ಫೋನ್ ಅನ್ನು ಹೇಗೆ ಹಿಡಿದಿದ್ದೀರಿ ಎಂಬುದು ನೀವು ಎಷ್ಟು ಬುದ್ಧಿವಂತರು ಎಂಬುದನ್ನು ಹೇಳುತ್ತೆ

ನಿಮ್ಮ ಫೋನ್ ಅನ್ನು ನೀವು ಯಾವ ರೀತಿಯಲ್ಲಿ ಅಥವಾ ಹೇಗೆ ಹಿಡಿದಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ನಡವಳಿಕೆಯ ಮಾದರಿಗಳನ್ನು ಅಥವಾ ನಿರ್ಧಾರ ತೆಗೆದುಕೊಳ್ಳುವ ಕೌಶಲಗಳನ್ನು ತೋರಿಸುತ್ತದೆ. ಇದು ಸಿಲ್ಲಿ ಎನಿಸಿದರೂ ಕೂಡ ಈ ವ್ಯಕ್ತಿತ್ವ ಪರೀಕ್ಷೆಯು ನಿಮಗೆ ವಿಶಿಷ್ಟವಾದ ಕೆಲವು ವಿಷಯಗಳ ಬಗ್ಗೆ ಅರಿವು ಮೂಡಿಸಬಹುದು. ನಮ್ಮ ಫೋನ್ ಹೋಲ್ಡಿಂಗ್ ಶೈಲಿ ಅಂದರೆ ಮೊಬೈಲ್ ಹಿಡಿದುಕೊಳ್ಳುವ ರೀತಿ ನಿಮ್ಮ ಬಗೆಗಿನ ಕೆಲವು ವಿಷಯಗಳನ್ನು ಬಹಿರಂಗಪಡಿಸುತ್ತದೆ.

ಫೋನ್ ಅನ್ನು ಹೇಗೆ ಹಿಡಿದಿದ್ದೀರಿ ಎಂಬುದು ನೀವು ಎಷ್ಟು ಬುದ್ಧಿವಂತರು ಎಂಬುದನ್ನು ಹೇಳುತ್ತೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Dec 12, 2024 | 11:16 AM

ಫೋನ್ ಕೇವಲ ಒಂದು ಸಾಧನ ಎಂದು ಅಂದುಕೊಂಡಿದ್ದರೆ ಅದು ತಪ್ಪು. ಅದಕ್ಕೂ ಮಿಗಿಲಾದ ಹಲವು ರೀತಿಯ ಅಂಶಗಗಳು ಇದರಲ್ಲಿದೆ. ಅದಲ್ಲದೆ ಫೋನ್ ನಿಮ್ಮ ವ್ಯಕ್ತಿತ್ವ ಮತ್ತು ಬುದ್ಧಿವಂತಿಕೆಯನ್ನು ಪ್ರಸ್ತುತ ಪಡಿಸುವ ಕಿಟಕಿಯಾಗಬಹುದು. ಈ ಮಾತು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ ತಜ್ಞರ ಪ್ರಕಾರ, ನಿಮ್ಮ ಫೋನ್ ಅನ್ನು ನೀವು ಯಾವ ರೀತಿಯಲ್ಲಿ ಅಥವಾ ಹೇಗೆ ಹಿಡಿದಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ನಡವಳಿಕೆಯ ಮಾದರಿಗಳನ್ನು ಅಥವಾ ನಿರ್ಧಾರ ತೆಗೆದುಕೊಳ್ಳುವ ಕೌಶಲಗಳನ್ನು ತೋರಿಸುತ್ತದೆ. ಇದು ಸಿಲ್ಲಿ ಎನಿಸಿದರೂ ಕೂಡ ಈ ವ್ಯಕ್ತಿತ್ವ ಪರೀಕ್ಷೆಯು ನಿಮಗೆ ವಿಶಿಷ್ಟವಾದ ಕೆಲವು ವಿಷಯಗಳ ಬಗ್ಗೆ ಅರಿವು ಮೂಡಿಸಬಹುದು. ನಮ್ಮ ಫೋನ್ ಹೋಲ್ಡಿಂಗ್ ಶೈಲಿ ಅಂದರೆ ಮೊಬೈಲ್ ಹಿಡಿದುಕೊಳ್ಳುವ ರೀತಿ ನಿಮ್ಮ ಬಗೆಗಿನ ಕೆಲವು ವಿಷಯಗಳನ್ನು ಬಹಿರಂಗಪಡಿಸುತ್ತದೆ.

1. ಫೋನ್ ಅನ್ನು ಒಂದು ಕೈಯಿಂದ ಹಿಡಿದುಕೊಳ್ಳುವುದು:

ನೀವು ನಿಮ್ಮ ಫೋನ್ ಅನ್ನು ಒಂದು ಕೈಯಿಂದ ಹಿಡಿದು ನಿಮ್ಮ ಹೆಬ್ಬೆರಳಿನಿಂದ ನ್ಯಾವಿಗೇಟ್ ಮಾಡುವವರಾಗಿದ್ದರೆ, ನೀವು ಆತ್ಮವಿಶ್ವಾಸ ಹೊಂದಿದ್ದೀರಿ ಎಂಬುದನ್ನು ಮತ್ತು ಲೆಕ್ಕಾಚಾರವನ್ನು ಚೆನ್ನಾಗಿ ಮಾಡುತ್ತೀರಿ ಅಲ್ಲದೆ ಸವಾಲುಗಳನ್ನು ಎದುರಿಸುತ್ತೀರಿ ಎಂಬುದನ್ನು ತೋರಿಸುತ್ತದೆ. ಈ ಅಂಶಗಳು ನಿಮ್ಮ ಯಶಸ್ಸಿಗೂ ಕಾರಣವಾಗುತ್ತದೆ. ಇತರರು ನಿಮ್ಮ ಸಾಮರ್ಥ್ಯವನ್ನು ಮೆಚ್ಚುತ್ತಾರೆ. ಆದರೆ ಸಂಬಂಧಗಳ ವಿಷಯದಲ್ಲಿ ನೀವು ಹೆಚ್ಚು ಯೋಚನೆ ಮಾಡಿ ಮುಂದುವರಿಯುವುದರಿಂದ ಮತ್ತು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡುವ ಗುಣಗಳು ನಿಮ್ಮನ್ನು ಸಂಬಂಧಗಳಿಂದ ದೂರವಿರುವಂತೆ ಮಾಡುತ್ತದೆ. ಆದರೆ ನಿಮ್ಮ ಈ ಗುಣ, ನೀವು ಕ್ಷಣಿಕ ಖುಷಿಗಳಿಗೆ ಸಮಯ ನೀಡುವುದಕ್ಕಿಂತ ಅರ್ಥಪೂರ್ಣ ಸಂಬಂಧಗಳಿಗೆ ಆದ್ಯತೆ ನೀಡುವುದನ್ನು ತೋರಿಸುತ್ತದೆ.

2. ಒಂದು ಕೈಯಿಂದ ಹಿಡಿದುಕೊಳ್ಳುವುದು, ವಿರುದ್ಧ ಹೆಬ್ಬೆರಳಿನಿಂದ ನ್ಯಾವಿಗೇಟ್ ಮಾಡುವುದು

ಒಂದು ಹೆಬ್ಬೆರಳಿನಿಂದ ಸ್ಕ್ರಾಲ್ ಮಾಡುವುದು, ಇನ್ನೊಂದು ಕೈಯಲ್ಲಿ ಫೋನ್ ಅನ್ನು ಹಿಡಿಯಲು ಬಳಸುವವರು ವಿಶ್ಲೇಷಣಾತ್ಮಕವಾಗಿ ಮತ್ತು ಅರ್ಥಗರ್ಭಿತವಾಗಿ ಮಾತನಾಡುವವರಾಗಿರುತ್ತಾರೆ. ಜೊತೆಗೆ ಜೀವನದುದ್ದಕ್ಕೂ ಬುದ್ಧಿವಂತಿಕೆಯಿಂದ ವ್ಯವಹರಿಸುವ ಗುಣದವರಾಗಿರುತ್ತಾರೆ. ಅವರಲ್ಲಿ ತೀಕ್ಷ್ಣವಾದ ತಾರ್ಕಿಕ ಕೌಶಲ್ಯಗಳು ಇರುವುದರಿಂದ ಅವರನ್ನು ಮೋಸಗೊಳಿಸುವುದು ಬಹಳ ಕಷ್ಟ.

3. ನಿಮ್ಮ ಫೋನ್ ಅನ್ನು ಹಿಡಿಯಲು ಎರಡೂ ಕೈಗಳನ್ನು ಬಳಸುವುದು

ಫೋನ್ ಹಿಡಿದುಕೊಳ್ಳಲು ಎರಡು ಕೈಗಳನ್ನು ಬಳಸುವವರು ದಕ್ಷ ಮತ್ತು ಯಾವುದೇ ಸಂದರ್ಭವಾಗಿರಲಿ ಹೊಂದಿಕೊಳ್ಳುವ ಮನಸ್ಥಿತಿಯವರಾಗಿರುತ್ತಾರೆ. ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಯಾವ ರೀತಿಯಲ್ಲಿ ವ್ಯವಹರಿಸಬೇಕು ಎನ್ನುವುದನ್ನು ಬಲ್ಲವರಾಗಿರುತ್ತಾರೆ. ಸವಾಲುಗಳು ಹೇಗೆ ಬಂದರೂ ಕೂಡ ಅದನ್ನು ಗಮನವಿಟ್ಟು ದೃಢನಿಶ್ಚಯದಿಂದ ಎದುರಿಸುತ್ತಾರೆ.

ಇದನ್ನೂ ಓದಿ: ಬಾಯಿ ದುರ್ವಾಸನೆ ನಿವಾರಣೆಗೆ ಕೆಲವು ಮನೆಮದ್ದುಗಳು

4. ಒಂದು ಕೈಯಲ್ಲಿ ಮೊಬೈಲ್ ಹಿಡಿದು ಬೇರೆ ಬೆರಳಲ್ಲಿ ನ್ಯಾವಿಗೇಟ್ ಮಾಡುವುದು

ಫೋನ್ ಅನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈ ಬೆರಳು ಅಥವಾ ತೋರುಬೆರಳಿನಿಂದ ನ್ಯಾವಿಗೇಟ್ ಮಾಡುವುದು. ಸಾಮಾನ್ಯವಾಗಿ ಇಂತವರು ಏಕಾಂಗಿಯಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇತರರನ್ನು ಮೆಚ್ಚಿಸುವ ನವೀನ ರೀತಿಯ ಆಲೋಚನೆಗಳನ್ನು ಪ್ರಸ್ತುತ ಪಡಿಸಲು ಬಲ್ಲವರಾಗಿರುತ್ತಾರೆ. ತುಂಬಾ ನಾಚಿಕೆ ಸ್ವಭಾವದವರಾಗಿದ್ದು ಜನರ ಜೊತೆಯಲ್ಲಿ ಬೆರೆಯಲು ಸಮಯ ತೆಗೆದುಕೊಳ್ಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:46 am, Thu, 12 December 24

‘ಆಟಕ್ಕೆ ಅವಕಾಶ ಕೊಡಲ್ಲ’; ಗೌತಮಿ ತಂಡ ಸೇರಿ ಗಳಗಳನೆ ಅತ್ತ ಚೈತ್ರಾ ಕುಂದಾಪುರ
‘ಆಟಕ್ಕೆ ಅವಕಾಶ ಕೊಡಲ್ಲ’; ಗೌತಮಿ ತಂಡ ಸೇರಿ ಗಳಗಳನೆ ಅತ್ತ ಚೈತ್ರಾ ಕುಂದಾಪುರ
ಹೊಸ ವಾಹನ ಖರೀದಿ ಯಾವ ದಿನ, ಹೇಗೆ ಮಾಡಬೇಕು? ಇಲ್ಲಿದೆ ಜ್ಯೋತಿಷ್ಯ ಸಲಹೆ
ಹೊಸ ವಾಹನ ಖರೀದಿ ಯಾವ ದಿನ, ಹೇಗೆ ಮಾಡಬೇಕು? ಇಲ್ಲಿದೆ ಜ್ಯೋತಿಷ್ಯ ಸಲಹೆ
Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್