ಪ್ರೀ ಡಯಾಬಿಟಿಕ್ (Pre Diabetic) ಎನ್ನುವುದು ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಿರುವ ಸ್ಥಿತಿಯಾಗಿದೆ. ಅದನ್ನು ಮಧುಮೇಹ ಎಂದು ಪರಿಗಣಿಸಲಾಗುತ್ತದೆ. ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರು ಪ್ರೀ ಡಯಾಬಿಟಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಅದನ್ನು ಹಿಡಿತಕ್ಕೆ ತರಬಹುದು. ಪ್ರೀ ಡಯಾಬಿಟಿಕ್ ಕಾಯಿಲೆಯ ಬಗ್ಗೆ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ತೆಗೆದುಕೊಂಡರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವ ಮೂಲಕ ಟೈಪ್ 2 ಮಧುಮೇಹ ಭಾದಿಸುವ ಅಪಾಯವನ್ನು ಶಾಶ್ವತವಾಗಿ ತಪ್ಪಿಸಬಹುದು. ಔಷಧಿಗಳಿಲ್ಲದಿದ್ದರೂ, ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಪ್ರೀ ಡಯಾಬಿಕ್ನ್ನು ನಿಯಂತ್ರಿಸಬಹುದಾಗಿದೆ.
ಮುಧುಮೇಹವು ಯಾರಲ್ಲಿಯೂ ಇದ್ದಕ್ಕಿದ್ದಂತೆ ಬರುವುದಿಲ್ಲ. ಇದರ ಕೆಲವು ಲಕ್ಷಣಗಳು ಈ ಮೊದಲೇ ಗೋಚರಿಸುತ್ತದೆ. ಅತಿಯಾದ ಬಾಯಾರಿಕೆ, ಆಯಾಸ, ಆಗಾಗ್ಗೆ ಮೂತ್ರವಿಸರ್ಜನೆ, ಹಠಾತ್ ತೂಕ ನಷ್ಟ, ಅತಿಯಾದ ಹಸಿವು, ಕಾಲು ಅಥವಾ ಕೈಗಳಲ್ಲಿ ಜುಮ್ಮೆನಿಸುವುದು ಪ್ರೀ ಡಯಾಬಿಟಿಸ್ನ ಲಕ್ಷಣವಾಗಿದೆ. ಪ್ರೀ ಡಯಾಬಿಟಿಕ್ ಹಂತದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಮಗೆ ಔಷಧಿಗಳ ಅಗತ್ಯವಿಲ್ಲ. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಪೂರ್ವ ಹಂತದ ಮಧುಮೇಹವನ್ನು ತಡೆಗಟ್ಟಬಹುದು. ಪ್ರೀ ಡಯಾಬಿಟಿಕ್ ನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ ಅದು ಅನೇಕ ಅಪಾಯಗಳೊಂದಿಗೆ ಟೈಪ್ 2 ಮಧುಮೇಹವಾಗಿ ಪರಿಣಮಿಸಬಹುದು.
ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಮಧುಮೇಹವನ್ನು ಗುಣಪಡಿಸಲು ಅತ್ಯುತ್ತಮ ತಂತ್ರವಾಗಿದೆ. ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮವು ಟೈಪ್ 2 ಮಧುಮೇಹ ನಿಮ್ಮನ್ನು ಭಾದಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ.
ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರೀ ಡಯಾಬಿಟಿಸ್ ಸಮಸ್ಯೆಯನ್ನು ನಿರ್ವಹಣೆ ಮಾಡಬಹುದು. ಪ್ರೀ ಡಯಾಬಿಟಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಕನಿಷ್ಟ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಇದು ಅವರ ತೂಕವನ್ನು ನಿಯಂತ್ರಿಸಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರೀ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣದಲ್ಲಿಡುವುದು ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ. ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ಸಮತೋಲಿತ ಆಹಾರ ಸೇವನೆ ಮತ್ತು ಸ್ಥಿರವಾದ ವ್ಯಾಯಾಮವು ಆರೋಗ್ಯಕ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಮಧುಮೇಹದ ಮೂತ್ರಪಿಂಡ ಕಾಯಿಲೆಯ ಎಚ್ಚರಿಕೆ ಹಂತಗಳು
ದೀರ್ಘಕಾಲದ ಒತ್ತಡವು ಇನ್ಸುಲಿನ್ ಪ್ರತಿರೋಧಕವನ್ನು ಉಲ್ಬಣಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯೋಗ, ಆಳವಾದ ಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ಪ್ರಕೃತಿಯಲ್ಲಿ ಸಮಯ ಕಳೆಯುವ ಮೂಲಕ ಒತ್ತಡ ನಿರ್ವಹಣೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದರಿಂದ ಒತ್ತಡವನ್ನು ನಿವಾರಿಸಬಹುದು ಹಾಗೂ ಇದು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಆರೊಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿದ್ರೆ ಪಡೆಯುವುದು ತುಂಬಾ ಮುಖ್ಯವಾಗಿದೆ. ಸಾಕಷ್ಟು ನಿದ್ರೆ ಪಡೆಯದಿದ್ದರೆ ಅದರಿಂದ ಪ್ರಿಡಯಾಬಿಟಿಕ್ ಮತ್ತು ಟೈಪ್ 2 ಮಧುಮೇಹ ಕಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರೀ ಡಯಾಬಿಟಿಕ್ ಕಾಯಿಲೆಯನ್ನು ನೈಸರ್ಗಿಕ ವಿಧಾನದ ಮೂಲಕ ಪರಿಹರಿಸಲು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಪಡೆಯುವುದು ಅವಶ್ಯಕ.
ನಿಮ್ಮ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಪ್ರೀ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಿಸಲು ನಿಯಮಿತ ವೈದ್ಯಕೀಯ ತಪಾಸಣೆಯ ಅಗತ್ಯವಿದೆ. ನಿಮ್ಮ ಕೊಲೆಸ್ಟ್ರಾಲ್, ರಕ್ತದೊತ್ತಡ, ರಕ್ತದ ಸಕ್ಕರೆ ಮಟ್ಟಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ. ಹಾಗೂ ವೈದ್ಯರ ಸಲಹೆಯ ಮೇರೆಗೆ ರೋಗನಿರ್ಣಯವನ್ನು ಪಡೆಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ