ಟೈಪ್-2 ಮಧುಮೇಹವನ್ನು ಕಡಿಮೆ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ

| Updated By: ನಯನಾ ರಾಜೀವ್

Updated on: Jun 03, 2022 | 1:22 PM

Type-2 Diabetes: ನೀವು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂಡ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಲೇಬೇಕು. ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ

ಟೈಪ್-2 ಮಧುಮೇಹವನ್ನು ಕಡಿಮೆ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ
ಮಧುಮೇಹ
Follow us on

ನೀವು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂಡ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಲೇಬೇಕು. ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊಬ್ಬು ಮತ್ತು ನಾರಿನಾಂಶವು ಇರುವಂತಹ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಇದರಿಂದ ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಆಗುವುದು ಮತ್ತು ಪದೇ ಪದೇ ಅನಾರೋಗ್ಯಕಾರಿ ಆಹಾರ ಸೇವನೆ ಕಡಿಮೆ ಆಗುವುದು.

ಮಧುಮೇಹಿಗಳು ತಿನ್ನಬೇಕಾದ ಆಹಾರಗಳು
-ಬೀಜಗಳು-ಚಿಯಾ ಬೀಜಗಳು, ಕುಂಬಳಕಾಯಿ ಬೀಜ ಮತ್ತು ಅಗಸೆ ಬೀಜ

-ಪ್ರೋಟೀನ್ ಅಧಿಕವಾಗಿರುವ ಆಹಾರಗಳು-ಮೊಟ್ಟೆ, ಮೀನು ಮತ್ತು ಕೋಳಿ

-ಹೃದಯಕ್ಕೆ ಆರೋಗ್ಯಕಾರಿ ಕೊಬ್ಬು-ಆಲಿವ್ ತೈಲ ಮತ್ತು ಎಳ್ಳೆಣ್ಣೆ

-ಹಣ್ಣುಗಳು-ಸೇಬು, ಕಿತ್ತಳೆ, ಕಲ್ಲಂಗಡಿ, ಪಿಯರ್ಸ್, ಪೀಚ್

-ತರಕಾರಿಗಳು-ಬ್ರಾಕೋಲಿ, ಹೂಗೋಸು, ಬಸಳೆ, ಸೌತೆಕಾಯಿ, ಹಾಗಲಕಾಯಿ

-ಇಡೀ ಧಾನ್ಯಗಳು-ಓಟ್ಸ್, ಕಂದು ಅಕ್ಕಿ ಮತ್ತು ರಾಗಿ

-ದ್ವಿದಳ ಧಾನ್ಯಗಳು-ಬೀನ್ಸ್ ಮತ್ತು ಮಸೂರ

-ಒಣ ಹಣ್ಣುಗಳು-ಬಾದಾಮಿ, ಅಕ್ರೋಟ, ಪಿಸ್ತಾ

​ಟೈಪ್-2 ಮಧುಮೇಹಿಗಳು ಈ ಆಹಾರಗಳನ್ನು ಸೇವಿಸುವುದು ಬೇಡ

ಮಧುಮೇಹಿಗಳು ಹೇಗೆ ಮೇಲೆ ಹೇಳಿರುವ ಆಹಾರಗಳನ್ನು ಸೇವನೆ ಮಾಡಬೇಕೋ, ಅದೇ ರೀತಿಯಲ್ಲಿ ಕೆಲವು ಆಹಾರಗಳನ್ನು ಕಡೆಗಣಿಸಬೇಕು. ಮುಖ್ಯವಾಗಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಾಗಿ ಇರುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಕೆ ಮಾಡುವುದು. ಈ ಕೆಳಗಿನ ಆಹಾರಗಳನ್ನು ಕಡೆಗಣಿಸಬೇಕು.

-ಸಿಹಿ-ಕ್ಯಾಂಡಿ, ಕುಕ್ಕೀಸ್, ಐಸ್ ಕ್ರೀಮ್ ಮತ್ತು ಸಿಹಿ ತಿಂಡಿಗಳು

-ಸಿಹಿಯುಕ್ತ ಪಾನೀಯಗಳು- ಪ್ಯಾಕ್ ಮಾಡಲ್ಪಟ್ಟ ಜ್ಯುಸ್, ತಂಪು ಪಾನೀಯಗಳು ಮತ್ತು ಶಕ್ತಿ ಪೇಯಗಳು

-ಸಿಹಿಕಾರಕಗಳು- ಬಿಳಿ ಸಕ್ಕರೆ, ಕಂದು ಸಕ್ಕರೆ, ಜೇನುತುಪ್ಪ ಮತ್ತು ಮಪ್ಲೆ ಸಕ್ಕರೆ

-ಸಂಸ್ಕರಿಸಿದ ಆಹಾರಗಳು- ಚಿಪ್ಸ್, ಮೈಕ್ರೋವೇವ್ ಪಾಪ್ ಕಾರ್ನ್, ಸಂಸ್ಕರಿಸಿದ ಮಾಂಸ.

-ಕೊಬ್ಬಿರುವ ಮಾಂಸ-ಕುರಿ ಮಾಂಸ, ಕೋಳಿ ಚರ್ಮ ಮತ್ತು ಕಡು ಬಣ್ಣದ ಕೋಳಿಯನ್ನು ಕಡೆಗಣಿಸಬೇಕು.

-ಸಂಪೂರ್ಣ ಕೊಬ್ಬಿರುವ ಹಾಲಿನ ಉತ್ಪನ್ನಗಳು-ಹಾಲು, ಬೆಣ್ಣೆ ಮತ್ತು ಚೀಸ್

​ಮಧುಮೇಹಿಗಳ ಆಹಾರ ಕ್ರಮ ಹೇಗಿರಬೇಕು
ಮುಖ್ಯವಾಗಿ ಹಣ್ಣುಗಳು, ತರಕಾರಿಗಳು, ಒಣ ದ್ವಿದಳ ಧಾನ್ಯಗಳು, ಇಡೀ ಧಾನ್ಯಗಳು, ಬೀಜಗಳು, ಒಣ ಹಣ್ಣುಗಳು ಮತ್ತು ಆಲಿವ್ ತೈಲವನ್ನು ಸೇರ್ಪಡೆ ಮಾಡಬೇಕು.​ಹಾಲಿನ ಉತ್ಪನ್ನ ಹಾಗೂ ನಾನ್ ವೆಜ್ ಸೇವಿಸಿ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಮೆಡಿಟೇರಿಯನ್ ಆಹಾರವು ಅತೀ ಉತ್ತಮ. ಸಸ್ಯಜನ್ಯವಾದ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು.

ವ್ಯಾಯಾಮ ಮಾಡಿ: ನಿತ್ಯ ವ್ಯಾಯಾಮ ಮಾಡಿ ಇದು ನಿಮ್ಮ ಮಾನಸಿಕ ಒತ್ತಡವನ್ನು ಕುಗ್ಗಿಸಿ ನಿಮ್ಮ ಮೂಳೆಯನ್ನು ಮತ್ತಷ್ಟು ಬಲ ಪಡಿಸುತ್ತದೆ. ಸ್ವಿಮ್ಮಿಂಗ್, ಸೈಕ್ಲಿಂಗ್, ವಾಕಿಂಗ್ ಮಾಡಿ.

ಕಾಫಿ, ಟೀ ಸೇವನೆ ಕಡಿಮೆ ಮಾಡಿ: ಕಾಫಿ, ಟೀ ಸೇವನೆ ಮಾಡುವುದು ರಕ್ತದಲ್ಲಿ ಸಕ್ಕರೆ ಅಂಶದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕಾಫಿ, ಕೋಲಾಗಳು, ಮದ್ಯಪಾನ ಇವುಗಳು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಹೀಗಾಗಿ ಕಾಫಿ, ಟೀ, ಸೇವನೆ ಕಡಿಮೆ ಮಾಡಿ.

ಈ ಮೇಲಿನ ಮಾಹಿತಿಯನ್ನು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ