Piles: ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆಯೇ? ಗುಣಪಡಿಸಲು ಸುಲಭ ವಿಧಾನ ಇಲ್ಲಿದೆ

| Updated By: ನಯನಾ ರಾಜೀವ್

Updated on: Jul 06, 2022 | 4:31 PM

ಮೂಲವ್ಯಾಧಿ (Piles) ನಿಮ್ಮನ್ನು ಕಾಡುತ್ತಿದೆಯೇ?, ಒಂದೆಡೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆಯೇ, ನೋವು, ತುರಿಕೆಯಾಗುತ್ತಿದೆಯೇ ಅವುಗಳನ್ನು ಹೋಗಲಾಡಿಸಲು ಸುಲಭ ಉಪಾಯ ಇಲ್ಲಿದೆ. ಜೀವನಶೈಲಿ ಬದಲಾವಣೆಯಿಂದಾಗಿ ಮೂಲವ್ಯಾಧಿ ಸಮಸ್ಯೆ ಕಾಡುತ್ತದೆ, ತುಂಬಾ ದಿನಗಳಿಂದ ಮಲಬದ್ಧತೆ ಸಮಸ್ಯೆಯಾಗಿದ್ದರೆ ಅದು ಕ್ರಮೇಣವಾಗಿ ಮೂಲವ್ಯಾಧಿಗೆ ತಿರುಗುತ್ತದೆ.

Piles: ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆಯೇ? ಗುಣಪಡಿಸಲು ಸುಲಭ ವಿಧಾನ ಇಲ್ಲಿದೆ
Piles
Follow us on

ಮೂಲವ್ಯಾಧಿ (Piles) ನಿಮ್ಮನ್ನು ಕಾಡುತ್ತಿದೆಯೇ?, ಒಂದೆಡೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆಯೇ, ನೋವು, ತುರಿಕೆಯಾಗುತ್ತಿದೆಯೇ ಅವುಗಳನ್ನು ಹೋಗಲಾಡಿಸಲು ಸುಲಭ ಉಪಾಯ ಇಲ್ಲಿದೆ. ಜೀವನಶೈಲಿ ಬದಲಾವಣೆಯಿಂದಾಗಿ ಮೂಲವ್ಯಾಧಿ ಸಮಸ್ಯೆ ಕಾಡುತ್ತದೆ, ತುಂಬಾ ದಿನಗಳಿಂದ ಮಲಬದ್ಧತೆ ಸಮಸ್ಯೆಯಾಗಿದ್ದರೆ ಅದು ಕ್ರಮೇಣವಾಗಿ ಮೂಲವ್ಯಾಧಿಗೆ ತಿರುಗುತ್ತದೆ.

ದೇಹದಲ್ಲಿ ಯಾವ ಕಾಯಿಲೆ ಬಂದರೂ ಆದರೆ ಮೂಲವ್ಯಾಧಿ ಸಂಕಷ್ಟ ಮಾತ್ರ ತುಂಬಾ ಘೋರ. ಮುಖ್ಯವಾಗಿ ನಮ್ಮ ದೈನಂದಿನ ಸಮಸ್ಯೆಗೆ ಅನಾನುಕೂಲತೆ ಉಂಟು ಮಾಡಿ, ತುಂಬಾ ತೊಂದರೆ ಅನುಭವಿಸುವಂತೆ ಮಾಡುತ್ತದೆ. ತಜ್ಞರ ಪ್ರಕಾರ ಯಾರಲ್ಲಿ ಸುದೀರ್ಘವಾಗಿ ಮಲಬದ್ಧತೆಯ ಸಮಸ್ಯೆ ಇರುತ್ತದೆಯೋ ಅಂತವರಿಗೆ ಮೂಲವ್ಯಾಧಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿಗಿರುತ್ತದೆ.

ನಾರಿನಂಶವಿರುವ ಪದಾರ್ಥಗಳ ಸೇವನೆ ಮಾಡಿ
ನಾರಿನಂಶವಿರುವ ಪದಾರ್ಥ ಸೇವನೆ ಮಾಡದಿದ್ದರೆ ಮಲಬದ್ಧತೆ ಉಂಟಾಗುತ್ತದೆ. ಹಸಿರು ಸೊಪ್ಪು, ತರಕಾರಿ, ಹಣ್ಣನ್ನು ತಮ್ಮ ಆಹಾರ ಪದ್ಧತಿಯಲ್ಲಿ ರೂಢಿಸಿಕೊಳ್ಳದೇ ಹೋದಾಗ ಮೂಲವ್ಯಾಧಿ ಹೆಚ್ಚಾಗಿ ಬಾಧಿಸುತ್ತದೆ. ಇನ್ನು ಮದ್ಯಪಾನ, ಧೂಮಪಾನ ಮಾಡುವವರಲ್ಲಿ, ಅನುವಂಶೀಯತೆಯೂ ಮೂಲವ್ಯಾಧಿಗೆ ಮುಖ್ಯ ಕಾರಣ.

ಮೂಲವ್ಯಾಧಿ ಲಕ್ಷಣಗಳೇನು?
ಮೂಲವ್ಯಾಧಿ ದೀರ್ಘಕಾಲದವರೆಗೆ ಕಾಡುವ ಮಲಬದ್ಧತೆಯಿಂದ ಬೇಗ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ. ಮಲ ವಿಸರ್ಜನೆ ವೇಳೆ ರಕ್ತ ಸೋರುವುದು, ಗುದದ್ವಾರದಲ್ಲಿ ಕೆರೆತ, ಉರಿಯಿದ್ದರೆ ಇದ್ದರೆ ಅದನ್ನು ಮೂಲವ್ಯಾಧಿ ಎನ್ನಬಹುದು.

ಮೂಲವ್ಯಾಧಿಯನ್ನು ಗುಣಪಡಿಸುವುದು ಹೇಗೆ?
ನೀರು ಕುಡಿಯುವುದು: ಹೆಚ್ಚು ನೀರು ಕುಡಿಯಬೇಕು, ದಿನಕ್ಕೆ 8-10 ಗ್ಲಾಸ್ ನೀರು ದೇಹಕ್ಕೆ ಬೇಕು, ದೇಹವನ್ನು ಹೈಡ್ರೇಟ್​ ಆಗಿರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಬೆಚ್ಚನೆಯ ನೀರಿನ ಸ್ನಾನ: ಕೆಲವರಿಗೆ ನಿತ್ಯ ತಣ್ಣೀರು ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಆದರೆ ಮೂಲವ್ಯಾಧಿ ಇರುವವರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಬೇಕು. ಸ್ವಲ್ಪ ಹೊತ್ತು ಪ್ಲಾಸ್ಟಿಕ್​ ಟಬ್​ನಲ್ಲಿ ಸ್ವಲ್ಪ ಬೆಚ್ಚನೆಯ ನೀರು ಹಾಕಿ ಕುಳಿತುಕೊಳ್ಳಬೇಕು.
-ಟಾಯ್ಲೆಟ್​ನಲ್ಲಿ ತುಂಬಾ ಸಮಯದವರೆಗೆ ಕೂರಬೇಡಿ: ಟಾಯ್ಲೆಟ್​ನಲ್ಲಿ ತುಂಬಾ ಸಮಯದವರೆಗೆ ಕೂರಬೇಡಿ.

– ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ತುಳಸಿ ಎಲೆಗಳ ಸೇವನೆಯಿಂದ ಮೂಲವ್ಯಾಧಿ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

– ಜೇನುತುಪ್ಪ ಹಾಗೂ ಈರುಳ್ಳಿ ಕೂಡ ಮೂಲವ್ಯಾಧಿ ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಈರುಳ್ಳಿಯ ರಸದ ಜತೆಗೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ, ದಿನವೂ ಎರಡು ಬಾರಿ ಸೇವಿಸಿದರೆ ಪೈಲ್ಸ್ ನೋವು, ರಕ್ತಸ್ರಾವ ಬೇಗ ಗುಣವಾಗುತ್ತದೆ.