ಪೈಲ್ಸ್ ಅಥವಾ ಫಿಸ್ಟುಲಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು, ಉಪಚಾರ

ಪೈಲ್ಸ್ ಅಥವಾ ಫಿಸ್ಟುಲಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು, ಉಪಚಾರ
ಮೂಲವ್ಯಾಧಿ ಅಂದರೆ ಪೈಲ್ಸ್ ಅಥವಾ ಫಿಸ್ಟೂಲಾ ಸಮಸ್ಯೆ ಇರುವವರು ಪಡುವ ಪಾಡು ಅಷ್ಟಿಷ್ಟಲ್ಲ.

Piles, Fissures, Fistula: ಮೂಲವ್ಯಾಧಿ ಅಂದರೆ ಪೈಲ್ಸ್ ಅಥವಾ ಫಿಸ್ಟೂಲಾ ಸಮಸ್ಯೆ ಇರುವವರು ಪಡುವ ಪಾಡು ಅಷ್ಟಿಷ್ಟಲ್ಲ. ಅವರು ಇದಕ್ಕೆ ಆಪರೇಶನ್ ಮಾಡಿಸಿಕೊಂಡರೆ ಕಾಯಂ ಆಗಿ ವಾಸಿಯಾಗುತ್ತದೆ ಎನ್ನುವ ಹಾಗಿಲ್ಲ. ಆಪರೇಶನ್ ಮಾಡಿಸಿಕೊಂಡವರೂ ತುಂಬಾನೇ ಬಾಧೆ ಪಡುತ್ತಿರುತ್ತಾರೆ.

TV9kannada Web Team

| Edited By: sadhu srinath

Jun 24, 2022 | 6:06 AM

ಮೂಲವ್ಯಾಧಿ ಅಂದರೆ ಪೈಲ್ಸ್ ಅಥವಾ ಫಿಸ್ಟೂಲಾ ಸಮಸ್ಯೆ ಇರುವವರು (Piles, Fissures, Fistula) ಪಡುವ ಪಾಡು ಅಷ್ಟಿಷ್ಟಲ್ಲ. ಅವರು ಇದಕ್ಕೆ ಆಪರೇಶನ್ ಮಾಡಿಸಿಕೊಂಡರೆ ಕಾಯಂ ಆಗಿ ವಾಸಿಯಾಗುತ್ತದೆ ಎನ್ನುವ ಹಾಗಿಲ್ಲ. ಆಪರೇಶನ್ ಮಾಡಿಸಿಕೊಂಡವರೂ ತುಂಬಾನೇ ಬಾಧೆ ಪಡುತ್ತಿರುತ್ತಾರೆ. ಮೂಲವ್ಯಾಧಿ ಕಾಯಿದೆಯಿಂದ ಬಳಲುತ್ತಿರುವವರಿಗೆ ಮಲ ವಿಸರ್ಜನೆಗೆ ಹೋಗುವುದೆಂದರೆ ಬಹು ದೊಡ್ಡ ನೋವಿನ ಸಂಗತಿ. ಹಾಗಂತ ಹೋಗದೆ ಇದ್ದರೆ ಮತ್ತಷ್ಟು ಆಪತ್ತು ತಂದೊಡ್ಡುತ್ತದೆ. ಅವರಿಗೆ ಕೂತು ಕೊಳ್ಳವುದಕ್ಕೂ ಆಗುವುದಿಲ್ಲ. ನಿಂತು ಕೊಳ್ಳಲು ಕೂಡ ಕಷ್ಟ ಕಷ್ಟ. ಮೂಲವ್ಯಾಧಿ ಸಮಸ್ಯೆ ಇರುವವರು ಪಡುವ ಪಾಡು ಅಷ್ಟಿಷ್ಟಲ್ಲ.

ಸಾಮಾನ್ಯವಾಗಿ ಮೂಲವ್ಯಾಧಿ ಅಂದರೆ ಪೈಲ್ಸ್ ಕಾಯಿಲೆ ಬಂದರೆ ಸಾಕು ಅಂತಹವರು ಊಹಿಸಿ ಕೊಳ್ಳಲೂ ಆಗದೇ ಇರುವಷ್ಟು ನೋವು ಅನುಭವಸಿತ್ತಿರುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿ ಬೇರೆ ಬೇರೆ ಬಗೆಯಲ್ಲಿ ಕಂಡು ಬರುತ್ತದೆ. ಕೆಲವರಿಗೆ ಗುದದ್ವಾರದಲ್ಲಿ ಸ್ವಲ್ಪ ಹೊರಗಡೆ ಭಾಗದಲ್ಲಿ ಪೈಲ್ಸ್ ಉಂಟಾದರೆ, ಇನ್ನು ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ ಅಂದರೆ ಫಿಸ್ಟುಲಾ, ಫಿಷರ್ಸ್ (ಬಿರುಕುಗಳು) ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಬಹು ಮುಖ್ಯ ಕಾರಣವೆಂದರೆ ಮಲಬದ್ಧತೆ. ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡು ಬರುತ್ತದೆ. ವ್ಯಾಯಾಮ ಮತ್ತು ದೈಹಿಕ ಚಟುವಿಕೆಗಳಲ್ಲಿ ತೊಡಗದೆ ಇರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ತಜ್ಞರು ಹೇಳುವ ಪ್ರಕಾರ ಕೆಲವು ವ್ಯಾಯಾಮ ಮತ್ತು ಮನೆಮದ್ದುಗಳನ್ನು ಬಳಕೆ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬಹುದು.

ಹಾಗಾದ್ರೆ ಆ ಮನೆಮದ್ದುಗಳು ಯಾವುವು ನೋಡೋಣ. ಈ ಲೇಖನದಲ್ಲಿ ಅದರ ಬಗ್ಗೆಯೇ ಚರ್ಚೆ ಮಾಡೋಣ. ಈ ಮನೆಮದ್ದು ತಯಾರಿಗೆ ಬೇಕಾದ ಸಾಮಗ್ರಿ ಎಂದರೆ ಮೆಹಂದಿ ಎಲೆಗಳು ಮತ್ತು ನೆಲ್ಲಿಕಾಯಿ ಪುಡಿ. 25ರಿಂದ 30 ಮೆಹಂದಿ ಎಲೆಗಳನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತ್ರ ಒಂದು ಚಮಚದಷ್ಟು ನೆಲ್ಲಿಕಾಯಿ ಪುಡಿಯನ್ನು ಹಾಕಿ. ಅದರ ಜೊತೆಗೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರಾತ್ರಿ ಇದನ್ನು ಕಲಸಿ ರಾತ್ರಿ ಪೂರ್ತಿ ನೆನೆಸಿಡಿ.

ಮರು ದಿನ ಬೆಳಿಗ್ಗೆ ಈ ನೀರನ್ನು ಮತ್ತೆ ಕಲಿಸಿಕೊಂಡು ಒಂದು ಲೋಟದಲ್ಲಿ ಶೋಧಿಸಿ ಕೊಂಡು ಖಾಲಿ ಹೊಟ್ಟೆಯಲ್ಲಿ ಬ್ರಷ್ ಮಾಡಿದ ನಂತರ ಕುಡಿಯಬೇಕು. ಈ ರೀತಿ ಎರಡು ವಾರ ಮಾಡಿದರೆ ಪೈಲ್ಸ್ ಸಮಸ್ಯೆ ನಿವಾರಣೆ ಆಗುತ್ತದೆ. ಲೋಳೆ ರಸದ ತಿರುಳನ್ನು ಒಂದು ಚಮಚದಷ್ಟು ಮೂರು ಬಾರಿ ದಿನದಲ್ಲಿ ಸೇವಿಸಿ. ಇದರಿಂದ ಮೂಲವ್ಯಾಧಿ ಗುಣವಾಗುವುದು. ಮುಟ್ಟಿದರೆ ಮುನಿ ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ, ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.

ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತಿ ರಾತ್ರಿ ಹೊತ್ತು ನೆನೆಸಿಟ್ಟು ಬೆಳಿಗ್ಗೆ ಹಾಲಿನ ಸಮೇತ ತಿನ್ನಬೇಕು. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಮೊದಲ ಅನ್ನದೊಂದಿಗೆ ಸೇವಿಸಬೇಕು. ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. ಈ ಮನೆಮದ್ದುಗಳು ಕೇವಲ ಪೈಲ್ಸ್ ಅಥವಾ ಫಿಸ್ಟೂಲಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಮಾತ್ರವಲ್ಲದೆ ದೇಹದಲ್ಲಿ ಇನ್ಸುಲಿನ್ ಕಣಗಳ ಉತ್ಪತ್ತಿಗೂ ನೆರವಾಗುತ್ತದೆ. ಜೊತೆಗೆ ಶುಗರ್ ಕಾಯಿಲೆ ಇರುವವರು ನಿತ್ಯವೂ ಒಂದು ಲೋಟ ಕುಡಿಯುವುದರಿಂದ ಶುಗರ್ ಕಡಿಮೆ ಆಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು. ಬಿಪಿ ಕಡಿಮೆ ಮಾಡಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಸ್ತು ಆಯಾಸ ನಿರ್ಜಲೀಕರಣ ಸಮಸ್ಯೆಗಳು ಈ ಒಂದು ಡ್ರಿಂಕ್ ನಿಂದ ಹೋಗಲಾಡಿಸಬಹುದು.

Follow us on

Related Stories

Most Read Stories

Click on your DTH Provider to Add TV9 Kannada