ನೀವು ಅಡುಗೆ ಮಾಡುವ ವಿಧಾನ ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಹುದು ಹುಷಾರ್
ಈಗಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಪ್ರೆಶರ್ ಕುಕ್ಕರ್ ಗಳನ್ನು ಬಳಸಿ ಅಡುಗೆ ಮಾಡಿಯೇ ಮಾಡುತ್ತಾರೆ. ಏಕೆಂದರೆ ಕುಕ್ಕರ್ ಎಲ್ಲರ ಅಚ್ಚುಮೆಚ್ಚಿನ ಪಾತ್ರೆಯಾಗಿದ್ದು ಅಡುಗೆಯನ್ನು ಸುಲಭಗೊಳಿಸುತ್ತದೆ. ಆದರೆ ಪ್ರೆಶರ್ ಕುಕ್ಕರ್ ನಲ್ಲಿ ಆಹಾರ ಬೇಯಿಸುವುದು ಎಷ್ಟು ಒಳ್ಳೆಯದು? ಇದರಿಂದ ಆರೋಗ್ಯಕ್ಕೆ ಪ್ರಯೋಜನವಿದೆಯೇ? ಎಂಬುದರ ಬಗ್ಗೆ ನಾವು ಯಾರೂ ಯೋಚಿಸುವುದಿಲ್ಲ. ಆದರೆ ದಿನನಿತ್ಯ ನಾವು ಅರಿತೋ ಅರಿಯದೆಯೋ ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಹಾಗಾದರೆ ಅಡುಗೆ ಯಾವ ರೀತಿ ಮಾಡಿದರೆ ಒಳ್ಳೆಯದು? ಯಾವ ವಿಧಾನಗಳು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯ ಹದಗೆಡುತ್ತಿದ್ದು, ಒತ್ತಡ ಅನಾರೋಗ್ಯಕರ ಜೀವನಶೈಲಿಯಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದಕ್ಕೆ ನಾವು ಮಾಡುವ ಅಡುಗೆ ವಿಧಾನವೂ ಒಂದು ರೀತಿಯ ಕಾರಣ ಎಂದರೆ ಒಪ್ಪುತ್ತೀರಾ? ಹೌದು, ತಜ್ಞರು ಹೇಳುವ ಪ್ರಕಾರ, ಅಡುಗೆ ಮನೆಯಲ್ಲಿ ನಾವು ಬಳಸುವ ಪಾತ್ರೆಗಳಿಂದ ಜೊತೆಗೆ ಆಹಾರ ಬೇಯಿಸುವ ವಿಧಾನಗಳಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಈಗೀನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಪ್ರೆಶರ್ ಕುಕ್ಕರ್ ಗಳನ್ನು ಬಳಸಿ ಅಡುಗೆ ಮಾಡಿಯೇ ಮಾಡುತ್ತಾರೆ. ಏಕೆಂದರೆ ಕುಕ್ಕರ್ ಎಲ್ಲರ ಅಚ್ಚು ಮೆಚ್ಚಿನ ಪಾತ್ರೆಯಾಗಿದ್ದು ಅಡುಗೆಯನ್ನು ಸುಲಭಗೊಳಿಸುತ್ತದೆ. ಆದರೆ ಪ್ರೆಶರ್ ಕುಕ್ಕರ್ ನಲ್ಲಿ ಆಹಾರ ಬೇಯಿಸುವುದು ಎಷ್ಟು ಒಳ್ಳೆಯದು? ಇದರಿಂದ ಆರೋಗ್ಯಕ್ಕೆ ಪ್ರಯೋಜನವಿದೆಯೇ? ಎಂಬುದರ ಬಗ್ಗೆ ನಾವು ಯಾರೂ ಯೋಚಿಸುವುದಿಲ್ಲ. ಆದರೆ ದಿನನಿತ್ಯ ನಾವು ಅರಿತೋ ಅರಿಯದೆಯೋ ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಹಾಗಾದರೆ ಅಡುಗೆ ಯಾವ ರೀತಿ ಮಾಡಿದರೆ ಒಳ್ಳೆಯದು? ಯಾವ ವಿಧಾನಗಳು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಫಿಟ್ನೆಸ್ ತರಬೇತುದಾರ ರಾಲ್ಸ್ಟನ್ ಡಿಸೋಜಾ ಅವರು ಹೇಳುವ ಪ್ರಕಾರ “ಪ್ರೆಶರ್ ಕುಕ್ಕರ್ನಲ್ಲಿ ಆಹಾರ ಬೇಯಿಸುವುದರಿಂದ ನಮಗೆ ಅದರ ಪೋಷಕಾಂಶಗಳು ಸಿಗುವುದಿಲ್ಲ ಎಂದು ಹೇಳುವುದು ನಮ್ಮ ತಪ್ಪು ಕಲ್ಪನೆ. ಏಕೆಂದರೆ ಪ್ರೆಶರ್ ಕುಕ್ಕರ್ ಗಳಲ್ಲಿ ಆಹಾರ ಒಳಗೆ ಕುದಿಯುವುದರ ಜೊತೆಗೆ ಸಿಲ್ ಮಾಡಿದ ಮುಚ್ಚಳ ಇರುವುದರಿಂದ ಒಳಗಿರುವ ನೀರು ಕುದಿದು ಹಬೆಯಾಗಿ ಬದಲಾಗುತ್ತದೆ, ಆದರೆ ಅವು ಎಂದಿಗೂ ಕುಕ್ಕರ್ ನಿಂದ ಹೊರಗೆ ಹೋಗುವುದಿಲ್ಲ. ಹಾಗಾಗಿ ಆಹಾರ ಬಹಳ ಬೇಗನೆ ಬೇಯುತ್ತದೆ. ಇದರಿಂದ ಆ ಒತ್ತಡ ಅದರೊಳಗೆ ಉಳಿಯುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಈ ವಿಧಾನದಿಂದ ಹೆಚ್ಚು ಪೋಷಕಾಂಶಗಳು ನಾಶವಾಗುವುದಿಲ್ಲ. ಒತ್ತಡದ ಅಡುಗೆ ಯಾವಾಗಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ” ಎಂದು ಹೇಳಿದರು.
ಆರೋಗ್ಯಕರ ಅಡುಗೆ ವಿಧಾನ ಯಾವುದು?
ಕಡಿಮೆ ತಾಪಮಾನದಲ್ಲಿ ಬೆಣ್ಣೆ ಅಥವಾ ಎಣ್ಣೆಯನ್ನು ಬಳಸದ ವಿಧಾನಗಳು ಆರೋಗ್ಯಕರ ಅಡುಗೆ ವಿಧಾನಗಳಾಗಿವೆ. ಇದು ಸ್ಟೀಮಿಂಗ್ ಮತ್ತು ಕುದಿಯುವಿಕೆಯನ್ನು ಕೂಡ ಒಳಗೊಂಡಿರುತ್ತದೆ. ಈ ಎರಡೂ ವಿಧಾನಗಳು ದೈನಂದಿನ ಅಡುಗೆಗೆ ಉತ್ತಮವಾಗಿವೆ. ಇದಲ್ಲದೆ, ಇದು ಪೋಷಕಾಂಶಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗುವುದನ್ನು ತಡೆಯುತ್ತದೆ. ಆದ್ದರಿಂದ, ಪ್ರತಿನಿತ್ಯ ನೀವು ಅಡುಗೆಯನ್ನು ಹಬೆಯಲ್ಲಿ ಬೇಯಿಸುವ ಅಥವಾ ಕುದಿಸುವ ಮೂಲಕ ಆರೋಗ್ಯಕರವಾಗಿಸಬಹುದು.
ಇದನ್ನೂ ಓದಿ: ದಿನಕ್ಕೆ ಎಷ್ಟು ಹಸಿ ಮೆಣಸಿನಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು?
ಅನಾರೋಗ್ಯಕರ ಅಡುಗೆ ವಿಧಾನಗಳು ಯಾವುವು?
ಕೇವಲ ಕರಿದ ಆಹಾರ ಮಾತ್ರವಲ್ಲ. ಪೌಷ್ಟಿಕ ತಜ್ಞ ಲೋವೆ ಬಾತ್ರಾ ಅವರ ಪ್ರಕಾರ, ಏರ್ ಫ್ರೈ, ಗ್ರಿಲಿಂಗ್ ಮತ್ತು ಮೈಕ್ರೋವೇವಿಂಗ್ ಸಹ ಅನಾರೋಗ್ಯಕರ ಅಡುಗೆ ವಿಧಾನಗಳಾಗಿವೆ. ಈ ಯಾವುದೇ ವಿಧಾನಗಳನ್ನು ಅನುಸರಿಸುವುದು ಹಾನಿಕಾರಕ ರಾಸಾಯನಿಕಗಳಿಗೆ ಆಹಾರಗಳನ್ನು ಒಡ್ಡಿದಂತಾಗುತ್ತದೆ ಜೊತೆಗೆ ಟ್ರಾನ್ಸ್ ಕೊಬ್ಬುಗಳ ಉತ್ಪಾದನೆಗೆ ಕಾರಣವಾಗುತ್ತದೆ. ಹಾಗಾಗಿ ಈ ವಿಧಾನಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Tue, 18 February 25