ಬಾಳೆಹಣ್ಣು ಹಾಳಾಗದಂತೆ ಇಡುವುದು ಕಷ್ಟವೇನಲ್ಲ, ಈ ವಿಧಾನ ಟ್ರೈ ಮಾಡಿ ನೋಡಿ
ದಿನಕ್ಕೆ ಒಂದಾದರು ಹಣ್ಣು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗಾಗಿ ಆರೋಗ್ಯವು ಉತ್ತಮವಾಗಿರುವಲ್ಲಿ ಹಣ್ಣುಗಳ ಪಾತ್ರ ದೊಡ್ಡದು ಎಂದೇ ಹೇಳಬಹುದು. ಬೇರೆ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಬಾಳೆಹಣ್ಣು ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ. ವರ್ಷವಿಡೀ ಲಭ್ಯವಾಗುವಂತಹ ಹಣ್ಣಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಮಾಗಿದ ಬಾಳೆಹಣ್ಣು ಹೆಚ್ಚು ದಿನ ಇಡಲು ಆಗುವುದಿಲ್ಲ, ಬಹುಬೇಗನೇ ಕೊಳೆತುಹೋಗುತ್ತದೆ. ಹೀಗಾಗಿ ಹೆಚ್ಚು ಬಾಳೆಹಣ್ಣನ್ನು ತರುವುದೇ ಇಲ್ಲ. ಆದರೆ ಈ ಬಾಳೆ ಹಣ್ಣು ತಂದರೆ ಕಪ್ಪಾಗದಂತೆ ಹೇಗೆ ಶೇಖರಿಸಿ ಇಡಬಹುದೆನ್ನುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿಧಾನವನ್ನು ಬಳಸಿದರೆ ಈ ಹಣ್ಣನ್ನು ಹೆಚ್ಚು ದಿನಗಳ ಕಾಲ ಇಡಬಹುದು.
ಬಾಳೆಹಣ್ಣು ಯಾರಿಗೆ ಇಷ್ಟ ಹೇಳಿ, ಊಟದ ಬಳಿಕ ಒಂದಾದರೂ ಬಾಳೆಹಣ್ಣು ಸೇವಿಸಿಯೇ ಸೇವಿಸುತ್ತಾರೆ. ಉಳಿದ ಹಣ್ಣಿನಂತೆ ಈ ಹಣ್ಣಿನಲ್ಲಿ ಬೀಜಗಳು ಇಲ್ಲದೆ ಇರುವ ಕಾರಣ ಎಲ್ಲರೂ ಇಷ್ಟ ಪಟ್ಟೆ ಸೇವಿಸುತ್ತಾರೆ. ಸುಲಭವಾಗಿ ಬೆಳೆಯಬಹುದಾದ ಹಣ್ಣು ಇದಾಗಿದ್ದು, ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ. ಪೋಷಕಾಂಶಗಳು ಹೇರಳವಾಗಿದೆ . ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಮಾರುಕಟ್ಟೆಯಿಂದ ತಂದ ಬಾಳೆಹಣ್ಣು ಗಳನ್ನು ಹೆಚ್ಚು ದಿನಗಳ ಕಾಲ ಇಡುವುದಕ್ಕೆ ಆಗುವುದಿಲ್ಲ. ಬೇಗನೇ ಹಣ್ಣಾಗಿ ಕೊಳೆತು ಹೋಗುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾಳೆಹಣ್ಣನ್ನು ಕೊಳೆಯದಂತೆ ಇಡುವುದು ವಿಧಾನದ ವಿಡಿಯೋವೊಂದು ವೈರಲ್ ಆಗಿವೆ.
ಹೆಚ್ಚು ದಿನಗಳ ಕಾಲ ಬಾಳೆಹಣ್ಣನ್ನು ಇಟ್ಟರೆ ಕಾಂಡ ಭಾಗ ಮೊದಲು ಕೊಳೆಯಲು ಶುರುವಾಗಿ, ಹಣ್ಣು ಕಪ್ಪಾಗುತ್ತದೆ. ಈ ಅನುಭವವು ಎಲ್ಲರಿಗೂ ಕೂಡ ಆಗಿರುತ್ತದೆ. ಬಾಳೆಹಣ್ಣಿನ ಕಾಂಡವನ್ನು ಕಾಗದ ಅಥವಾ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಇಡುವುದರಿಂದ ಬಾಳೆಹಣ್ಣು ಬೇಗ ಕೆಡುವುದಿಲ್ಲ. ಈ ವಿಡಿಯೋದಲ್ಲಿ ಈ ವಿಧಾನವನ್ನು ತೋರಿಸಲಾಗಿದೆ. ಇದರಲ್ಲಿ ಬಾಳೆಹಣ್ಣು ಹಾಳಾಗದಂತೆಯೇ ಬಾಳೆಹಣ್ಣಿನ ಕಾಂಡವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಇಡಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
When bananas ripen, their stems release ethylene gas, and when it spreads to the rest of the fruit, it will quickly cause the fruit to rot.
That’s why the plastic wrap around the stem keeps the ethylene gas contained so the bananas stay safe.pic.twitter.com/3c0Vtjd8cH
— Massimo (@Rainmaker1973) February 14, 2024
ಈ ವಿಡಿಯೋವನ್ನು ಮಸ್ಸಿಮೋ ಎನ್ನುವ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವಿಡಿಯೋದ ಪ್ರಾರಂಭದಲ್ಲಿ ಕಪ್ಪಾದ ಬಾಳೆಹಣ್ಣನ್ನು ಕಾಣಬಹುದು. ಆ ಬಳಿಕ ಫ್ರೆಶ್ ಇರುವ ಬಾಳೆಹಣ್ಣನ್ನು ತೋರಿಸಲಾಗಿದ್ದು, ಅದರ ಕಾಂಡವನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಇಡಲಾಗಿದೆ. ಈ ವಿಡಿಯೋದೊಂದಿಗೆ, ಬಾಳೆಹಣ್ಣುಗಳು ಹಣ್ಣಾದಾಗ, ಅವುಗಳ ಕಾಂಡಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
ಇದನ್ನೂ ಓದಿ: ಸರ್ವರೋಗವನ್ನು ನಿವಾರಿಸುತ್ತೆ ಈ ಬಾರ್ಲಿ, ಆರೋಗ್ಯಕ್ಕೂ ಬಲು ಉಪಯುಕ್ತ
ಅದು ಉಳಿದ ಹಣ್ಣುಗಳಿಗೆ ಹರಡಿ, ಬೇಗನೆ ಹಣ್ಣುಗಳನ್ನು ಕೊಳೆಯುವಂತೆ ಮಾಡುತ್ತದೆ. ಅದಕ್ಕಾಗಿಯೇ ಕಾಂಡದ ಸುತ್ತಲೂ ಪ್ಲಾಸ್ಟಿಕ್ ಹೊದಿಕೆಯನ್ನು ಸುತ್ತುವುದರಿಂದ ಎಥಿಲೀನ್ ಅನಿಲವು ಅಲ್ಲೇ ಇರುತ್ತದೆ. ಹೀಗಾಗಿ ಬಾಳೆಹಣ್ಣುಗಳು ಸುರಕ್ಷಿತವಾಗಿರುತ್ತವೆ ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ ಒಂದು ಲಕ್ಷ ನವಲತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Thu, 15 February 24