ಸರ್ವರೋಗವನ್ನು ನಿವಾರಿಸುತ್ತೆ ಈ ಬಾರ್ಲಿ, ಆರೋಗ್ಯಕ್ಕೂ ಬಲು ಉಪಯುಕ್ತ
ಅಡುಗೆ ಮನೆಯಲ್ಲಿರುವ ಇರುವ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿದೆ. ಅಂತಹ ಪ್ರಮುಖ ಆಹಾರವಾಗಿ ಬಳಸುತ್ತಿದ್ದ ಏಕದಳ ಧಾನ್ಯವೆಂದರೆ ಅದುವೇ ಬಾರ್ಲಿ. ಈ ಬಾರ್ಲಿಯನ್ನು ಶತಮಾನಗಳಿಂದಲೂ ಆಹಾರವಾಗಿ ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಔಷಧೀಯ ಗುಣವು ಹೇರಳವಾಗಿದೆ. ನೋಡಲು ಗೋಧಿಯಂತೆ ಕಾಣುವ ಈ ಬಾರ್ಲಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯವು ಚೆನ್ನಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಮುಖ್ಯ. ನಮ್ಮ ಹಿರಿಯರು ಸೇವಿಸುವ ಆಹಾರಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ಹಿರಿಯರ ಆಹಾರಗಳಲ್ಲಿ ಬಾರ್ಲಿ ಕೂಡ ಒಂದಾಗಿತ್ತು. ಈ ಬಾರ್ಲಿಯಲ್ಲಿ ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಅಮೈನೋ ಆಮ್ಲ ಹಾಗೂ ಇತರೆ ಪೋಷಕಾಂಶಗಳಿಂದ ಹೇರಳವಾಗಿದೆ. ದಿನನಿತ್ಯ ಸೇವನೆ ಮಾಡುವುದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು
* ಬಾರ್ಲಿಯನ್ನು ಬೇಯಿಸಿದ ನೀರನ್ನು ಕುಡಿದರೆ ಆಮಶಂಕೆ, ಅಜೀರ್ಣ, ಅತಿಸಾರ, ಮಲಬದ್ಧತೆ ನಿವಾರಣೆಯಾಗುತ್ತದೆ.
* ಬಾರ್ಲಿ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.
* ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಬಾರ್ಲಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಶೋಧಿಸಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.
* ಬಾರ್ಲಿ ನೀರನ್ನು ಸೇವಿಸುವುದರಿಂದ ರಕ್ತದ ಒತ್ತಡ, ಹೊಟ್ಟೆ ಹುಣ್ಣು, ಕರುಳಿನ ಬೇನೆ ಸಮಸ್ಯೆಯು ದೂರವಾಗುತ್ತದೆ.
* ಗರ್ಭಿಣಿಯರು ಬಾರ್ಲಿ ಗಂಜಿಗೆ ನಿಂಬೆರಸ, ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಕುಡಿದರೆ ಪ್ರಯೋಜನಕಾರಿಯಾಗಿದೆ.
* ಬಾರ್ಲಿ ನೀರನ್ನು ಕುಡಿಯುವುದರಿಂದ ಸುಲಭವಾಗಿ ತೂಕವನ್ನು ಇಳಿಸಿ ಕೊಳ್ಳಬಹುದು.
* ಗಾಯದ ಕಲೆಗಳಿದ್ದರೆ ಒಂದು ಚಮಚದಷ್ಟು ಚಾರ್ಲಿ ಪುಡಿ, ಮೊಸರು, ಒಂದು ಚಿಟಿಕೆಯಷ್ಟು ಅರಶಿನ ಹಾಗೂ ನಿಂಬೆರಸ ಬೆರೆಸಿ ಹಚ್ಚುವುದರಿಂದ ಕಲೆ ಮಾಸುತ್ತದೆ.
* ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ನಿಯಂತ್ರಣಕ್ಕೆ ಬರುತ್ತದೆ.
* ಬಾರ್ಲಿಯ ನೀರು ಕುಡಿಯುವುದರಿಂದ ಎಲ್ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
* ಬಾರ್ಲಿಯ ನೀರನ್ನು ಸೋಸಿ ಮುಖವನ್ನು ತೊಳೆಯುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚಿಸಿ, ವೃದ್ಧಾಪ್ಯದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
* ಬಾರ್ಲಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲು ನೋವು, ಟಾನ್ಸಿಲ್ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಮಕ್ಕಳು ಓದಿದ್ದೆಲ್ಲವೂ ಬೇಗನೇ ಮರೆತು ಬಿಡುತ್ತಾರಾ? ಈ ಆಹಾರಗಳನ್ನು ನೀಡಿ
* ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.
* ಬಾರ್ಲಿ ನೀರು ಕುಡಿಯುವುದರಿಂದ ದೇಹದಿಂದ ಬೇಡವಾದ ಕಶ್ಮಲಗಳನ್ನು ಹೊರಕ್ಕೆ ಹಾಕುತ್ತದೆ.
* ಬಾರ್ಲಿ ನೀರನ್ನು ದಿನನಿತ್ಯ ಸೇವಿಸುತ್ತಿದ್ದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
* ಬಾರ್ಲಿ ನೀರು ಹಸಿವನ್ನು ನಿಯಂತ್ರಿಸುವುದರೊಂದಿಗೆ ಚಯಾಪಚಯ ಹೆಚ್ಚಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ