ಜೀವನಶೈಲಿಯ ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕ ಇಳಿಸಿಕೊಂಡ ನ್ಯೂರಾಲಜಿಸ್ಟ್

ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಆದರೆ ಆರೋಗ್ಯಕರ ಜೀವನಶೈಲಿಯ ಪಾಲನೆ, ಆರೋಗ್ಯಕರ ಆಹಾರ ಸೇವನೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೇಹ ತೂಕವನ್ನು ಇಳಿಸಿ ಫಿಟ್‌ ಮತ್ತು ಆರೋಗ್ಯಕರವಾಗಿರಬಹುದು ಎಂಬುದನ್ನು ಹೈದರಾಬಾದ್‌ ಮೂಲದ ನ್ಯೂರಾಲಜಿಸ್ಟ್ ಡಾ. ಸುಧೀರ್‌ ಕುಮಾರ್ ತೋರಿಸಿಕೊಟ್ಟಿದ್ದಾರೆ. ಹೌದು ಇವರು ಜೀವನಶೈಲಿಯ ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕವನ್ನು ಇಳಿಸಿಕೊಂಡಿದ್ದಾರೆ.

ಜೀವನಶೈಲಿಯ ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕ ಇಳಿಸಿಕೊಂಡ  ನ್ಯೂರಾಲಜಿಸ್ಟ್
ಡಾ. ಸುಧೀರ್‌‌ ಕುಮಾರ್
Image Credit source: Social Media

Updated on: Sep 14, 2025 | 6:13 PM

ದೇಹ ತೂಕವನ್ನು (Weight Loss) ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ ಹಲವರಿಗೆ ತೂಕ ಇಳಿಸಿಕೊಳ್ಳುವುದು ದೊಡ್ಡ ಸವಾಲಿನಂತೆ ಭಾಸವಾಗಬಹುದು. ಆದರೆ ಆರೋಗ್ಯಕರ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯ ಪಾಲನೆಯಿಂದ ದೇಹ ತೂಕ ಇಳಿಸಿಕೊಂಡು ಫಿಟ್‌ ಆಗಿ ಇರಬಹುದು. ಹೀಗೆ ಜೀವನಶೈಲಿಯ ಸಣ್ಣ ಬದಲಾವಣೆಯಿಂದ ವೇಟ್‌ ಲಾಸ್‌ ಮಾಡುವುದು ಅಷ್ಟೇನೂ ಕಷ್ಟ ಅಲ್ಲ ಎಂಬುದನ್ನು ಹೈದರಾಬಾದ್‌ ಮೂಲದ ನ್ಯೂರಾಲಜಿಸ್ಟಿ ಡಾ. ಸುಧೀರ್‌‌ ಕುಮಾರ್ (Dr. Sudhir Kumar) ತೋರಿಸಿಕೊಟ್ಟಿದ್ದಾರೆ. ಇವರು ಜೀವನಶೈಲಿಯ ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕವನ್ನು ಇಳಿಸಿಕೊಂಡಿದ್ದು, ತಮ್ಮ ತೂಕ ಇಳಿಕೆಯ ರಹಸ್ಯವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

30 ಕೆಜಿಗಳಷ್ಟು ತೂಕ ಇಳಿಸಿಕೊಂಡ  ನ್ಯೂರಾಲಜಿಸ್ಟ್:

ಜೀವನಶೈಲಿಯ ಸರಳ ಬದಲಾವಣೆಯೊಂದಿಗೆ ಹೈದರಾಬಾದ್‌ ಮೂಲದ 51 ವರ್ಷ ವಯಸ್ಸಿನ ನ್ಯೂರಾಲಜಿಸ್ಟ್‌ ಡಾ. ಸುಧೀರ್‌ ಕುಮಾರ್‌ 30 ಕೆಜಿಗಳಷ್ಟು ತೂಕವನ್ನು ಇಳಿಸಿಕೊಂಡಿದ್ದು, ಇವರು ತಮ್ಮ ತೂಕ ಇಳಿಕೆಯ ಜರ್ನಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
ಅತಿಯಾಗಿ ಬರುವ ಕೋಪ ತಡೆಯಲು ಇದೊಂದು ಕಷಾಯ ಸಾಕು!
ಯಾವುದೇ ಲಕ್ಷಣಗಳು ಕಂಡು ಬರದೆಯೇ ಜೀವಕ್ಕೆ ಅಪಾಯ ತರುತ್ತೆ ಈ ರೋಗಗಳು
ದೇಹದಲ್ಲಿ ವಿಟಮಿನ್ ಡಿ3 ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೇಗೆ?
ನಿಮಗೂ ಆಗಾಗ ಆಕಳಿಕೆ ಬರುತ್ತಾ? ಇದಕ್ಕೆ ಕಾರಣ ಏನು ಗೊತ್ತಾ?

ಒಂದು ಕಾಲದಲ್ಲಿ ಬರೋಬ್ಬರಿ 100 ಕೆಜಿ ತೂಕವಿದ್ದ ಡಾ, ಸುಧೀರ್‌ ಶಿಸ್ತುಬದ್ಧ ಜೀವನಶೈಲಿಯನ್ನು ಪಾಲಿಸುವ ಮೂಲಕ 30 ಕೆಜಿಗಳಷ್ಟು ತೂಕ ಇಳಿಸಿಕೊಂಡಿದ್ದಾರೆ. ದಿನಕ್ಕೆ 16 ರಿಂದ 17 ಗಂಟೆಗಳ ಕಾಲ ಕೆಲಸ, 4 ರಿಂದ 5 ಗಂಟೆಗಳ ನಿದ್ರೆ, ಅತಿಯಾಗಿ ತಿನ್ನುವುದು, ಜಂಕ್‌ ಫುಡ್‌ ಹಾಗೂ ಸಿಹಿ ತಿಂಡಿಗಳ ಸೇವನೆಯಿಂದ ನನ್ನ ದೇಹ ತೂಕ ಬರೋಬ್ಬರಿ 100 ಕೆಜಿ ಗಳಷ್ಟಿತ್ತು. ನಂತರದಲ್ಲಿ ಜೀವನಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯಕರವಾಗಿ ತೂಕ ಇಳಿಸಿಕೊಂಡಿದ್ದೇನೆ ಎಂದು ತಮ್ಮ ಫಿಟ್‌ನೆಸ್‌ ಜರ್ನಿಯ ಬಗ್ಗೆ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಪೋಸ್ಟ್ ಇಲ್ಲಿದೆ ನೋಡಿ:

ಡಾ. ಸುಧೀರ್‌ 30 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?

ಇವರ ಫಿಟ್ನೆಸ್‌ ಪ್ರಯಾಣವು ನವೆಂಬರ್‌ 6, 2020 ರಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ 5 ಕಿ.ಮೀ ನಡೆಯುವ ಮೂಲಕ ತೂಕ ಇಳಿಕೆಯ ಜರ್ನಿಯನ್ನು ಪ್ರಾರಂಭಿಸಿದರು. ಕ್ರಮೇಣ 4-6 ವಾರಗಳ ಬಳಿಕ 10 ಕಿ.ಮೀ ವಾಕಿಂಗ್‌ ಮತ್ತು ಕೊನೆಯಲ್ಲಿ ಜಾಗಿಂಗ್‌ ಕೂಡಾ ಮಾಡುತ್ತಿದ್ದರು. ಜೊತೆಗೆ ಜೀವನಶೈಲಿಯಲ್ಲೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರು. ಅವುಗಳು ಯಾವುದೆಂದರೆ,

  • 8 ರಿಂದ 9 ಗಂಟೆ ಮಾತ್ರ ಕೆಲಸ ಮಾಡುವುದು
  • 7 ರಿಂದ 8 ಗಂಟೆಗಳ ನೆಮ್ಮದಿಯ ನಿದ್ರೆ
  • ತಂಪು ಪಾನೀಯ, ಜಂಕ್‌ ಫುಡ್‌ ಮತ್ತು ಸಕ್ಕರೆ ಪ್ರಮಾಣದ ಆಹಾರದ ಕಡಿಮೆ ಸೇವನೆ
  • ಕಾರ್ಬೋಹೈಡ್ರೇಟ್‌ ಆಹಾರದ ಸೇವನೆ ಕಡಿಮೆ ಮಾಡಿ ಹೆಚ್ಚು ಪ್ರೋಟೀನ್‌ ಸೇವನೆ
  • ಕನಿಷ್ಟ ಮೂರು ದಿನಗಳ ಕಾಲ ಸ್ಟ್ರೆಂತ್‌ ಟ್ರೈನಿಂಗ್‌

ಜೀವನಶೈಲಿಯಲ್ಲಿ ಈ ಒಂದಷ್ಟು ಬದಲಾವಣೆಗಳನ್ನು ಮಾ‌ಡಿಕೊಂಡ ನಂತರ ಡಾ. ಸುಧೀರ್‌ ತಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡುಕೊಂಡರು. ಅವುಗಳೆಂದರೆ;

  • 100 ರಿಂದ 70 ಕೆಜಿಯ ವರೆಗೆ 30 ಕೆಜಿಯಷ್ಟು ತೂಕ ಇಳಿಕೆ
  • ದೇಹದಲ್ಲಿ ಉತ್ಸಾಹ, ಚೈತನ್ಯದ ಹೆಚ್ಚಳ
  • ಕೆಲಸದಲ್ಲಿ ಹೆಚ್ಚಿನ ಗಮನ
  • ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಹೆಚ್ಚಳ
  • ಹೃದಯದ ಬಡಿತದಲ್ಲಿ ಉತ್ತಮ ಬದಲಾವಣೆ
  • ರಕ್ತದಲ್ಲಿನ ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್‌ ಮತ್ತು ರಕ್ತದೊತ್ತಡ ಮಟ್ಟದಲ್ಲಿ ಸುಧಾರಣೆ

ಇದನ್ನೂ ಓದಿ: ಪದೇ ಪದೇ ಆಕಳಿಕೆ ಬರುವುದರ ಹಿಂದಿದೆ ನೀವೂ ಊಹಿಸಲು ಸಾಧ್ಯವಾಗದ ಕಾರಣ!

ತೂಕ ಇಳಿಸಲು ಬಯಸುವವರಿಗೆ ಡಾ. ಸುಧೀರ್‌ ಸಲಹೆಗಳು:

  • ಸ್ಥಿರತೆ ಮುಖ್ಯ
  • ನಿಮಗೆ ಇಷ್ಟವಾಗುವ ವೇಗದಲ್ಲಿ ಪ್ರತಿನಿತ್ಯ ಓಡಿ, ವಾಕ್‌ ಮಾಡಿ
  • ಆಹಾರ ಪದ್ಧತಿಯಲ್ಲಿ ಮಾರ್ಪಾಡು: ಕ್ಯಾಲೋರಿ ಸೇವನೆ ಕಡಿಮೆ ಇರಲಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ
  • 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿ. ಉತ್ತಮ ನಿದ್ರೆ ಹಲವು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಯಸ್ಸನ್ನು ಹೆಚ್ಚಿಸುತ್ತದೆ. ಜೊತೆಗೆ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಈ ಸಲಹೆಗಳು ಕೇವಲ ಸಹಾಯಕ ಮಾರ್ಗದರ್ಶಿಗಳಾಗಿದ್ದು, ಇದು ಸಾರ್ವತ್ರಿಕ ನಿಯಮವಲ್ಲ. ಪ್ರತಿಯೊಬ್ಬರ ದೇಹವು ಭಿನ್ನವಾಗಿರುತ್ತವೆ. ಹಾಗಾಗಿ ನಿಮ್ಮ ದಿನಚರಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ಡಾ. ಸುಧೀರ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ