್ಲದೇ ನೀರಿನ ಬದಲಿಗೆ ಜ್ಯೂಸ್, ಹಾಲು, ಚಹಾ, ತೆಂಗಿನ ನೀರನ್ನು ಸೇವಿಸಬಹುದು. ಇದರಿಂದ ದೇಹವು ನಿರ್ಜಲೀಕರಣಗೊಳ್ಳುವುದಿಲ್ಲ ಹಾಗೂ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ ಎನ್ನುತ್ತಾರೆ ವೈದ್ಯರು.

ಚಳಿಗಾಲದಲ್ಲಿ ನೀರು ಕಡಿಮೆ ಕುಡಿದ್ರೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು:

ಬೊಜ್ಜಿನ ಸಮಸ್ಯೆ:

ಕಡಿಮೆ ನೀರು ಕುಡಿಯುವುದರಿಂದ ಬೊಜ್ಜಿನ ಸಮಸ್ಯೆ ಕಾಡುವ ಸಂಭವವೇ ಹೆಚ್ಚು. ದಿನಕ್ಕೆ ಇಂತಿಷ್ಟು ಪ್ರಮಾಣದಲ್ಲಿ ಆಹಾರ ಸೇವಿಸುತ್ತೇವೆ. ಆದರೆ ದೇಹಕ್ಕೆ ಬೇಕಾಗಿರುವಷ್ಟು ನೀರನ್ನು ಕುಡಿಯುವುದಿಲ್ಲ, ಈ ಕಾರಣದಿಂದಾಗಿ ಅನೇಕ ಬಾರಿ ಸೇವಿಸುವ ಆಹಾರವೇ ಹೆಚ್ಚಾಗಿ ಜೀರ್ಣವಾಗದೇ ಹೋದರೆ, ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

ಬಾಯಿಯ ದುರ್ವಾಸನೆ:

ಕಡಿಮೆ ನೀರು ಕುಡಿಯುವ ಅಭ್ಯಾಸದಿಂದ ಬಾಯಿ ಒಣಗಲು ಪ್ರಾರಂಭಿಸುತ್ತದೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ದಾರಿ ಮಾಡಿಕೊಡುತ್ತವೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆಯೂ ಬರುತ್ತದೆ.

ಕಡಿಮೆ ಬೆವರುವಿಕೆ ಹಾಗೂ ಮೂತ್ರ ವಿಸರ್ಜನೆ:

ದೇಹವು ನಿರ್ಜಲೀಕರಣವಾದಾಗ ಬೆವರು ಮತ್ತು ಮೂತ್ರ ವಿಸರ್ಜನೆಯು ಕಡಿಮೆಯಾಗುತ್ತದೆ. ಇದರಿಂದ ವಿಷವು ದೇಹದಿಂದ ಹೊರಬರಲು ಸಾಧ್ಯವಾಗಲ್ಲ. ಇದು ಇನ್ನಿತ್ತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ.

ತಲೆನೋವು:

ನೀರಿನ ಕೊರತೆಯಿಂದಾಗಿ ಮೆದುಳಿನ ಜೀವಕೋಶಗಳು ತಾತ್ಕಾಲಿಕವಾಗಿ ಕುಗ್ಗುವುದರಿಂದ ತಲೆನೋವಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಮಲಬದ್ಧತೆ:

ನೀರಿನ ಕೊರತೆಯು ಹೊಟ್ಟೆಯಲ್ಲಿ ಆಮ್ಲ ರಚನೆಯ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಅನಿಲವು ರೂಪುಗೊಳ್ಳುತ್ತವೆ. ಮಲಬದ್ಧತೆ ಸೇರಿದಂತೆ, ಎದೆಯುರಿಯಂತಹ ಸಮಸ್ಯೆಗಳು ಉಂಟಾಗುತ್ತದೆ.

ಇದನ್ನೂ ಓದಿ: ನೀವು ಅತಿಯಾದ ಚಳಿಯಿಂದ ಬಳಲುತ್ತಿದ್ದೀರಾ? ಈ ಪೋಷಕಾಂಶದ ಕೊರತೆಯೇ ಕಾರಣ

ಆಯಾಸ:

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ. ದೇಹದಲ್ಲಿ ನೀರಿನ ಕೊರತೆಯಿದ್ದರೆ ಸಣ್ಣ ಪುಟ್ಟ ಕೆಲಸ ಮಾಡಿದರೂ ಸುಸ್ತು, ಆಯಾಸವಾಗುತ್ತದೆ.

ಒಣ ತ್ವಚೆ:

ದೇಹದಲ್ಲಿ ನೀರಿನ ಕೊರತೆಯಿಂದ ತ್ವಚೆಯೂ ಒಣಗುವುದು, ಕಪ್ಪು ವರ್ತುಲ, ತುರಿಕೆ, ಸುಕ್ಕುಗಳು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ