Ragi Face Pack: ಮುಖದ ಅಂದ ಹೆಚ್ಚಿಸಲು ರಾಗಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 17, 2025 | 5:42 PM

ಪೌಷ್ಟಿಕಾಂಶ ಸಮೃದ್ಧವಾಗಿರುವ ರಾಗಿ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಇದು ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗುವ ನೈಸರ್ಗಿಕ ಫೇಸ್ ಪ್ಯಾಕ್ ಆಗಿದೆ. ನಮ್ಮ ಮುಖದಲ್ಲಿ ಕಂಡು ಬರುವಂತಹ ಕಪ್ಪು ಕಲೆಗಳು, ಮೊಡವೆ, ಸುಕ್ಕುಗಳಂತಹ ಸಮಸ್ಯೆಗಳಿಂದ ಮುಕ್ತಿ ಸಿಗಲು ರಾಗಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಬಹುದು. ಹಾಗಾದರೆ ಈ ನೈಸರ್ಗಿಕ ಫೇಸ್ ಪ್ಯಾಕ್ ಮನೆಯಲ್ಲಿ ತಯಾರಿಸುವುದು ಹೇಗೆ ತಿಳಿದುಕೊಳ್ಳಿ.

Ragi Face Pack: ಮುಖದ ಅಂದ ಹೆಚ್ಚಿಸಲು ರಾಗಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ರಾಗಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಈ ಧಾನ್ಯವನ್ನು ಆಹಾರಗಳಲ್ಲಿ ಬಳಕೆ ಮಾಡುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಬಹಳ ಉಪಯುಕ್ತ ಆಹಾರವಾಗಿದೆ. ಆದರೆ ಪೌಷ್ಟಿಕಾಂಶ ಸಮೃದ್ಧವಾಗಿರುವ ಈ ಧಾನ್ಯ ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಇದು ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗುವ ನೈಸರ್ಗಿಕ ಫೇಸ್ ಪ್ಯಾಕ್ ಆಗಿದೆ. ನಮ್ಮ ಮುಖದಲ್ಲಿ ಕಂಡು ಬರುವಂತಹ ಕಪ್ಪು ಕಲೆಗಳು, ಮೊಡವೆ, ಸುಕ್ಕುಗಳಂತಹ ಸಮಸ್ಯೆಗಳಿಂದ ಮುಕ್ತಿ ಸಿಗಲು ರಾಗಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಬಹುದು. ಹಾಗಾದರೆ ಈ ನೈಸರ್ಗಿಕ ಫೇಸ್ ಪ್ಯಾಕ್ ಮನೆಯಲ್ಲಿ ತಯಾರಿಸುವುದು ಹೇಗೆ ತಿಳಿದುಕೊಳ್ಳಿ.

ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಗ್ರಿಗಳು

ರಾಗಿ ಪುಡಿ : 2 ಚಮಚ

ಮೊಸರು : 1 ಚಮಚ

ಜೇನುತುಪ್ಪ : 1 ಚಮಚ

ನಿಂಬೆ ರಸ : 1 ಚಮಚ

ಮಾಡುವ ವಿಧಾನ:

ಒಂದು ಚಿಕ್ಕ ಬುಟ್ಟಿ ಅಥವಾ ಬೌಲ್ ನಲ್ಲಿ 2 ದೊಡ್ಡ ಚಮಚ ರಾಗಿ ಪುಡಿಗೆ 1 ಟೇಬಲ್ ಚಮಚ ಮೊಸರಿನೊಂದಿಗೆ ಬೆರೆಸಿ. ಇದಕ್ಕೆ 1 ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿ. ಅರ್ಧ ನಿಂಬೆ ರಸವನ್ನು ಹಿಂಡಿ ಬಳಿಕ ಈ ಮಿಶ್ರಣ ಚೆನ್ನಾಗಿ ಬೆರೆಯುವಂತೆ ನೋಡಿಕೊಳ್ಳಿ. ಏಕೆಂದರೆ ಪೇಸ್ಟ್ ಮೃದುವಾಗಲು ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣವಾಗಬೇಕು. ಫೇಸ್ ಪ್ಯಾಕ್ ಹಚ್ಚುವ ಮೊದಲು, ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಯಾವುದೇ ರೀತಿಯ ಮೇಕಪ್ ಅಂಶ ಇಲ್ಲದಂತೆ ನೋಡಿಕೊಳ್ಳಿ. ಸ್ವಚ್ಛವಾದ ಕೈಗಳಿಂದ ರಾಗಿ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ.

ಫೇಸ್ ಪ್ಯಾಕ್ ಅನ್ನು ಸುಮಾರು 15- 20 ನಿಮಿಷಗಳ ಕಾಲ ಒಣಗಲು ಬಿಡಿ. ಮುಖ ಸ್ವಲ್ಪ ಬಿಗಿಯಾಗಲು ಆರಂಭವಾಗುತ್ತದೆ. ಬಳಿಕ ಆ ಫೇಸ್ ಪ್ಯಾಕ್ ಒಣಗಿದ ನಂತರ, ಮುಖವನ್ನು ವೃತ್ತಾಕಾರದ ಚಲನೆಯಲ್ಲಿ ನೀರು ಹಾಕಿಕೊಂಡು ಮಸಾಜ್ ಮಾಡಿ. ನಂತರ ಸ್ವಲ್ಪ ಬೆಚ್ಚಗಿನ ನೀರಿನಿಂದ ಪ್ಯಾಕ್ ಅನ್ನು ಚೆನ್ನಾಗಿ ತೊಳೆಯಿರಿ. ನಿಮ್ಮ ಚರ್ಮ ಹೈಡ್ರೇಟ್ ಆಗಿಡಲು ಮುಖ ಒರೆಸಿಕೊಂಡ ಮೇಲೆ ನೀವು ಯಾವಾಗಲೂ ಬಳಸುವ ಮಾಯಿಶ್ಚರೈಸರ್ ಬಳಸಿ. ಅಲರ್ಜಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಫೇಸ್ ಪ್ಯಾಕ್ ಹಾಕಿಕೊಳ್ಳುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬಹುದು.

ಇದನ್ನೂ ಓದಿ: ದಿನಕ್ಕೆ ಎಷ್ಟು ಹಸಿ ಮೆಣಸಿನಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು?

ರಾಗಿ ಪುಡಿ ನಿಮ್ಮ ಚರ್ಮದ ಮೇಲೆ ಮೃದುವಾದ ಎಕ್ಸ್ಫೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ರಂಧ್ರಗಳನ್ನು ತೆರೆಯುತ್ತದೆ. ಮೊಸರು ಮತ್ತು ಜೇನುತುಪ್ಪವು ಜಲಸಂಚಯನವನ್ನು ಒದಗಿಸುತ್ತದೆ, ಇದು ಚರ್ಮವನ್ನು ಮೃದುಗೊಳಿಸುತ್ತದೆ. ನಿಂಬೆ ರಸವು ಚರ್ಮಕ್ಕೆ ಹೊಳಪನ್ನು ನೀಡುತ್ತದೆ ಮತ್ತು ಕಪ್ಪು ಕಲೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ