Banana Flower: ಬಾಳೆ ಹೂವಿನ ಪಲ್ಯ ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
ಈ ಬಾಳೆ ಹೂವಿನ ಸಾರವು ದೇಹದಲ್ಲಿ ಮಲೇರಿಯಾ ಪರಾವಲಂಬಿಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮಧುಮೇಹ ಮತ್ತು ರಕ್ತಹೀನತೆ ರೋಗಿಗಳು ತಮ್ಮ ಆಹಾರ ಕ್ರಮದಲ್ಲಿ ಬಾಳೆ ಹೂವಿನ ಪಲ್ಯ ಸೇರಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಬಾಳೆ ಹೂವಿನಲ್ಲಿ(Banana Flower) ವಿಟಮಿನ್ ಸಿ, ಎ, ಇ, ಫೈಬರ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಪೋಷಕಾಂಶಗಳ ಮೂಲವಾಗಿದೆ. ಬಾಳೆ ಹೂವು (Banana Flower) ಯಾವುದೇ ರೀತಿಯ ಸೋಂಕಿನ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದೆ. ರೋಗಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆದು ಗಾಯಗಳನ್ನು ವಾಸಿಮಾಡುವುದರಲ್ಲಿಯೂ ಇದು ಸಹಾಯಕವಾಗಿದೆ.
ಬಾಳೆ ಹೂವಿನ ಪಲ್ಯ ಸವಿಯುವುದರಿಂದ ನೀವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಬಾಳೆ ಹೂವಿನ ಸಾರವು ದೇಹದಲ್ಲಿ ಮಲೇರಿಯಾ ಪರಾವಲಂಬಿಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮಧುಮೇಹ ಮತ್ತು ರಕ್ತಹೀನತೆ ರೋಗಿಗಳಿಗೆ ಈ ಬಾಳೆ ಹೂವಿನ ಪಲ್ಯ ಸಹಾಯಕವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮಹಿಳೆಯರ ಡಯೆಟ್ನಲ್ಲಿ ಇರಲೇಬೇಕಾದ ಆಹಾರಗಳಿವು
ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುವ ಫೈಬರ್ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿರುವ ಕಾರಣ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಹೆರಿಯ ನಂತರ ಬಾಣಂತಿಯರು ನಿಯಮಿತವಾಗಿ, ಅಂದರೆ ತಿಂಗಳಿಗೆ ಎರಡು ಬಾರಿಯಾದರೂ, ಬಾಳೆ ಹೂವಿನ ಪಲ್ಯ ಮಾಡಿ ಸೇವಿಸಿದರೂ ಸಾಕು, ಸ್ತನಗಳಲ್ಲಿ ಹಾಲು ಹೆಚ್ಚಾಗುತ್ತದೆ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Rice Diet: ರೈಸ್ ಡಯೆಟ್ನಿಂದ ತೂಕ ಇಳಿಯೋದು ಹೇಗೆ?
ಆದ್ದರಿಂದ ಬಾಳೆ ಹೂವಿನ ಪಲ್ಯವನ್ನು ಆಹಾರದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ನಿಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬೇಕಾದರೆ, ನೀವು ಬಾಳೆ ಹೂವಿನ ಪಲ್ಯ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ