ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ ಗೊತ್ತಾ? ಇಲ್ಲಿದೆ ತಜ್ಞರ ಮಾಹಿತಿ

ಮಳೆಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಅವುಗಳಲ್ಲಿ ಬೆವರುಸಾಲೆ ಮತ್ತು ಶಿಲೀಂಧ್ರ ಸೋಂಕುಗಳು ಸೇರಿವೆ. ಮಳೆಗಾಲದಲ್ಲಿ ಈ ಎರಡು ಚರ್ಮ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದೇ? ಇವೆರಡರ ನಡುವಿನ ವ್ಯತ್ಯಾಸವೇನು ಎಂಬುದನ್ನು ತಜ್ಞರು ವಿವರಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ ಗೊತ್ತಾ? ಇಲ್ಲಿದೆ ತಜ್ಞರ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 09, 2025 | 9:49 AM

ಋತುಮಾನಗಳು ಬದಲಾದಂತೆ ಆರೋಗ್ಯದಲ್ಲೂ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜಿಡ್ಡು, ಮೊಡವೆ, ಅಲರ್ಜಿ, ತುರಿಕೆ, ಶಿಲೀಂಧ್ರ ಸೋಂಕು (fungal infections), ಬೆವರುಸಾಲೆ (sweat rash) ಇತ್ಯಾದಿ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಶಿಲೀಂಧ್ರ ಸೋಂಕು ಮತ್ತು ಬೆವರುಸಾಲೆ ಮುಖ್ಯವಾದುದು. ಎರಡೂ ಸ್ಥಿತಿಗಳು ಮಾನ್ಸೂನ್‌ನ ವಿಶಿಷ್ಟವಾದ ತೇವ  ವಾತಾವರಣದ ಕಾರಣದಿಂದ ಉಂಟಾಗುತ್ತವೆ. ಈ ಚರ್ಮ ಸಂಬಂಧಿ ಸಮಸ್ಯೆಗಳು ಮಳೆಗಾಲದಲ್ಲಿಯೇ ಏಕೆ ಉಲ್ಬಣಗೊಳ್ಳುತ್ತವೆ? ಅವುಗಳಿಂದ  ಮುಕ್ತಿ ಪಡೆಯುವುದು ಹೇಗೆ ಎಂಬುದನ್ನು ತಜ್ಞರು ವಿವರಿಸುತ್ತಾರೆ.

ಮಳೆಗಾಲದಲ್ಲಿ ಈ ಚರ್ಮದ ಸಮಸ್ಯೆಗಳು ಏಕೆ ಉಲ್ಬಣಗೊಳ್ಳುತ್ತವೆ?

ಮಳೆಗಾಲದಲ್ಲಿ ಬೆವರುಸಾಲೆ ಅಥವಾ ದದ್ದುಗಳು ಮತ್ತು ಶಿಲೀಂಧ್ರಗಳ ಸೋಂಕುಗಳು ಹೆಚ್ಚಾಗಲು ಹಲವಾರು ಅಂಶಗಳು ಕಾರಣವಾಗಿವೆ;

  • ಹೆಚ್ಚಿದ ಆರ್ದ್ರತೆ: “ಅಧಿಕ ತೇವಾಂಶವು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ಇದರಿಂದ ಚರ್ಮವು ಒಣಗಲು ಕಷ್ಟವಾಗುತ್ತದೆ. ಇದರಿಂದ ಚರ್ಮದಲ್ಲಿ ಸೋಂಕುಗಳು ಹರಡುತ್ತವೆ.
  • ತೇವಾಂಶ: ಮಳೆಗಾಲದಲ್ಲಿ ಚರ್ಮದ ಮೇಲೆ ತೇವಾಂಶ ಉಳಿಯುವುದರಿಂದ ಕಿರಿಕಿರಿ ಉಂಟಾಗುತ್ತದೆ ಮತ್ತು ಶಿಲೀಂಧ್ರಗಳ ಬೆಳವಣಿಗೆ ಹೆಚ್ಚಬಹುದು.
  • ಬಟ್ಟೆಗಳು: ಸಿಂಥೆಟಿಕ್ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಚರ್ಮದ ವಿರುದ್ಧ ಶಾಖ ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಇದರಿಂದಾಗಿ ದದ್ದುಗಳು, ಶಿಲೀಂಧ್ರ ಸೋಂಕುಗಳು ಕಾಣಿಸಿಕೊಳ್ಳುತ್ತವೆ.
  • ಕಳಪೆ ನೈರ್ಮಲ್ಯ:  ಮಾನ್ಸೂನ್‌ ಸಮಯದಲ್ಲಿಚರ್ಮದ ನೈರ್ಮಲ್ಯವನ್ನು ನಿರ್ಲಕ್ಷಿಸುವುದರಿಂದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು

ಬೆವರುಸಾಲೆ:

ಬೆವರು ಗ್ರಂಥಿಯಿಂದ ಚರ್ಮದ ಮೇಲ್ಮೈಗೆ ಹೋಗುವ ನಾಳವು ಮುಚ್ಚಿಹೋದಾಗ ಬೆವರುಸಾಲೆ ಉಂಟಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮಿಲಿಯೇರಿಯಾ ಎಂದು ಕರೆಯಲಾಗುತ್ತದೆ. ಈ ಅಡಚಣೆಯು ಚರ್ಮದ ಮೇಲ್ಮೈಯಿಂದ ಬೆವರು ಹೊರಹೋಗುವುದನ್ನು ತಡೆಯುತ್ತದೆ, ಇದು ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ.

ಇದನ್ನೂ ಓದಿ
ಬರಿಗಾಲಿನಲ್ಲಿ ನಡೆಯುವುದು vs ಶೂ ಹಾಕಿ ನಡೆಯುವುದು, ಯಾವುದು ಒಳ್ಳೆಯದು?
ರಕ್ತ ಪರಿಚಲನೆ ವ್ಯಾತ್ಯಾಸ ಕಾಣಿಸಿಕೊಂಡರೆ ಮನೆಯಲ್ಲಿ ಹೀಗೆ ಮಾಡಿ
ಜ್ವರ ಬಂದಾಗ ಕಾಫಿ ಕುಡಿಯಬಾರದು ಏಕೆ?
ಚಹಾ ಮಾಡುವಾಗ ಈ ಮೂರು ಹಂತಗಳನ್ನು ಅನುಸರಿಸಿ

ಬೆವರುಸಾಲೆ ಲಕ್ಷಣ ಹೇಗಿರುತ್ತವೆ?

  • ಕೆಂಪು ಗುಳ್ಳೆಗಳು: ಇವು ಸಾಮಾನ್ಯವಾಗಿ ಚರ್ಮದ ಮೇಲ್ಮೈಯಲ್ಲಿ ಕಾಣಿಸಿಕೊಳ್ಳುತ್ತವೆ.
  • ಸುಡುವ ಸಂವೇದನೆ: ಪೀಡಿತ ಪ್ರದೇಶಗಳಲ್ಲಿ ತುರಿಕೆ ಅಥವಾ ನೋವು ಉಂಟಾಗಬಹುದು.
  • ಬೆವರುಸಾಲೆ ಉಂಟಾಗುವ ಸ್ಥಳ: ಬೆವರುಸಾಲೆ ಅಥವಾ ದದ್ದುಗಳು ಸಾಮಾನ್ಯವಾಗಿ ಬೆನ್ನು, ತೋಳುಗಳು, ಕುತ್ತಿಗೆ ಮತ್ತು ಸ್ತನಗಳ ಕೆಳಭಾಗದಲ್ಲಿ ಉಂಟಾಗುತ್ತದೆ.

ಬೆವರುಸಾಲೆಯನ್ನು ಹೋಗಲಾಡಿಸುವುದು ಹೇಗೆ?

ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಸ್ವ-ಆರೈಕೆ ಮತ್ತು ನೈರ್ಮಲ್ಯ ಪಾಲನೆಯಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಬೆವರುಸಾಲೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಪಡೆದುಕೊಳ್ಳಬಹುದು.

ಶಿಲೀಂಧ್ರ ಸೋಂಕುಗಳು?

ಶಿಲೀಂಧ್ರ ಸೋಂಕುಗಳು ಶಿಲೀಂಧ್ರಗಳ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಮುಖ್ಯವಾಗಿ ಕ್ಯಾಂಡಿಡಾ ಅಥವಾ ಡರ್ಮಟೊಫೈಟ್‌ನಂತಹ ಶಿಲೀಂಧ್ರಗಳು. ಈ ಶಿಲೀಂಧ್ರಗಳು ಬೆಚ್ಚಗಿನ, ತೇವಾಂಶವುಳ್ಳ ವಾತಾವರಣದಲ್ಲಿ ಬೆಳೆಯುತ್ತವೆ ಮತ್ತು ಇವುಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ಹೆಚ್ಚಿರುತ್ತದೆ.

ಶಿಲೀಂಧ್ರ ಸೋಂಕಿನ ಲಕ್ಷಣಗಳು:

  • ಕೆಂಪು ಗುಳ್ಳೆಗಳು, ವೃತ್ತಾಕಾರದ ತೇಪೆಗಳು, ತೀವ್ರ ತುರಿಕೆ

ಶಿಲೀಂಧ್ರ ಸೋಂಕಿಗೆ ಪರಿಹಾರ:

ಸರಿಯಾದ ಚಿಕಿತ್ಸೆ ನೀಡದಿದ್ದರೆ ಶಿಲೀಂಧ್ರ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ, ಕ್ರೀಮ್‌, ಮನೆಮದ್ದುಗಳಂತಹ ಶಿಲೀಂಧ್ರನಾಶಕ ಔಷಧಿಗಳನ್ನು ಬಳಸಿ, ನೈರ್ಮ್ಯವನ್ನು ಕಾಪಾಡಿಕೊಳ್ಳಿ.

ಇದನ್ನೂ ಓದಿ: ಬರಿಗಾಲಿನಲ್ಲಿ ನಡೆಯುವುದು vs ಶೂ ಹಾಕಿ ನಡೆಯುವುದು, ಯಾವುದು ಒಳ್ಳೆಯದು?

ಮಳೆಗಾಲದಲ್ಲಿ ಚರ್ಮದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?

  • ಚರ್ಮವನ್ನು ಒಣಗಲು ಬಿಡಿ: ದೀರ್ಘಕಾಲದ ತೇವಾಂಶವನ್ನು ಕಡಿಮೆ ಮಾಡಲು ಬೆವರಿದ ಬಳಿಕ ಅಥವಾ ಮಳೆನೀರಿನಿಂದ ಬಟ್ಟೆ ಒದ್ದೆಯಾದರೆ ತಕ್ಷಣ ಬಟ್ಟೆ ಬದಲಾಯಿಸಿ, ಮೈ ಒಣಗಿಸಿಕೊಳ್ಳಿ.
  • ಸಡಿಲ ಬಟ್ಟೆಗಳನ್ನು ಧರಿಸಿ:  ಚರ್ಮವನ್ನು ಉಸಿರಾಡಲು ಅನುವು ಮಾಡಿಕೊಡುವ ಮತ್ತು ತೇವಾಂಶದ ಧಾರಣವನ್ನು ಕಡಿಮೆ ಮಾಡುವ ಸಡಿಲವಾದ ಹತ್ತಿ ಅಥವಾ ಲಿನಿನ್ ಬಟ್ಟೆಗಳನ್ನು ಧರಿಸಿ.
  • ಸ್ಟೀರಾಯ್ಡ್ ಆಧಾರಿತ ಕ್ರೀಮ್‌ಗಳನ್ನು ತಪ್ಪಿಸಿ: ಈ ಕ್ರೀಮ್‌ಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದಾದರೂ, ಅವು ಕಾಲಾನಂತರದಲ್ಲಿ ಶಿಲೀಂಧ್ರಗಳ ಸೋಂಕನ್ನು ಇನ್ನಷ್ಟು ಹದಗೆಡಿಸಬಹುದು.
  • ಚರ್ಮರೋಗ ತಜ್ಞರನ್ನು ಸಂಪರ್ಕಿಸಿ: ರೋಗಲಕ್ಷಣಗಳು ಮುಂದುವರಿದರೆ ಅಥವಾ ಹದಗೆಟ್ಟರೆ ವೃತ್ತಿಪರ ಸಲಹೆ ಪಡೆಯುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 am, Tue, 9 September 25