Milk Powder: ಬೆಳಗಿನ ಹೊತ್ತು ಹಾಲಿನ ಪುಡಿಯಿಂದ ತಯಾರಾದ ಕಾಫಿ, ಚಹಾ ಸೇವಿಸುತ್ತಿದ್ದರೆ ಈ ನಾಲ್ಕು ಅಂಶಗಳ ಬಗ್ಗೆ ಎಚ್ಚರವಿರಲಿ!

| Updated By: ಸಾಧು ಶ್ರೀನಾಥ್​

Updated on: Jun 01, 2022 | 3:29 PM

ಅಸಲಿಗೇ ಮೋಸವೆಂಬಂತೆ ಹಾಲಿನಿಂದಲೇ ಸೃಷ್ಟಿಯಾದರೂ ಹಾಲಿನ ಪುಡಿಯಲ್ಲಿ ಕ್ಯಾಲ್ಷಿಯಂ ಅಂಶವೇ ಇರುವುದಿಲ್ಲ! ಮಾಮೂಲಿ ಹಾಲಿನಲ್ಲಿ ಇರುವುದಕ್ಕಿಂತ ಹಾಲಿನ ಪುಡಿಯಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಯಿರುತ್ತದೆ.

Milk Powder: ಬೆಳಗಿನ ಹೊತ್ತು ಹಾಲಿನ ಪುಡಿಯಿಂದ ತಯಾರಾದ ಕಾಫಿ, ಚಹಾ ಸೇವಿಸುತ್ತಿದ್ದರೆ ಈ ನಾಲ್ಕು ಅಂಶಗಳ ಬಗ್ಗೆ ಎಚ್ಚರವಿರಲಿ!
ಹಾಲಿನ ಪುಡಿಯಿಂದ ತಯಾರಾದ ಕಾಫಿ, ಚಹಾ ಸೇವಿಸುತ್ತಿದ್ದರೆ ಈ ನಾಲ್ಕು ಅಂಶಗಳ ಬಗ್ಗೆ ಎಚ್ಚರವಿರಲಿ!
Follow us on

ಭಾರತದಲ್ಲಿ ವರ್ಗಿಸ್ ಕುರಿಯನ್ ಅವರಿಂದ ಶ್ವೇತ ಕ್ರಾಂತಿ ಆಗಿದ್ದೇ ದೇಶದಲ್ಲಿ ಹಾಲು ಮತ್ತು ಹಾಲಿನ ಪುಡಿ ಯಥೇಚ್ಛವಾಗಿ ದೊರೆಯುತ್ತಿದೆ. ಇದರಿಂದ ದೇಶದಲ್ಲಿ ಹಾಲಿನ ಪುಡಿ ಬಳಕೆಯೂ ಯಾವುದೇ ಎಗ್ಗಿಲ್ಲದೆ ನಡೆದಿದೆ. ಭಾರತದಲ್ಲಿ ಬಹುತೇಕ ಮಂದಿ ಕಾಫಿ ಅಥವಾ ಚಹಾ ಸೇವನೆಯೊಂದಿಗೆ ದಿನ ಆರಂಭಿಸುತ್ತಾರೆ. ಹಾಗೆಯೇ ಬಹುತೇಕ ಮಂದಿ ತಮ್ಮ ಕಾಫಿ, ಟೀಗೆ ತಾಜಾ ಹಾಲನ್ನೇ ಬಳಸುತ್ತಾರೆ. ಆದರೆ ಒಂದಷ್ಟು ಮಂದಿ ಕಾಫಿ, ಚಹಾ ತಯಾರಿಗೆ ಹಾಲಿನ ಪುಡಿ ಬಳಸುತ್ತಾರೆ. ಅಂದರೆ ಹಾಲಿನ ಪುಡಿಯಿಂದ ತಯಾರಿಸಿದ ಕಾಫಿ ಅಥವಾ ಚಹಾ ಸೇವಿಸುತ್ತಾರೆ.

ಅಂದರೆ ಅದರಿಂದ ಅಪಾಯವನ್ನೂ ಆಹ್ವಾನಿಸುತ್ತಿದ್ದಾರೆ ಎಂದರ್ಥ. ಕೆಲವರು ಅಭ್ಯಾಸ ಬಲದಿಂದಲೂ ಹಾಲಿನ ಪುಡಿಯ ಚಹಾ/ಕಾಫಿ ಸೇವಿಸುತ್ತಾರೆ. ಅದೇ ಡೇಂಜರ್! ಅಂತಹವರಿಗೆ ಸದಾ ಹಾಲಿನ ಪುಡಿಯ ಚಹಾ/ಕಾಫಿ ಸೇವನೆಯಿಂದ ಎದುರಾಗುವ ಅಪಾಯಗಳ ಬಗ್ಗೆ ಅರಿವು ಇರುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ ಹಾಲಿನ ಪುಡಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸುವುದರ ಜೊತೆಗೆ ನೇರವಾಗಿ ಹೃದಯಕ್ಕೂ ಅಪಾಯ ತಂದೊಡ್ಡಬಲ್ಲದು. ಬನ್ನೀ ಹಾಲಿನ ಪುಡಿಯ ದುಷ್ಪರಿಣಾಮಗಳ ಬಗ್ಗೆ ಒಂದಷ್ಟು ತಿಳಿಯೋಣ.

ಹಾಲಿನ ಪುಡಿಯಲ್ಲಿ ಶೇ. 88 ಭಾಗ ನೀರು, ಶೇ. 4 ಭಾಗ ಹಾಲಿನ ಕೊಬ್ಬು ಮತ್ತು ಶೇ. 8 ರಷ್ಟು ಪ್ರೋಟಿನ್ ಇರುತ್ತದೆ. ಆದರೆ ಇಲ್ಲಿ ಹಾಲಿನಿಂದಲೇ ಹಾಲಿನ ಪುಡಿಯನ್ನು ತಯಾರಿಸುವಾಗ ಹಾಲನ್ನು ಆವಿ ಮಾಡುತ್ತಾರೆ. ಇದರಿಂದ ಹಾಲಿನ ಪುಡಿ ಕೆನೆಗಟ್ಟುತ್ತಾ ಗಟ್ಟಿಯಾಗತೊಡಗುತ್ತದೆ. ಇದಕ್ಕೆ ಒಂದಷ್ಟು ರಾಸಾಯನಿಕಗಳನ್ನು ಮಿಶ್ರಣ ಮಾಡಿ, ಹಾಲಿನ ಪುಡಿಯನ್ನು ತಯಾರಿಸುತ್ತಾರೆ.

 

  1.  * ಕೊಲೆಸ್ಟ್ರಾಲ್ ಅಧಿಕ: ಹೇಗೆ ನೋಡಿದರೂ ಅಧಿಕ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳಯದ್ದಲ್ಲ. ಅದು ಆರೋಗ್ಯಕ್ಕೆ ಆಘಾತವನ್ನು ತರುವುದು ನಿಶ್ಚಿತ. ಇದು ಹೃದಯಕ್ಕೆ ಬಾಧಕವಾಗಿರುತ್ತದೆ. ಇದು ರಕ್ತ ಪರಿಚಲನೆಗೆ ಬಾಧಕ ತಂದೊಡ್ಡುತ್ತದೆ. ರಕ್ತ ಪರಿಚಲನೆಗೆ ಅಡ್ಡವಾಗುತ್ತದೆ.
  2. * ಮಧು ಮೇಹ ಬಾಧಿತರಿಗಂತೂ ಹಾಲಿನ ಪುಡಿ ಸೇವನೆ ದೊಡ್ಡ ಪ್ರಮಾದವೇ ಸರಿ. ಏಕೆಂದರೆ ಹಾಲಿನ ಪುಡಿಯಲ್ಲಿ ಸಕ್ಕರೆ ಅಂಶ ಅಧಿಕವಾಗಿಯೇ ಇರುತ್ತದೆ.
  3. *  ಡಯಟ್​ ಮಾಡುವವರು ಜಾಗ್ರತೆಯಿಂದಿರಿ: ಹಾಲಿನ ಪುಡಿ ಅಧಿಕ ಕೊಲೆಸ್ಟ್ರಾಲ್ ಇರುವ ಸಿಹಿ ತಿನಿಸು. ಅಂದರೆ ಇದರಲ್ಲಿ ಒಳ್ಳೆಯ ಕೊಬ್ಬು ಇರುವುದಿಲ್ಲ. ಹಾಗಾಗಿ ಇದರಿಂದ ದೇಹಸ ತೂಕ ಹೆಚ್ಚಾಗುತ್ತದೆ. ಅದರಿಂದ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಾ ಸಾಗುತ್ತದೆ.
  4. * ಹಾಲಿನ ಪುಡಿಯಲ್ಲಿ ಕ್ಯಾಲ್ಷಿಯಂ ಇರುವುದಿಲ್ಲ: ಅಸಲಿಗೇ ಮೋಸವೆಂಬಂತೆ ಹಾಲಿನಿಂದಲೇ ಸೃಷ್ಟಿಯಾದರೂ ಹಾಲಿನ ಪುಡಿಯಲ್ಲಿ ಕ್ಯಾಲ್ಷಿಯಂ ಅಂಶವೇ ಇರುವುದಿಲ್ಲ! ಮಾಮೂಲಿ ಹಾಲಿನಲ್ಲಿ ಇರುವುದಕ್ಕಿಂತ ಹಾಲಿನ ಪುಡಿಯಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಯಿರುತ್ತದೆ. ಒಂದು ವೇಳೆ ನೀವು ಹಾಲಿನ ಪುಡಿಯನ್ನು ಸರಿಯಾಗಿ ಸಂಗ್ರಹಿಸಿಡದಿದ್ದರೆ ಅದರಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿ ಆಗುತ್ತದೆ. ಹಾಲಿನಲ್ಲಿ ಇರುವ ಬಿ 5 ಮತ್ತು ಬಿ 12 ಅಂತಹ ಒಳ್ಳೆಯ ಪೋಷಕಾಂಶಗಳು ಹಾಲಿನ ಪುಡಿಯಲ್ಲಿ ಇರುವುದಿಲ್ಲ. ಹಾಲಿನ ಪುಡಿಯಿಂದ ತಯಾರಿಸಿ ಪಾಮನೀಯಗಳು ಆರೋಗ್ಯಕ್ಕೆ ಹಾನಿಕಾರಕ.

ತೆಲುಗುನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ